ಇಂಗ್ಲಿಷ್ ಸರ್ವಮಯ ಆಗಿರುವ ಈಗಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಶಾಲೆಯಲ್ಲಿ ಓದುವ, ಬೆಳೆಯುವ ಮಕ್ಕಳಿಗೆ ಕನ್ನಡ ಮಾತನಾಡುವುದಕ್ಕೆ ಬರುವುದು ಸ್ವಲ್ಪ ಕಷ್ಟಕರವೇ ಸರಿ. ಅಶುದ್ಧ ಕನ್ನಡವನ್ನು ಅದೇ ಸರಿಯೆನ್ನುವ ಮಟ್ಟಿಗೆ ಬಿತ್ತರಿಸುತ್ತಿರುವ ಇಂದಿನ ಟಿವಿ ರೇಡಿಯೋ ಗಳು ಇರುವಾಗ, ಮಕ್ಕಳಿಗೆ ಶುದ್ಧ ಭಾಷೆಯನ್ನು ಕಲಿಸುವುದು ಹೇಗೆ ?
Nursery ಯಲ್ಲಿ ಕಲಿಯುತ್ತಿರುವ ಮಗಳಿಗೆ ಹ-ಕಾರ ಅ-ಕಾರಗಳ , ಲ-ಕಾರ ಳ-ಕಾರಗಳ ಹಾಗೂ ನ-ಕಾರ ಣ-ಕಾರಗಳ ವ್ಯತ್ಯಾಸವನ್ನು ಕಲಿಸಲು ಹೀಗೊಂದು ಪ್ರಯತ್ನ ಮಾಡಿದೆ. ಕೆಳಗೆ ತೋರಿಸಿರುವ ಪುಟ್ಟ ವಾಕ್ಯಗಳನ್ನು ಮಗಳು ಬೇಕಾದಲ್ಲಿ ಒತ್ತು ಕೊಡುತ್ತ ಹೇಳಿಕೊಳ್ಳುವಾಗ, ನನ್ನ ಪ್ರಯತ್ನ ಯಶಸ್ವಿ ಆಗುವ ಹಾಗೆ ಕಾಣುತ್ತಿದೆ.
ಹಕ್ಕಿ ಅಕ್ಕಿ ತಿಂದಿತು
ಹಾಲು ಹಾಳು ಆಯಿತು
ಅಣ್ಣ ಅನ್ನ ತಿಂದ
ಅಣ್ಣ ಹಣ್ಣು ತಿಂದ
ಹೊಳೆಯಲ್ಲಿ ಹುಲ್ಲು ಇದೆ
ಆನೆ ಹಾರುವುದಿಲ್ಲ
ಹಕ್ಕಿ ಹಾರುತ್ತದೆ
ಈ ರೀತಿ ಸಣ್ಣ ಮಕ್ಕಳಿಗೆ ಭಾಷೆಯ ಸೂಕ್ಷ್ಮ ಅಂಶಗಳನ್ನೂ ಕಲಿಸಲು formal methods ಏನಾದರು ಇವೆಯ ?
Nanna doddappa kannada mestharaagiddaru. Avaru ka-vottu heLikodalu ee padya kalisiddaru:
Akka bekku, chakkuli chikkili, ukkina moote mukke mukkitu
Haaruva hakki, chaluvina hakki, onde kokku, yerade rekke.
Thanks Ananth, I remember there was something similar to teach ಕಾಗುಣಿತ also…