5-2-ಬ್ರಾಹ್ಮಣ ಮತ್ತು ಏಡಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಬ್ರಹ್ಮದತ್ತ ಎಂಬ ಬ್ರಾಹ್ಮಣನು ವಾಸಿಸುತ್ತಿದ್ದನು. ಕಾರ್ಯನಿಮಿತ್ತ ಗ್ರಾಮಕ್ಕೆ ಹೊರಟ ಅವನಿಗೆ ಅವನ ತಾಯಿಯು ಹೇಳಿದಳು – “ವತ್ಸ, ಒಬ್ಬನೇ ಏಕೆ ಹೋಗುವೆ ? ಸಹಾಯಕ್ಕೆ ಮತ್ತೊಬ್ಬ ಯಾರಾದರೂ ಸಿಗುವರೋ ಎಂದು ನೋಡು”

ಅವನು ನುಡಿದನು – “ಅಮ್ಮ, ಭಯ ಪಡಬೇಡ. ಇದು ತೊಂದರೆಗಳಿಲ್ಲದ ಮಾರ್ಗ. ಕಾರ್ಯನಿಮಿತ್ತ ಏಕಾಂಗಿಯಾಗಿ ಹೋಗುವೆನು.”

ಅವನ ಆ ನಿಶ್ಚಯವನ್ನು ತಿಳಿದ ತಾಯಿ ಸಮೀಪದಲ್ಲಿದ್ದ ಕೊಳದಿಂದ ಒಂದು ಏಡಿಯನ್ನು ತಂದು ಹೇಳಿದಳು – “ನೀನು ಹೋಗಲೇ ಬೇಕೆಂದರೆ ಈ ಏಡಿಯು ನಿನ್ನ ಸಹಾಯಕ್ಕಾಗುತ್ತದೆ. ಇದನ್ನು ಹಿಡಿದುಕೊಂಡು ಹೋಗು.”

ಅವನು ತಾಯಿಯ ಮಾತಿನಂತೆ ಎರಡು ಕೈಗಳಿಂದ ಎತ್ತಿಕೊಂಡು ಕರ್ಪೂರದ ಡಬ್ಬಿಯಲ್ಲಿ ಹಾಕಿ ಚೀಲದಲ್ಲಿಟ್ಟುಕೊಂಡು ಬೇಗನೆ ಹೊರಟನು.

ಹೋಗುತ್ತಿದ್ದ ಅವನು ಬೇಸಿಗೆಯ ಬಿಸಿಲಿನಿಂದ ಬಳಲಿ ಮಾರ್ಗದಲ್ಲಿದ್ದ ಮರದ ನೆರಳಿನಲ್ಲಿ ಮಲಗಿಕೊಂಡನು. ಆಗ ವೃಕ್ಷದ ಪೊಟರೆಯಿಂದ ಹಾವೊಂದು ಅವನ ಬಳಿಗೆ ಬಂತು. ಅದು ತನಗೆ ಸಹಜವಾಗಿ ಪ್ರಿಯವಾದ ಕರ್ಪೂರದ ಗಂಧವನ್ನು ಅನುಸರಿಸಿ, ಅವನನ್ನು ಬಿಟ್ಟು, ಚೀಲದಲ್ಲಿದ್ದ ಕರ್ಪೂರದ ದಬ್ಬಿಯನ್ನು ತಿನ್ನಲಾರಂಭಿಸಿತು. ಆಗ ಅದರಲ್ಲಿದ್ದ ಏಡಿಯು ಕಚ್ಚಿದ್ದರಿಂದ ಸರ್ಪವು ಸತ್ತುಹೋಯಿತು. ಬ್ರಾಹ್ಮಣನು ಎದ್ದು ನೋಡಿದಾಗ ತನ್ನ ಪಕ್ಕದಲ್ಲಿ ಕರ್ಪೂರದ ಡಬ್ಬಿಯ ಮೇಲೆ ಸತ್ತ ಕೃಷ್ಣಸರ್ಪವು ಇತ್ತು. ಅದನ್ನು ನೋಡಿ ಅವನು ಚಿಂತಿಸಿದನು – “ಏಡಿಯೇ ಇದನ್ನು ಕೊಂದಿದೆ”. ಪ್ರಸನ್ನನಾಗಿ ಹೇಳಿದನು – “ನನ್ನ ತಾಯಿಯು ಸತ್ಯವನ್ನೇ ನುಡಿದಳು. ಮನುಷ್ಯನು ಸಹಾಯಕ್ಕೆಂದು ಯಾರನ್ನಾದರೂ ಕರೆದುಕೊಂಡು ಹೋಗಬೇಕು. ಅವಳ ಮಾತಿನಲ್ಲಿ ಶ್ರದ್ಧೆಯಿರಿಸಿದ್ದರಿಂದ ನನಗೆ ಸರ್ಪದಿಂದ ಬರಬಹುದಾದ ಸಾವಿನಿಂದ ಏಡಿಯು ರಕ್ಷಿಸಿತು.

ಈ ಉಕ್ತಿಗಳು ಯೋಗ್ಯವಾಗಿವೆ – ಚಂದ್ರನು ಕ್ಷೀಣಿಸುವಾಗ ಸೂರ್ಯನನ್ನು ಆಶ್ರಯಿಸುತ್ತಾನೆ ಹಾಗೂ ವರ್ಧಿಸುವಾಗ ಸಮುದ್ರವನ್ನು ಉಕ್ಕಿಸುತ್ತಾನೆ. ಹಾಗೆಯೇ ಆಪತ್ತಿನಲ್ಲಿ ಸಹಾಯವನ್ನು ಮಾಡುವವರು ಬೇರೆ ಮತ್ತು ವೃದ್ಧಿಕಾಲದಲ್ಲಿ ಸಂಪತ್ತನ್ನು ಅನುಭವಿಸುವವರು ಬೇರೆ. ಮಂತ್ರ, ತೀರ್ಥ, ಬ್ರಾಹ್ಮಣ, ದೇವ, ಜ್ಯೋತಿಷಿ, ವೈದ್ಯ ಹಾಗೂ ಗುರು – ಇವರಲ್ಲಿ ಯಾರಿಗೆ ಯಾವ ರೀತಿಯ ಭಾವನೆಯಿರುತ್ತದೆಯೋ ಅವರಿಗೆ ಆ ರೀತಿಯ ಸಿದ್ಧಿಯಾಗುತ್ತದೆ.”

ಹೀಗೆ ನುಡಿದ ಆ ಬ್ರಾಹ್ಮಣನು ತಾನು ಹೋಗಬೇಕಾದಲ್ಲಿಗೆ ಹೋದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: