3-11-ಚಿನ್ನದ ಹಿಕ್ಕೆಯನ್ನು ಹಾಕುವ ಪಕ್ಷಿ, ರಾಜ ಹಾಗೂ ಮಂತ್ರಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಪರ್ವತದ ಪ್ರದೇಶದಲ್ಲಿ ದೊಡ್ಡ ಮರವೊಂದಿತ್ತು. ಅಲ್ಲಿ ಸಿಂಧುಕ ಎಂಬ ಹೆಸರಿನ ಪಕ್ಷಿಯೊಂದು ವಾಸಿಸುತ್ತಿತ್ತು. ಅದರ ಹಿಕ್ಕೆಯಿಂದ ಚಿನ್ನವು ಉತ್ಪತ್ತಿಯಾಗುತ್ತಿತ್ತು. ಒಮ್ಮೆ ಬೇಡನೊಬ್ಬನು ಆ ಪ್ರದೇಶಕ್ಕೆ ಬಂದನು. ಆ ಪಕ್ಷಿಯು ಅವನ ಎದುರಿಗೇ ಹಿಕ್ಕೆಯನ್ನು ಹಾಕಿತು. ಹಿಕ್ಕೆಯು ಬೀಳುತ್ತಿದ್ದಾಗಲೇ ಅದು ಚಿನ್ನವಾಗಿ ಬದಲಾಗುತ್ತಿದ್ದುದನ್ನು ನೋಡಿದ ಬೇಡನು ವಿಸ್ಮಯದಿಂದ – “ಓಹೋ! ಬಾಲಕಾನಾಗಿದ್ದಾಗಿನಿಂದ ಬೇಟಗಾರ ವೃತ್ತಿಯನ್ನು ಮಾಡುತ್ತಿರುವ ನನಗೆ ಎಂಭತ್ತು ವರ್ಷಗಳಾಗಿದೆ. ಇಲ್ಲಿಯವರೆಗೆ ಪಕ್ಷಿಯ ಹಿಕ್ಕೆಯಲ್ಲಿ ಚಿನ್ನವನ್ನು ನೋಡಿರಲಿಲ್ಲ.” ಎಂದು ಚಿಂತಿಸಿ ಮರದಲ್ಲಿ ಬಲೆಯನ್ನು ಹೂಡಿದನು.

ಮೂರ್ಖತನದಿಂದ ಆ ಪಕ್ಷಿಯು ಬಲೆಯಿದ್ದರೂ ಕೂಡ ಎಂದಿನಂತೆ ನಿಶ್ಶಂಕೆಯಿಂದ ಅಲ್ಲೇ ಕುಳಿತುಕೊಂಡಿತು. ಕೂಡಲೇ ಬಲೆಯಲ್ಲಿ ಸಿಕ್ಕಿಕೊಂಡಿತು. ಬೇಡನು ಅದನ್ನು ಬಲೆಯಿಂದ ಬಿಡಿಸಿ ಪಂಜರದಲ್ಲಿ ಹಾಕಿ ತನ್ನ ಮನೆಗೆ ತೆಗೆದುಕೊಂಡು ಹೋದನು. ನಂತರ ಹೀಗೆ ಚಿಂತಿಸಿದನು – “ಆಪತ್ತನ್ನು ತಂಡೊದ್ದಬಹುದಾದ ಈ ಪಕ್ಷಿಯಿಂದ ನಾನು ಏನು ತಾನೆ ಮಾಡಲಿ ? ಯಾರಾದರೂ ಇದು ಈ ರೀತಿಯ (ಅಂದರೆ ಚಿನ್ನವನ್ನು ಕೊಡುವ) ಪಕ್ಷಿಯೆಂದು ತಿಳಿದು ರಾಜನಿಗೆ ಹೇಳಿದರೆ ಖಂಡಿತವಾಗಿಯೂ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಹಾಗಾಗಿ ನಾನೇ ಈ ಪಕ್ಷಿಯನ್ನು ರಾಜನಿಗೆ ಕೊಡುವೆನು.” ನಂತರ ಹಾಗೆಯೇ ಮಾಡಿದನು.

ರಾಜನು ಆ ಪಕ್ಷಿಯನ್ನು ನೋಡಿ ಕಮಲದಂತೆ ಅರಳಿದ ಕಣ್ಣು ಹಾಗೂ ಮುಖವುಳ್ಳವನಾಗಿ ಸಂತೋಷಗೊಂಡನು. ಮತ್ತೆ ಹೀಗೆ ಹೇಳಿದನು – ಎಲೈ ರಾಜಪುರುಷರೇ, ಈ ಪಕ್ಷಿಯನ್ನು ಪ್ರಯತ್ನಪೂರ್ವಕವಾಗಿ ರಕ್ಷಿಸಿ. ಯಥೇಚ್ಛವಾಗಿ ಅನ್ನನೀರನ್ನು ಕೊಡಿ”

ಆಗ ಮಂತ್ರಿಯು ಹೇಳಿದನು – “ವಿಶ್ವಾಸಕ್ಕೆ ಯೋಗ್ಯನಲ್ಲದ ಈ ಬೇಡನ ಮಾತಿನಲ್ಲಿ ವಿಶ್ವಾಸವಿರಿಸಿ ಈ ಪಕ್ಷಿಯನ ಬಂಧನದಿಂದ ಏನು ಲಾಭ ? ಎಂದಾರೂ ಪಕ್ಷಿಯ ಹಿಕ್ಕೆಯಲ್ಲಿ ಚಿನ್ನ ಬರುತ್ತದೇನು ? ಆದ್ದರಿಂದ ಈ ಪಕ್ಷಿಯನ್ನು ಪಂಜರದಿಂದ ಮುಕ್ತಗೊಳಿಸಿ”

ಹೀಗೆ ಮಂತ್ರಿಯ ಮಾತಿನಂತೆ ಬಿಡಲ್ಪಟ್ಟ ಆ ಪಕ್ಷಿಯು ಎತ್ತರವಾದ ದ್ವಾರದ ತೋರಣದಲ್ಲಿ ಕುಳಿತು ಚಿನ್ನದ ಹಿಕ್ಕೆಯನ್ನು ಹಾಕಿ – “ಮೊದಲು ನಾನು ಮೂರ್ಖ, ಎರಡನೆಯದಾಗಿ ಬೇಡನು ಮೂರ್ಖನು, ನಂತರ ರಾಜ ಮತ್ತು ಮಂತ್ರಿ ಮೂರ್ಖರು, ನಾವೆಲ್ಲರೂ ಮೂರ್ಖರ ಗುಂಪಿದ್ದಂತೆ” ಎಂಬ ಶ್ಲೋಕವನ್ನು ಹೇಳಿ ಸುಖದಿಂದ ಹಾರಿಹೋಯಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: