5-1-1-10-ಒಂದು ಹೊಟ್ಟೆ ಮತ್ತು ಎರಡು ಕುತ್ತಿಗೆಗಳುಳ್ಳ ಭಾರುಂಡದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಸರೋವರದಲ್ಲಿ ಒಂದು ಹೊಟ್ಟೆ ಆದರೆ ಎರಡು ಕುತ್ತಿಗೆಗಳು ಇರುವ ಭಾರುಂಡ ಎಂಬ ಹೆಸರಿನ ಪಕ್ಷಿಯು ವಾಸಿಸುತ್ತಿತ್ತು. ಸಮುದ್ರ ತೀರದಲ್ಲಿ ಅಲೆಯುತ್ತಿದ್ದ ಅದಕ್ಕೆ ಅಲೆಗಳು ತಂದು ಹಾಕಿದ ಅಮೃತಸದೃಶವಾದ ಹಣ್ಣೊಂದು ಸಿಕ್ಕಿತು. ಅದನ್ನು ತಿನ್ನುತ್ತಾ ಅದು ಹೇಳಿತು – “ಓಹೋ! ಹಿಂದೆ ನಾನು ಸಮುದ್ರದ ಅಲೆಗಳು ತಂದು ಹಾಕಿದ ಅಮೃತಸದೃಶವಾದ ಅನೇಕ ಫಲಗಳನ್ನು ತಿಂದಿರುವೆ. ಆದರೆ ಇದರ ರುಚಿಯು ಅಪೂರ್ವವಾಗಿದೆ. ಇದೇನು ಪಾರಿಜಾತ ಅಥವಾ ಹರಿಚಂದನ ವೃಕ್ಷದ ಫಲವೋ ? ಅಥವಾ ನನಗಾಗಿ ಈ ಅಮೃತಸದೃಶವಾದ ಫಲವನ್ನು ವಿಧಿಯು ತಂದೊದಗಿಸಿದೆಯೋ ?”

ಹೀಗೆ ಅದು ಹೇಳುತ್ತಿದ್ದಾಗ ಅದರ ಎರಡನೆಯ ಮುಖವು ಹೇಳಿತು – “ಹಾಗಾದರೆ, ನನಗೂ ಸ್ವಲ್ಪ ಕೊಡು, ನಾನೂ ಕೂಡ ನಾಲಿಗೆಯಿಂದ ರುಚಿಯನ್ನು ಸವಿಯುವೆನು.”

ಆಗ ಮೊದಲನೆಯ ಮುಖವು ಜೋರಾಗಿ ನಕ್ಕು ಹೇಳಿತು – “ನಮಗೆ ಒಂದೇ ಹೊಟ್ಟೆ ಆದ್ದರಿಂದ ಒಂದೇ ತೃಪ್ತಿಯಾಗುವುದು. ಆದ್ದರಿಂದ ಬೇರೆ ಬೇರೆ ತಿನ್ನುವುದರಿಂದೇನು ಪ್ರಯೋಜನ ? ಉಳಿದದ್ದನ್ನು ಪ್ರಿಯೆಗೆ ಕೊಡೋಣ.”

ಹೀಗೆ ಹೇಳಿ ಅದು ಉಳಿದ ಹಣ್ಣನು ಪ್ರಿಯೆಗೆ ಕೊಟ್ಟಿತು. ಆಗ ಹೆಣ್ಣು ಪಕ್ಷಿ ಸಂತೋಷಗೊಂಡು ಆಲಿಂಗನ, ಚುಂಬನಾದಿಗಳಿಂದ ಹಾಗೂ ಒಳ್ಳೆಯ ನುಡಿಗಳಿಂದ ಅದನ್ನು ಸಂತೋಷಗೊಳಿಸಿತು. ಆ ದಿನದಿಂದ ಎರಡನೆಯ ಮುಖವು ಬಹಳ ಉದ್ವೇಗ ಹಾಗೂ ದುಃಖದಿಂದ ಇರುತ್ತಿತ್ತು. ಒಮ್ಮೆ ಎರಡನೆಯ ಮುಖಕ್ಕೆ ವಿಷಫಲವು ಸಿಕ್ಕಿತು. ಅದನ್ನು ನೋಡಿ ಮೊದಲನೆಯ ಮುಖಕ್ಕೆ ಹೇಳಿತು – “ಎಲೈ ನಿರ್ದಯಿ, ಪುರುಷಾಧಮ, ಪರರನ್ನು ಉಪೇಕ್ಷಿಸುವವನೇ, ನನಗೆ ವಿಷಫಲವು ಸಿಕ್ಕಿದೆ. ನೀನು ನನ್ನ ಅಪಮಾನ ಮಾಡಿದ ಕಾರಣ ಇದನ್ನು ತಿನ್ನುವೆನು.”

ಮೊದಲನೆಯ ಮುಖವು ಹೇಳಿತು – “ಮೂರ್ಖ, ಹಾಗೆ ಮಾಡಬೇಡ, ಹಾಗೆ ಮಾಡಿದರೆ ಇಬ್ಬರೂ ನಾಶವಾಗುತ್ತೇವೆ.”

ಮೊದಲನೆಯ ಮುಖವು ಹೀಗೆ ಹೇಳುತ್ತಿದ್ದ ಹಾಗೆಯೇ ಎರಡನೆಯ ಮುಖವು ಆ ಹಣ್ಣನ್ನು ತಿಂದಿತು. ಹೆಚ್ಚೇನು ಹೇಳುವುದು ? ಇಬ್ಬರೂ ಸತ್ತರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: