3-3-ಇರುವೆ ಹಾಗೂ ಸರ್ಪದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಹುತ್ತದಲ್ಲಿ ದೊಡ್ಡದಾದ ಅತಿದರ್ಪ ಎಂಬ ಹೆಸರಿನ ಕೃಷ್ಣಸರ್ಪವು ಇತ್ತು. ಒಮ್ಮೆ ಅದು ಯಾವಾಗಲೂ ಬಳಸುವ ಮಾರ್ಗವನ್ನು ಬಿಟ್ಟು ಮತ್ತೊಂದು ಸಣ್ಣದಾದ ಮಾರ್ಗವನ್ನು ಅನುಸರಿಸಿ ಹುತ್ತದಿಂದ ಹೊರಗೆ ಬರಲು ಆರಂಭಿಸಿತು. ಶರೀರವು ದಪ್ಪಗಿದ್ದು, ಬಿಲದ್ವಾರವು ಸಣ್ಣದಾಗಿದ್ದರಿಂದ ಹೊರಬರುವಾಗ ಅದರ ಮೈಯಲ್ಲಿ ಗಾಯವಾಯಿತು. ಗಾಯದಿಂದ ಬಂದ ರಕ್ತದ ಗಂಧವನ್ನು ಅನುಸರಿಸಿ ಇರುವೆಗಳು ಎಲ್ಲೆಡೆ ವ್ಯಾಪಿಸಿ ಅದಕ್ಕೆ ಕಚ್ಚತೊಡಗಿದವು. ಹಾವು ಎಷ್ಟು ಇರುವೆಗಳನ್ನು ತಾನೆ ಕೊಲ್ಲಬಲ್ಲದು ಹಾಗೂ ಎಷ್ಟಕ್ಕೆ ಹೊಡೆಯಬಲ್ಲದು ? ಅನೇಕ ಇರುವೆಗಳಿಂದ ಅದರ ಗಾಯವು ವಿಸ್ತಾರಗೊಂಡು, ದೇಹದಲ್ಲೆಲ್ಲಾ ಗಾಯಗಳಾಗಿ ಅತಿದರ್ಪ ಸರ್ಪವು ಸತ್ತುಹೋಯಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: