3-12-ಸಿಂಹ, ನರಿ ಮತ್ತು ಗುಹೆಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ವನಪ್ರದೇಶದಲ್ಲಿ ಖರನಖರ ಎಂಬ ಸಿಂಹವು ವಾಸಿಸುತ್ತಿತ್ತು. ಒಮ್ಮೆ ಹಸಿವಿನಿಂದ ಅಲ್ಲಿಂದಿಲ್ಲಿಗೆ ಅಲೆಯುತ್ತಿದ್ದ ಅದಕ್ಕೆ ಸ್ವಲ್ಪ ಆಹಾರವೂ ಸಿಗಲಿಲ್ಲ. ಸಂಜೆಯ ಸಮಯದಲ್ಲಿ ಒಂದು ದೊಡ್ಡ ಪರ್ವತದ ಗುಹೆಯನ್ನು ಹೊಕ್ಕು ಚಿಂತಿಸಿತು – “ಖಂಡಿತವಾಗಿಯೂ ರಾತ್ರಿ ಈ ಗುಹೆಗೆ ಯಾವುದಾದರೂ ಪ್ರಾಣಿಯು ಬರುತ್ತದೆ. ಆದ್ದರಿಂದ ನಿಸ್ತಬ್ಧನಾಗಿ ಕುಳಿತುಕೊಳ್ಳುವೆನು. ಈ ಮಧ್ಯೆ ಆ ಗುಹೆಯ ಒಡೆಯನಾದ ದಧಿಪುಚ್ಛ ಎಂಬ ನರಿಯು ಬಂತು. ಅದು ಸಿಂಹವು ಗುಹೆಯೊಳಗೆ ಹೋದ ಹೆಜ್ಜೆಯ ಗುರುತನ್ನು ನೋಡಿತು ಮತ್ತು ಸಿಂಹವು ವಾಪಸ್ಸು ಬಂದ ಗುರುತು ಅದಕ್ಕೆ ಕಾಣಲಿಲ್ಲ.

ನರಿಯು ಹೀಗೆ ಚಿಂತಿಸಿತು – “ಅಯ್ಯೋ! ನಾಶವಾಗಿಹೋದೆ. ಖಂಡಿತವಾಗಿಯು ಒಳಗೆ ಸಿಂಹವಿದೆ. ಏನು ಮಾಡಲಿ ? ಹೇಗೆ ತಿಳಿದುಕೊಳ್ಳಲಿ ?”

ಹೀಗೆ ಯೋಚಿಸಿ ದ್ವಾರದಲ್ಲೇ ನಿಂತು ಹೂಂಕರಿಸಲು ತೊಡಗಿತು – “ಅಹೋ ಬಿಲ, ಅಹೋ ಬಿಲ” ಎಂದು ಹೇಳಿ ಸುಮ್ಮನಾಗಿ ಮತ್ತೆ ಹಾಗೆ ಹೇಳಿ – “ಎಲೈ ಬಿಲವೇ, ನಾನು ಹೊರಗಿನಿಂದ ಬರುವಾಗ ನೀನು ಮಾತನಾಡಿ ನನ್ನನ್ನು ಆಹ್ವಾನಿಸಬೇಕೆಂದು ನಿನ್ನೊಡನೆ ಒಪ್ಪಂದವನ್ನು ಮಾಡಿಕೊಂಡಿದ್ದು ನಿನಗೆ ನೆನಪಿಲ್ಲವೇ ? ನೀನು ನನ್ನನ್ನು ಆಹ್ವಾನಿಸದಿದ್ದರೆ ನಾನು ಬೇರೆ ಬಿಲಕ್ಕೆ ಹೋಗುವೆನು” ಎಂದಿತು.

ಅದನ್ನು ಕೇಳಿದ ಸಿಂಹವು ಚಿಂತಿಸಿತು – “ಈ ಗುಹೆಯು ನಿಜವಾಗಲೂ ಬರುತ್ತಿರುವ ಇವನನ್ನು ಆಹ್ವಾನಿಸುತ್ತದೆ, ಆದರೆ ಇಂದು ನನ್ನ ಭಯದಿಂದ ಮಾತನಾಡುತ್ತಿಲ್ಲವೇನೋ. ಯಾರ ಮನಸ್ಸು ಭಯದಿಂದ ತುಂಬಿರುವುದೋ ಅವರ ಹಸ್ತಪಾದಗಳು ತಮ್ಮ ಕೆಲಸವನ್ನು ಮಾಡುವುದಿಲ್ಲ, ಅವರಿಗೆ ಮಾತು ಹೊರಡುವುದಿಲ್ಲ ಹಾಗೂ ಶರೀರದ ನಡುಕವು ಅಧಿಕವಾಗುತ್ತದೆ. ಆದ್ದರಿಂದ ನಾನೇ ಅವನನ್ನು ಆಹ್ವಾನಿಸಿ ಅವನು ಒಳಬರುವಂತೆ ಮಾಡಿ ತಿನ್ನುವೆನು.”

ಹೀಗೆ ನಿಸ್ಚಯಿಸಿ ಸಿಂಹವು ನರಿಯ ಆಹ್ವಾನವನ್ನು ಮಾಡಿತು. ಆಗ ಸಿಂಹದ ಧ್ವನಿಯಿಂದ ಉಂಟಾದ ಪ್ರತಿಧ್ವನಿಯಿಂದ ಆ ಗುಹೆಯ ದೂರದಲ್ಲಿರುವ ಪ್ರಾಣಿಗಳೆಲ್ಲವೂ ಹೆದರಿಹೋದವು.

ನರಿಯೂ ಕೂಡ ಪಲಾಯನವನ್ನು ಮಾಡುತ್ತಾ ಈ ಶ್ಲೋಕವನ್ನು ಹೇಳಿಕೊಂಡಿತು – “ಆಪತ್ತು ಬರುವ ಮೊದಲೇ ಅದನ್ನು ಯೋಚಿಸಿ ಕಾರ್ಯಕೈಗೊಳ್ಳುವವನು ಪ್ರಶಂಸಗೆ ಒಳಗಾಗುತ್ತಾನೆ. ಹಾಗೆ ಮಾಡದವನ ಪರಿಸ್ಥಿತಿ ಶೋಚನೀಯವಾಗುತ್ತದೆ. ನಾನು ಈ ಕಾಡಿನಲ್ಲಿದ್ದು ಮುಪ್ಪು ಬಂತು ಆದರೆ ಬಿಲವು ಮಾತನಾಡುವುದನ್ನು ಎಂದೂ ಕೇಳಿಲ್ಲ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: