5-1-1-9-1-ರಾಕ್ಷಸನಿಂದ ಹಿಡಿಯಲ್ಪಟ್ಟ ಬ್ರಾಹ್ಮಣನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ದೇವ, ಒಂದು ವನಪ್ರದೇಶದಲ್ಲಿ ಚಂಡಕರ್ಮ ಎಂಬ ರಾಕ್ಷಸನು ವಾಸಿಸುತ್ತಿದ್ದನು. ಒಮ್ಮೆ ಕಾಡಿನಲ್ಲಿ ಅಲೆಯುತ್ತಿದ್ದಾಗ ಅವನಿಗೆ ಒಬ್ಬ ಬ್ರಾಹ್ಮಣನು ಎದುರಾದನು. ಆಗ ರಾಕ್ಷಸನು ಅವನ ಹೆಗಲನ್ನೇರಿ “ಎಲೈ ಬ್ರಾಹ್ಮಣನೇ, ಮುಂದೆ ಹೋಗು” ಎಂದು ಹೇಳಿದನು. ಬ್ರಾಹ್ಮಣನು ಭಯದಿಂದ ಅವನನ್ನು ಎತ್ತಿಕೊಂಡು ನಡೆದನು.

ಕಮಲದ ಒಳಭಾಗದಂತೆ ಮೃದುವಾಗಿರುವ ರಾಕ್ಷಸನ ಕಾಲನ್ನು ಕಂಡು ಬ್ರಾಹ್ಮಣನು ಕೇಳಿದನು – “ನಿನ್ನ ಪಾದಗಳು ಈ ರೀತಿ ಕೋಮಲವಾಗಿ ಏಕಿವೆ ?”

ರಾಕ್ಷಸ – “ನನ್ನದೊಂದು ವ್ರತವಿದೆ, ಒದ್ದೆಯಾದ ಪಾದಗಳನ್ನು ನಾನು ಭೂಮಿಯ ಮೇಲೆ ಇಡುವುದಿಲ್ಲ”

ಅದನ್ನು ಕೇಳಿ ತಾನು ತಪ್ಪಿಸಿಕೊಳ್ಳುವ ಉಪಾಯವನ್ನು ಯೋಚಿಸುತ್ತಾ ಬ್ರಾಹ್ಮಣನು ಸರೋವರವೊಂದನ್ನು ತಲುಪಿದನು. ಆಗ ರಾಕ್ಷಸ – “ನಾನು ಸ್ನಾನವನ್ನು ಮಾಡಿ, ದೇವಾರ್ಚನೆಯನ್ನು ಮುಗಿಸಿ ಬರುವವರೆಗೂ ನೀನು ಈ ಜಾಗವನ್ನು ಬಿಟ್ಟು ಕದಲಬಾರದು.”

ಅವನು ಸ್ನಾನಕ್ಕೆ ಹೋದಾಗ ಬ್ರಾಹ್ಮಣನು ಚಿಂತಿಸಿದನು – “ಖಂಡಿತವಾಗಿಯು ದೇವಾರ್ಚನೆಯಾದ ಮೇಲೆ ಇವನು ನನ್ನನ್ನೇ ತಿನ್ನುವನು. ಹಾಗಾಗಿ ಬೇಗನೆ ಹೊರಟುಹೋಗುವೆನು, ಒದ್ದೆ ಪಾದಗಳಲ್ಲಿ ಇವನು ನನ್ನನ್ನು ಹಿಂಬಾಲಿಸಲಾರ”

ಬ್ರಾಹ್ಮಣನು ಹಾಗೆ ಮಾಡಿದಾಗ ರಾಕ್ಷಸನು ವ್ರತಭಂಗದ ಭಯದಿಂದ ಅವನ ಬೆನ್ನಟ್ಟಲಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: