Does baby sitting make one creative ?
I would say yes…
I was just creating some stuff for my kid on the fly and the 1st half of this poem came out spontaneously. With a bit of additional effort, here I am with my 1st rhymes.
ಚಿಟ್ಟೆಯ ಹಾಡು
ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ
ಎಲ್ಲಿಂದ ಬಂದಿರುವೆ ? || 1||
ರೆಕ್ಕೆಯ ಬಡಿಯುತ
ಮೀಸೆಯ ತಿರುವುತ
ಹಾರುತ ಏರುತ
ಇಳಿಯುತ ಅಲೆಯುತ
ಕಾಡಿಂದ ಬಂದಿರುವೆ || 2||
ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ
ಏನನ್ನು ಕಂಡಿರುವೆ ? || 3 ||
ಬಾನಿನಲ್ಲಿ ಹಕ್ಕಿಯ ಕಂಡೆ
ಬ್ಯಾಣದಲ್ಲಿ ಕೋಣವ ಕಂಡೆ
ಬಿದುರಿನಲ್ಲಿ ಆನೆಯ ಕಂಡೆ
ನೀರಿನಲ್ಲಿ ಆಮೆಯ ಕಂಡೆ
ಕಾಡನು ದಾಟಿ ಹಳ್ಳಿಗೆ ಬಂದೆ || 4 ||
ಹಳ್ಳಿಯಲ್ಲಿ ಮಂದಿಯ ಕಂಡೆ
ಅಂಗಳದಲ್ಲಿ ಮಕ್ಕಳ ಕಂಡೆ
ಮಕ್ಕಳ ಆಟವ ಕಾಣುತ ನಿಂದೆ
ಹಿತ್ತಲಿನಲ್ಲಿ ಆಕಳ ಕಂಡೆ
ಆಕಳ ಕರೆಯುವ ತಂಗಿಯ ಕಂಡೆ || 5 ||
ಚಿಟ್ಟೆ ಚಿಟ್ಟೆ
ಬಣ್ಣದ ಚಿಟ್ಟೆ
ಏತಕೆ ಬಂದಿರುವೆ ? || 6 ||
ಹೂವಿನ ಮಧುವನು ಹೀರಲು ಬಂದೆ
ಹಣ್ಣಿನ ಸಿಹಿಯನು ಸವಿಯಲು ಬಂದೆ
ವಿಧವಿಧ ಬಣ್ಣದ ಹೂವನು ಕಂಡೆ
ಹಳ್ಳಿಯ ಸೊಗಸಿಗೆ ಬೆರಗಾಗಿ ನಿಂದೆ || 7 ||