3-13-1-ತುಪ್ಪದಿಂದ ಕುರುಡನಾದ ಬ್ರಾಹ್ಮಣನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಯಜ್ಞದತ್ತ ಎಂಬ ಬ್ರಾಹ್ಮಣನಿದ್ದನು. ವ್ಯಭಿಚಾರಿಣಿಯಾದ ಅವನ ಹೆಂಡತಿ ಬೇರೆಯವನಲ್ಲಿ ಆಸಕ್ತಳಾಗಿ ನಿತ್ಯವೂ ಗಂಡನಿಗೆ ತಿಳಿಯದಂತೆ ಬೆಲ್ಲ ಹಾಗೂ ತುಪ್ಪ ಹಾಕಿದ ಘೃತಪೂರವನ್ನು (ತುಪ್ಪದಲ್ಲಿ ಪಕ್ವವಾದ ಗೋಧಿ ಹಿಟ್ಟಿನ ಒಂದು ಭಕ್ಷ್ಯ – ಶಬ್ದಾರ್ಥ ಕೌಸ್ತುಭ) ಕೊಡುತ್ತಿದ್ದಳು.

ಒಮ್ಮೆ ಅದನ್ನು ನೋಡಿದ ಗಂಡನು ಹೇಳಿದನು – “ಭದ್ರೆ, ನಾನೇನು ನೋಡುತ್ತಿದ್ದೇನೆ ? ಇದನ್ನು ಪ್ರತಿದಿನ ಎಲ್ಲಿಗೆ ಒಯ್ಯುವೆ ? ಸತ್ಯವನ್ನು ಹೇಳು”

ಸಮಯೋಚಿತವಾದ ಕಪಟತನದಿಂದ ಅವಳು ಗಂಡನಿಗೆ – “ಹತ್ತಿರದಲ್ಲೇ ದೇವಿಯ ಮಂದಿರವಿದೆ. ವ್ರತನಿರತಳಾಗಿ ದೇವಿಗೆ ಬಲಿಕೊಡಲು ಈ ವಿಶೇಷವಾದ ಭಕ್ಷ್ಯಗಳನ್ನು ತೆಗೆದುಕೊಂಡು ಹೋಗುತ್ತಿರುವೆ”

ಹೆಂಡತಿಯು ನಿತ್ಯವೂ ಭಕ್ಷ್ಯವಿಶೇಷಗಳನ್ನು ದೇವಿಗೆ ಅರ್ಪಿಸುವಳೆಂದು ತನ್ನ ಪತಿಯು ನಂಬಲಿ ಎಂದು ಅವಳು ತನ್ನ ಪತಿಯು ನೋಡುತ್ತಿರುವ ಹಾಗೆಯೇ ಆ ಎಲ್ಲಾ ಭಕ್ಷ್ಯಗಳನ್ನು ಹಿಡಿದುಕೊಂಡು ದೇವಿಯ ಮಂದಿರಕ್ಕೆ ಹೋದಳು. ಅಲ್ಲಿಗೆ ಹೋಗಿ, ನದಿಯಲ್ಲಿ ಸ್ನಾನವನ್ನು ಮಾಡುತ್ತಿರಲು, ಅವಳ ಗಂಡ ಬೇರೆ ಮಾರ್ಗದಲ್ಲಿ ಅಲ್ಲಿಗೆ ಬಂದು ದೇವಿಯ ವಿಗ್ರಹದ ಹಿಂದೆ ಅಡಗಿ ನಿಂತನು.

ಅವನ ಪತ್ನಿಯು ಸ್ನಾನ ಮಾಡಿ ಮಂದಿರಕ್ಕೆ ಬಂದು, ದೇವಿಗೆ ಸ್ನಾನ, ಗಂಧಾದಿ ಲೇಪನ, ಹೂವು, ಧೂಪ ಮುಂತಾದವುಗಳ್ಳನ್ನು ಅರ್ಪಿಸಿ ನಮಸ್ಕರಿಸಿ ಹೀಗೆ ವಿಜ್ಞಾಪಿಸಿಕೊಂಡಳು – “ದೇವಿ, ನನ್ನ ಗಂಡ ಹೇಗೆ ಕುರುಡನಾಗುವನು? “

ಅದನ್ನು ಕೇಳಿದ್ದ ಬ್ರಾಹ್ಮಣನು ಬೇರೆ ಸ್ವರದಲ್ಲಿ ದೇವಿಯ ಹಿಂದೆ ನಿಂತುಕೊಂಡು ಹೇಳಿದನು – “ನೀನು ಪ್ರತಿದಿನವೂ ಘೃತಪೂರ ಭಕ್ಷ್ಯವನ್ನು ನಿನ್ನ ಗಂಡನಿಗೆ ಕೊಟ್ಟರೆ, ಬೇಗನೆ ಅವನು ಕುರುಡನಾಗುವನು”

ಆ ಕುಲಟೆಯು ಆ ಮೋಸದ ಮಾತುಗಳನ್ನು ನಂಬಿ ಪ್ರತಿದಿನ ಬ್ರಾಹ್ಮಣನಿಗೆ ಆ ಭಕ್ಷ್ಯವನ್ನೇ ಕೊಡುತ್ತಿದ್ದಳು.

ಮತ್ತೊಂದು ದಿನ ಬ್ರಾಹ್ಮಣನು ತನ್ನ ಹೆಂಡತಿಗೆ ಹೇಳಿದನು – “ಭದ್ರೆ, ನನಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ.”

ಅದನ್ನು ಕೇಳಿದ ಅವಳು “ಇದು ದೇವಿಯ ಅನುಗ್ರಹವೇ” ಎಂದು ಚಿಂತಿಸಿದಳು.

ನಂತರ ಅವಳ ಪ್ರಿಯಕರನಾದ ಪರಪುರುಷನು ‘ಕುರುಡನಾದ ಬ್ರಾಹ್ಮಣನು ನನಗೆ ಏನು ತಾನೆ ಮಾಡಿಯಾನು’ ಎಂದು ಧೈರ್ಯದಿಂದ ಪ್ರತಿದಿನ ಬರತೊಡಗಿದನು. ಒಮ್ಮೆ ಅವನು ಮನೆಗೆ ಪ್ರವೇಶಿಸಿ ಹತ್ತಿರ ಬಂದುದನ್ನು ನೋಡಿದ ಬ್ರಾಹ್ಮಣನು ಕೂದಲುಗಳಿಂದ ಅವನನ್ನು ಹಿಡಿದುಕೊಂಡು ಕೋಲಿನಿಂದ, ಕಾಲಿನಿಂದ ಹಾಗೂ ಬೇರೆ ರೀತಿಯಲ್ಲಿ ಅವನಿಗೆ ಹೊಡೆದು ಸಾಯಿಸಿದನು. ಆ ದುಷ್ಟಪತ್ನಿಯ ಮೂಗನ್ನು ಕತ್ತರಿಸಿಬಿಟ್ಟನು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: