3-6-ಕಳ್ಳ ಹಾಗೂ ವೃದ್ಧ ವ್ಯಾಪಾರಿಯ ವಧುವಿನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಕಾಮಾತುರನೆಂಬ ವೃದ್ಧ ವ್ಯಾಪಾರಿಯಿದ್ದನು. ಅವನು ತನ್ನ ಹೆಂಡತಿಯು ಸತ್ತ ಮೇಲೆ ಕಾಮತೃಷೆಯಿಂದ ಬಳಲಿ ಒಬ್ಬ ಬಡ ವ್ಯಾಪಾರಿಯ ಮಗಳನ್ನು ತುಂಬಾ ಹಣಕೊಟ್ಟು ಮದುವೆಯಾದನು. ಅವಳಾದರೋ ದುಃಖದಿಂದ ಆ ವೃದ್ಧ ವ್ಯಾಪಾರಿಯನ್ನು ನೋಡಲೂ ಕೂಡ ಅಶಕ್ತಳಾದಳು. ಇದೊಂದು ನುಡಿಯು ಯೋಗ್ಯವಾಗಿದೆ – ತಲೆಯಲ್ಲಿ ಬಿಳಿಕೂದಲಿನ ಸ್ಥಾನವು ಮನುಷ್ಯನಿಗೆ ಅಪಮಾನದ ಸ್ಥಾನವಿದ್ದಂತೆ. ಎಲುಬಿನ ತುಂಡನ್ನು ಏರಿಸಿಟ್ಟಿರುವುದರಿಂದ ಅದು ಚಾಂಡಾಲನ ಬಾವಿಯೆಂದು ಹೇಗೆ ಜನರು ಅದನ್ನು ತ್ಯಜಿಸುವರೋ ಹಾಗೆ ಬಿಳಿಕೂದಲಿರುವವರನ್ನು ತರುಣಿಯರು ದೂರದಿಂದಲೇ ತ್ಯಜಿಸಿಬಿಡುವರು.

ಸಂಕುಚಿತವಾದ ದೇಹವುಳ್ಳ , ಎಡವುತ್ತಿರುವ ನಡಿಗೆಯುಳ್ಳ, ಭಗ್ನವಾಗಿರುವ ಹಲ್ಲುಗಳುಳ್ಳ , ಅಲ್ಲಿಂದಿಲ್ಲಿಗೆ ಹೊರಳುತ್ತಿರುವ ದೃಷ್ಟಿಯುಳ್ಳ, ನಷ್ಟವಾದ ರೂಪವುಳ್ಳ , ಎಂಜಲನ್ನು ಸುರಿಯಿತ್ತಿರುವ ಬಾಯಿಯುಳ್ಳ , ಬಂಧುಜನರು ಎಂದೂ ಮಾತನಾಡಿಸದ, ಪತ್ನಿಯು ಶುಶ್ರೂಷೆಯನ್ನು ಮಾಡದ, ಮಕ್ಕಳೂ ತಿರಸ್ಕರಿಸುವ ಮುದಿತನವನ್ನು ಹೊಂದಿದ ಪುರುಷನಿಗೆ ಧಿಕ್ಕಾರವಿರಲಿ.

ಒಮ್ಮೆ ಆ ವಧುವು ವೃದ್ಧ ವ್ಯಾಪಾರಿಯೊಂದಿಗೆ ಆತನಿಗೆ ಬೆನ್ನು ಮಾಡಿ ಹಾಸಿಗೆಯಲ್ಲಿ ಮಲಗಿರಲು ಅವರ ಮನೆಗೆ ಕಳ್ಳನೊಬ್ಬನು ಬಂದನು. ಕಳ್ಳನನ್ನು ನೋಡಿ ಬೆದರಿದ ಅವಳು ತನ್ನ ವೃದ್ಧ ಪತಿಯನ್ನು ಗಾಢವಾಗಿ ಆಲಿಂಗಿಸಿಕೊಂಡಳು. ಅವನು ವಿಸ್ಮಯದಿಂದ ಪುಳಕಿತನಾಗಿ ಚಿಂತಿಸಿದನು – “ಓಹೋ, ಈಕೆಯೇನು ನನ್ನನ್ನು ತಬ್ಬಿಕೊಳ್ಳುತ್ತಿದ್ದಾಳಲ್ಲಾ ?” ಪರಿಶೀಲಿಸಿ ನೋಡಿದಾಗ ಅವನಿಗೆ ಕಳ್ಳನು ಕಾಣಿಸಿದನು ಮತ್ತು ಅವನು ಯೋಚಿಸಿದನು – “ಖಂಡಿತವಾಗಿಯೂ ಇವಳು ಕಳ್ಳನ ಭಯದಿಂದ ನನ್ನನು ಆಲಿಂಗಿಸಿದ್ದಾಳೆ.”

ಹೀಗೆ ಅರಿತು ಕಳ್ಳನಿಗೆ ಹೇಳಿದನು – “ಯಾರು ನನ್ನನ್ನು ಯಾವಾಗಲೂ ಉದ್ವಿಗ್ನಗೊಳಿಸುತ್ತಾಳೋ ಅವಳು ಇಂದು ನನ್ನನ್ನು ಆಲಿಂಗಿಸಿಕೊಳ್ಳುತ್ತಿದಾಳೆ. ಎಲೈ ಮಂಗಳಕರನೇ, ನನ್ನಲ್ಲಿರುವುದನ್ನೆಲ್ಲಾ ಅಪಹರಿಸು.”

ಅದನ್ನು ಕೇಳಿದ ಕಳ್ಳನು – ನಿನ್ನ ಮನೆಯಲ್ಲಿ ಕದಿಯುವುದಕ್ಕೇನೂ ಇಲ್ಲ, ಇದ್ದಾಗ ಬರುವೆನು ಮತ್ತು ಅವಳು ನಿನ್ನನ್ನು ಆಲಿಂಗಿಸಿಕೊಳ್ಳದಿದ್ದರೆ ಬರುವೆನು.”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: