5-1-1-1-ಸಿಂಹವನ್ನು ಜೀವಂತಗೊಳಿಸಿದ ಮೂರ್ಖ ಬ್ರಾಹ್ಮಣರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ನಾಲ್ಕು ಬ್ರಾಹ್ಮಣಪುತ್ರರು ಪರಸ್ಪರ ಮಿತ್ರಭಾವದಿಂದ ವಾಸಿಸುತ್ತಿದ್ದರು. ಅವರಲ್ಲಿ ಮೂವರು ಶಾಸ್ತ್ರಪಾರಂಗತರು ಆದರೆ ಬುದ್ಧಿಹೀನರು ಮತ್ತು ಒಬ್ಬ ಕೇವಲ ಬುದ್ಧಿವಂತ ಆದರೆ ಶಾಸ್ತ್ರವನ್ನು ಬಲ್ಲವನಲ್ಲ. ಆ ಮಿತ್ರರು ಒಮ್ಮೆ ಸಮಾಲೋಚನೆ ನಡೆಸಿದರು – “ದೇಶಾಂತರ ಹೋಗಿ ರಾಜರನ್ನು ಸಂತೋಷಪಡಿಸಿ ಧನವನ್ನು ಗಳಿಸದಿದ್ದರೆ ಈ ವಿದ್ಯೆಯಿಂದೇನು ಪ್ರಯೋಜನ ? ಹಾಗಾಗಿ ನಾವು ಪೂರ್ವ ದೇಶಕ್ಕೆ ಹೋಗೋಣ. “

ಹಾಗೆಯೇ ನಿರ್ಧರಿಸಿ ಸ್ವಲ್ಪ ದೂರ ಹೋದಾಗ ಅವರಲೆಲ್ಲಾ ದೊಡ್ಡವನು ಹೇಳಿದನು – “ನಮ್ಮಲ್ಲಿ ನಾಲ್ಕನೆಯವನು ಮೂಢನು, ಕೇವಲ ಶಾಸ್ತ್ರವನ್ನರಿಯದ ಬುದ್ಧಿವಂತ. ರಾಜನ ಅನುಗ್ರಹವು ವಿದ್ಯೆಯಿಲ್ಲದೆ ಕೇವಲ ಬುದ್ಧಿಯಿಂದ ಲಭಿಸುವುದಿಲ್ಲ. ಆದ್ದರಿಂದ ನಾವು ಸಂಪಾದಿಸಿದನ್ನು ಇವನಿಗೆ ಕೊಡುವುದು ಬೇಡ. ಅವನು ಮನೆಗೆ ಹೋಗಲಿ.“

ಆಗ ಎರಡನೆಯವನು ಹೇಳಿದನು – “ಎಲೈ ಸುಬುದ್ಧಿಯೇ, ನಿನ್ನಲ್ಲಿ ವಿದ್ಯೆ ಇಲ್ಲದಿರುವುದರಿಂದ ನೀನು ಮನೆಗೆ ಹೋಗು.”

ಮೂರನೆಯವನು ಹೇಳಿದನು – “ಹೀಗೆ ಮಾಡುವುದು ಸರಿಯಲ್ಲ. ಏಕೆಂದರೆ ನಾವು ಬಾಲ್ಯದಿಂದ ಒಟ್ಟಿಗೇ ಆಡಿಕೊಂಡು ಬಂದಿದ್ದೇವೆ. ಈ ಮಹಾನುಭಾವನು ನಮ್ಮ ಜೊತೆ ಬರಲಿ ಹಾಗೂ ನಾವು ಸಂಪಾದಿಸಿದ್ದರ ಸಮಭಾಗಿಯಾಗಲಿ. ಇವನು ನಮ್ಮವನು, ಇವನು ಪರಕೀಯನು ಎಂದು ಅಲ್ಪಬುದ್ಧಿಯವರು ಮಾತ್ರ ವಿಚಾರತ್ತಾರೆ. ಉದಾರಬುದ್ಧಿಯುಳ್ಳವರು ಭೂಮಿಯನ್ನೇ ತಮ್ಮ ಕುಟುಂಬವೆಂದು ಕಾಣುತ್ತಾರೆ. ಹಾಗಾಗಿ ಇವನು ನಮ್ಮೊಂದಿಗೆ ಬರಲಿ.”

ಹಾಗೆ ನಿರ್ಧರಿಸಿ ಮಾರ್ಗವನ್ನು ಅನುಸರಿಸಿ ಕಾಡಿನಲ್ಲಿ ಹೋಗುತ್ತಿದ್ದಾಗ ಕೆಲವು ಮೂಳೆಗಳನ್ನು ನೋಡಿದರು. ಆಗ ಒಬ್ಬ ಹೇಳಿದನು – “ಇಂದು ವಿದ್ಯೆಯ ಪರೀಕ್ಷೆಯಾಗಲಿ. ಇಲ್ಲಿ ಯಾವುದೋ ಸತ್ತ ಪ್ರಾಣಿಯ ಮೂಳೆಗಳಿವೆ. ನಮ್ಮ ವಿದ್ಯೆಯ ಪ್ರಭಾವದಿಂದ ಇದಕ್ಕೆ ಜೀವವನ್ನು ತುಂಬಿಸೋಣ. ನಾನು ಮೂಳೆಗಳನ್ನು ಜೋಡಿಸುವೆನು.”

ಅವನು ಉತ್ಸಾಹದಿಂದ ಮೂಳೆಗಳನ್ನು ಜೋಡಿಸಿದನು. ಎರಡನೆಯವನು ಚರ್ಮ, ಮಾಂಸ, ರಕ್ತಗಳನ್ನು ತುಂಬಿಸಿದನು. ಮೂರನೆಯವನು ಅದಕ್ಕೆ ಪ್ರಾಣವನ್ನು ಕೊಡುವಷ್ಟರಲ್ಲಿ ಸುಬುದ್ಧಿಯು ಹೇಳಿದನು – “ತಡೆಯಿರಿ. ನೀವೆಲ್ಲರೂ ಸಿಂಹವನ್ನು ಜೀವಂತಗೊಳಿಸುತ್ತಿದ್ದೀರಿ, ಅದು ಎಲ್ಲರನ್ನೂ ಕೊಂದುಬಿಡುತ್ತದೆ.”

ಆಗ ಮೂರನೆಯವನು ಹೇಳಿದನು – “ಮೂರ್ಖನಾದ ನಿನಗೆ ಧಿಕ್ಕಾರ! ನಾನು ನನ್ನ ವಿದ್ಯೆಯನ್ನು ವ್ಯರ್ಥಮಾಡುವುದಿಲ್ಲ.”

ಸುಬುದ್ಧಿ – “ಹಾಗಿದ್ದರೆ, ಒಂದು ಕ್ಷಣ ತಡೆ, ನಾನು ಮರವನ್ನೇರುತ್ತೇನೆ.”

ನಂತರ ಸಿಂಹಕ್ಕೆ ಜೀವವನ್ನು ಕೊಟ್ಟಾಗ ಅದು ಎದ್ದು ಆ ಮೂವರನ್ನೂ ಕೊಂದಿತು. ಸುಬುದ್ಧಿಯು ಮರದಿಂದ ಇಳಿದು ಮನೆಗೆ ಹೋದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: