5-1-1-6-ಸೋಮಶರ್ಮನ ತಂದೆಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಸ್ವಭಾವಕೃಪಣ ಎಂಬ ಹೆಸರಿನ ಬ್ರಾಹ್ಮಣನು ವಾಸಿಸುತ್ತಿದ್ದನು. ಅವನು ಭಿಕ್ಷೆಯಿಂದ ಪಡೆದ, ತಿಂದು ಉಳಿದ ಹುರಿಹಿಟ್ಟಿನಿಂದ ಮಡಕೆಯನ್ನು ತುಂಬಿಸಿದನು. ಆ ಮಡಕೆಯನ್ನು ನಾಗಕೋಲಿಗೆ ಸಿಕ್ಕಿಸಿ ಅದರ ಕೆಳಗೆ ಮಂಚವನ್ನು ಹಾಕಿ ಸತತವಾಗಿ ಅದನ್ನೇ ನೋಡುತ್ತಾ ಇದ್ದು ರಾತ್ರಿ ಮಲಗಿ ಚಿಂತಿಸಿದನು – ಮಡಕೆಯಲ್ಲಿ ಪೂರ್ಣವಾಗಿ ಹುರಿಹಿಟ್ಟು ತುಂಬಿದೆ. ದುರ್ಭಿಕ್ಷದ ಸಮಯದಲ್ಲಿ ಇದರಿಂದ ನೂರು ರುಪಾಯಿಗಳನ್ನು ಸಂಪಾದಿಸಬಹುದು. ಆ ಹಣದಿಂದ ನಾನು ಎರಡು ಆಡುಗಳನ್ನು ಕೊಳ್ಳಬೇಕು. ಆರು ತಿಂಗಳಿಗೆ ಮರಿ ಹಾಕುವ ಅದರಿಂದ ನನ್ನಲ್ಲಿ ಆಡುಗಳ ಹಿಂಡೇ ಆಗುವುದು. ಅವುಗಳನ್ನು ಮಾರಿ ಅನೇಕ ಗೋವುಗಳನ್ನು ಕೊಳ್ಳುವೆನು. ಗೋವುಗಳಿಂದ ಎಮ್ಮೆಗಳನ್ನು ಮತ್ತು ಎಮ್ಮೆಗಳಿಂದ ಕುದುರೆಗಳನ್ನು ಕೊಳ್ಳುವೆನು. ಕುದುರೆಗಳು ಮರಿಮಾಡಿ ಅನೇಕ ಕುದುರೆಗಳಾಗುತ್ತವೆ. ಅವುಗಳನ್ನು ಮಾರಿ ತುಂಬಾ ಚಿನ್ನವನ್ನು ಪಡೆಯುವನು. ಅದರಿಂದ ಪರಸ್ಪರ ಮುಖಮಾಡಿರುವ ನಾಲ್ಕು ಮನೆಗಳುಳ್ಳ ಭವನವನ್ನು ಕೊಳ್ಳುವೆನು. ಆಗ ಒಬ್ಬ ಬ್ರಾಹ್ಮಣನು ನನ್ನ ಮನೆಗೆ ಬಂದು ವಯಸ್ಸಿಗೆ ಬಂದಿರುವ ರೂಪವತಿಯಾದ ಕನ್ಯೆಯನ್ನು ಕೊಡುವನು. ನಮಗೆ ಒಬ್ಬ ಮಗನಾಗುತ್ತಾನೆ. ಅವನಿಗೆ ಸೋಮಶರ್ಮ ಎಂಬ ಹೆಸರನ್ನು ಇಡುವೆನು. ಅವನು ಅಂಬೆಗಾಲನ್ನು ಇಟ್ಟು ನಡೆಯುವವನಾದಾಗ ನಾನು ಅಶ್ವಶಾಲೆಯ ಹಿಂದೆ ಕುಳಿತು ಓದುತ್ತಿರುತ್ತೇನೆ. ಆಗ ಸೋಮಶರ್ಮ ನನ್ನನ್ನು ನೋಡಿ ತಾಯಿಯಿಂದ ಬಿಡಿಸಿಕೊಂಡು ಹೊರಟು ಅಂಬೆಗಾಲಿಟ್ಟುಕ್ಕೊಂಡು ಕುದುರೆಯ ಗೊರಸಿನ ಸಮೀಪದಿಂದ ನನ್ನ ಬಳಿಗೆ ಬರತೊಡಗುವನು. ಆಗ ನಾನು ಹೆಂಡತಿಗೆ ಕೋಪದಿಂದ – “ಬಾಲಕನನ್ನು ಹಿಡಿದುಕೋ” ಎಂದು ಹೇಳುವೆನು. ಅವಳಿಗೆ ಮನೆಕೆಲಸದ ಮಧ್ಯೆ ನನ್ನ ಮಾತು ಕೇಳಿಸುವುದಿಲ್ಲ. ಆಗ ನಾನು ಎದ್ದು ಕಾಲಿನಿಂದ ಅವಳಿಗೆ ಹೊಡೆಯುವೆನು. ಹಾಗೆ ಮಲಗಿದ್ದ ಅವನು ತನ್ನ ಕಾಲಿನಿಂದ ಹೊಡೆದಾಗ ಮಡಕೆಯು ತುಂಡಾಗಿ ಹಿಟ್ಟೆಲ್ಲಾ ಅವನ ಮೇಲೆ ಬಿದ್ದು ಮೈಯೆಲ್ಲಾ ಬಿಳಿಯಾಯಿತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: