1-13-ಸೂಚೀಮುಖ-ವಾನರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಪರ್ವತಪ್ರದೇಶದಲ್ಲಿ ಕೋತಿಗಳ ಗುಂಪೊಂದಿತ್ತು. ಒಮ್ಮೆ ಹೇಮಂತ ಋತುವಿನಲ್ಲಿ ಅತಿ ಕಠೋರವಾದ ಗಾಳಿಯ ಸ್ಪರ್ಶದಿಂದ ಅವುಗಳ ಶರೀರವೆಲ್ಲಾ ನಡುಗುತ್ತಿದ್ದಾಗ ಹಿಮಪಾತ ಹಾಗೂ ಮಳೆಯೂ ಬಂದು ಕೋತಿಗಳಿಗೆ ಶಾಂತಿಯಿಲ್ಲದಂತಾಯಿತು. ಆಗ ಕೆಲವು ಕಪಿಗಳು ಬೆಂಕಿಯ ಕಣದಂತೆ ಕಾಣುವ ಗುಲಗಂಜಿಯ ಬೇಜಗಳನ್ನು ಒಂದುಗೂಡಿಸಿ ಬೆಂಕಿಯನ್ನು ತರಲು ಅದರ ಸುತ್ತಲೂ ಕುಳಿತು ಊದತೊಡಗಿದವು. ಅವುಗಳ ವ್ಯರ್ಥಪ್ರಯತ್ನವನ್ನು ನೋಡಿದ ಸೂಚೀಮುಖವೆಂಬ ಪಕ್ಷಿಯು ಹೇಳಿತು – “ಎಲೈ ಕೋತಿಗಳೇ, ನೀವೆಲ್ಲರೂ ಮೂರ್ಖರು. ಇದು ಬೆಂಕಿಯ ಕಣವಲ್ಲ, ಗುಲಗಂಜಿ ಬೇಜಗಳು. ಏಕೆ ವ್ಯರ್ಥಪ್ರಯತ್ನ ಮಾಡುವಿರಿ ? ಇದರಿಂದ ಚಳಿಯಿಂದ ರಕ್ಷಣೆ ಸಿಗುವುದಿಲ್ಲ. ಆದ್ದರಿಂದ ಗಾಳಿಯಿಲ್ಲದ ವನಪ್ರದೇಶವನ್ನೋ, ಗುಹೆಯನ್ನೋ ಅಥವಾ ಗಿರಿಕಂದರವನ್ನೋ ಹುಡುಕಿರಿ. ಇಂದೂ ಕೂಡ ಪ್ರಬಲವಾದ ಮೋಡಗಳು ಕಾಣುತ್ತಿವೆ.”

ಗುಂಪಿನಲ್ಲಿದ್ದ ಒಂದು ವೃದ್ಧ ಮಂಗವು ಹೇಳಿತು – “ಎಲೈ ಮೂರ್ಖ, ನಿನ್ನ ಈ ವ್ಯವಹಾರದಿಂದೇನು ಪ್ರಯೋಜನ ? ಹೊರಟುಹೋಗು. ತನ್ನ ಒಳಿತನ್ನು ಬಯಸುವ ವಿವೇಕಿಯು ಮತ್ತೆ ಮತ್ತೆ ಕೆಲಸದಲ್ಲಿ ಸೋಲುತ್ತಿರುವವರನ್ನು ಹಾಗೂ ಜೂಜಿನಲ್ಲಿ ಸೋತವರನ್ನು ಮಾತನಾಡಿಸಬಾರದು.  ಅಲ್ಲದೆ ವ್ಯರ್ಥಪ್ರಯತ್ನ ಮಾಡುತ್ತಿರುವ ಬೇಡನನ್ನು ಅಥವಾ ವ್ಯಸನಕ್ಕೆ ಗುರಿಯಾಗಿರುವ ಮೂರ್ಖನನ್ನು ಯಾವ ಮೂಢನು ಮಾತನಾಡಿಸುವನೋ ಅವನು ಸೋಲನ್ನು ಕಾಣುತ್ತಾನೆ.”

ಸೂಚೀಮುಖವು ಮಂಗದ ಮಾತನ್ನು ಕೇಳದೆ ಮತ್ತೆ ಮತ್ತೆ ಅವರಿಗೆ – “ಏಕೆ ಹೀಗೆ ಕಷ್ಟಪಡುತ್ತೀರಿ” ಎಂದು ಹೇಳುತಿತ್ತು. ಅದು ಮಾತನ್ನು ನಿಲ್ಲಿಸದಿದ್ದಾಗ ವ್ಯರ್ಥಶ್ರಮದಿಂದ ಕೋಪದಲ್ಲಿದ್ದ ಒಂದು ಮಂಗವು ಆ ಪಕ್ಷಿಯ ರೆಕ್ಕೆಗಳನ್ನು ಹಿಡಿದು ಅದನ್ನು ಕಲ್ಲಿಗೆ ಚಚ್ಚಿ ಸಾಯಿಸಿತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: