3-4-1-ಸ್ವರ್ಣಹಂಸ, ಸ್ವರ್ಣಪಕ್ಷಿ ಹಾಗೂ ರಾಜನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ರಾಜ್ಯದಲ್ಲಿ ಚಿತ್ರರಥನೆಂಬ ರಾಜನಿದ್ದನು. ಅವನ ಬಳಿ ಯೋಧರಿಂದ ಸಂರಕ್ಷಿಸಲ್ಪಟ್ಟ ಪದ್ಮಸರೋವರ ಎಂಬ ಸರೋವರವಿತ್ತು. ಅಲ್ಲಿ ಅನೇಕ ಸುವರ್ಣಮಯವಾದ ಹಂಸಗಳಿದ್ದವು. ಆರು ತಿಂಗಳಿಗೊಮ್ಮೆ ಅವು ಒಂದು ಗರಿಯನ್ನು ಉದುರಿಸುತ್ತಿದ್ದವು. ಹೀಗಿರಲು ಒಮ್ಮೆ ಆ ಸರೋವರಕ್ಕೆ ಒಂದು ದೊಡ್ಡ ಸ್ವರ್ಣಮಯವಾದ ಪಕ್ಷಿಯು ಬಂತು. ಅದನ್ನು ನೋಡಿ ಹಂಸಗಳು ಹೇಳಿದವು – “ನಮ್ಮ ಜೊತೆಗೆ ನೀನು ಇರಬಾರದು. ನಾವು ಆರು ತಿಂಗಳಿಗೊಮ್ಮೆ ಒಂದೊಂದು ಗರಿಯನ್ನು ರಾಜನಿಗೆ ಕೊಟ್ಟು ಈ ಸರೋವರವನ್ನು ನಮ್ಮದಾಗಿಸಿಕೊಂಡಿದ್ದೇವೆ.”

ಹೀಗೆ ಅವುಗಳ ಮಧ್ಯೆ ವಾದವುಂಟಾಯಿತು. ಸ್ವರ್ಣಪಕ್ಷಿಯು ರಾಜನ ಬಳಿಗೆ ಹೋಗಿ – “ದೇವ, ಹಂಸಗಳು – ‘ನಾವು ಇಲ್ಲಿ ಯಾರಿಗೂ ವಾಸಮಾಡಲು ಬಿಡುವುದಿಲ್ಲ, ರಾಜನಾದರೂ ಏನು ತಾನೆ ಮಾಡುತ್ತಾನೆ’ ಎಂದು ಹೇಳುತ್ತಿವೆ. ‘ನೀವು  ಹೇಳುತ್ತಿರುವುದು ಸರಿಯಲ್ಲ, ನಾನು ಹೋಗಿ ರಾಜನಿಗೆ ಹೇಳುವೆನು’ ಎಂದು ಹೇಳಿ ಬಂದಿರುವೆನು. ಇದಕ್ಕೆ ಏನು ಮಾಡಬೇಕೆಂದು ನೀವೇ ನಿರ್ಧರಿಸಬೇಕು.”

ಆಗ ರಾಜನು ಸೇವಕರನ್ನು ಕರೆದು – “ಹೋಗಿ, ಎಲ್ಲಾ ಪಕ್ಷಿಗಳನ್ನೂ ಕೊಂದು ತನ್ನಿ.”

ರಾಜನ ಆದೇಶದಂತೆ ಅವರು ಹೊರಟರು. ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಬಂದ ರಾಜಪುರುಷರನ್ನು ನೋಡಿದ ವೃದ್ಧ ಹಂಸವೊಂದು ಹೇಳಿತು – “ಎಲೈ ಬಾಂಧವರೆ, ಅನರ್ಥವಾಯಿತು. ಎಲ್ಲರೂ ಒಂದಾಗಿ ಕೂಡಲೇ ಹಾರಿಹೋಗೋಣ.”

ಅವುಗಳೆಲ್ಲಾ ಹಾಗೆ ಮಾಡಿದವು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: