ಷ ಕಾರದ ಉಚ್ಚಾರ ಅಸ್ಟು ಕಸ್ಟವೇ ?

ಈ ನಡುವೆ FM ರೇಡಿಯೋದಲ್ಲಿ ಕನ್ನಡ ಪದಗಳ ತಪ್ಪು  ಉಚ್ಚಾರಣೆ ಸಾಮಾನ್ಯವಾಗುತ್ತಾ ಬರುತ್ತಿದೆ. ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಸರಿಯಾಗಿ ಬಳಸುವುದು ಸ್ವಲ್ಪ  ಪ್ರಯಾಸಕರವೇ ಎನ್ನಬಹುದು (ಇಂಥ vs ಇಂತ ಇತ್ಯಾದಿ). ಆದರೆ ಕಷ್ಟ, ಇಷ್ಟ, ಎಷ್ಟು , ಅಷ್ಟು, ಮುಂತಾದ ಪದಗಳನ್ನು ಕಸ್ಟ, ಇಸ್ಟ, ಎಸ್ಟು, ಅಸ್ಟು ಎಂದು ಉಚ್ಚರಿಸುವುದು  ಸರ್ವೇಸಾಮಾನ್ಯವಾಗಿ ಹೋಗಿದೆ.  ಇತರೆ channel ಗಳಲ್ಲಿ ಹೋಗಲಿ ಆದರೆ ಕನ್ನಡವನ್ನು ಮುತುವರ್ಜಿ ಇಂದ ಬಳಸುವ channel ಗಳಲ್ಲೂ ಇದನ್ನು ಕೇಳಿದಾಗ ಷ ಕಾರವನ್ನು  ಉಚ್ಚರಿಸುವುದು ಅಷ್ಟೊಂದು ಕಷ್ಟವೇ ಅನಿಸುತ್ತದೆ. ಅಥವಾ ಇಲ್ಲಿ ಷ ಕಾರವಿದೆಯೆಂದೇ ನಮ್ಮ ಕೆಲ FM ಬಂಧುಗಳಿಗೆ ತಿಳಿಯದೆ ? ಸಾಮಾನ್ಯವಾಗಿ ಭಾಷೆಯು ಬದಲಾವಣೆಗಳನ್ನು ಕಾಣುತ್ತಾ ಮಾರ್ಪಾಡಾಗುತ್ತ  ಬೆಳೆಯುತ್ತದೆಂದು ಕೇಳಿದ್ದೇನೆ. ಇದನ್ನು ಬೆಳವಣಿಗೆ ಎನ್ನಬಹುದೇ ?

One Response to ಷ ಕಾರದ ಉಚ್ಚಾರ ಅಸ್ಟು ಕಸ್ಟವೇ ?

  1. sushilendra kundaragi says:

    ಹೀಗೆ ಒಬ್ಬ ದೂರದರ್ಶನದಲ್ಲಿ ವಾರ್ತೆ ಕೇಳಿ ಹೊರ ಬಂದ, ಸಾಮಾನ್ಯವಾಗಿ ಹರಟೆ ಹೊಡೆಯುವದು ಆ ಪ್ರದೇಶದ ಚಾಳಿ, ಈ ವಾರ್ತಾ ವಾಚಕರಿಗೆ ಹೃಸ್ವಸ್ವರ, ದೀರ್ಘಸ್ವರಗಳೇ ಗೊತ್ತಿಲ್ಲವೆಂದು ಕಾಣುತ್ತದೆ. ಭಾರತ ಎನ್ನುವದನ್ನು ಬಿಟ್ಟು ಬಾರತ ಎಂದು ಬಳಸುತ್ತಾರೆ ಛೇ ಛೇ ಎಂದ.
    ಹೀಗೂ ನಮ್ಮ ಕನ್ನಡವನ್ನು ನಾವು ತಿಳಿದುಕೊಂಡಿದ್ದೇವೆ ಅಂದರೇ ನಾವೆಲ್ಲಿದ್ದೇವೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: