1-14-ವಾನರ ಹಾಗೂ ಗುಬ್ಬಚ್ಚಿ ದಂಪತಿ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ವನಪ್ರದೇಶದಲ್ಲಿ ಶಮೀವೃಕ್ಷವಿತ್ತು. ಅದರ ಉದ್ದವಾದ ಕೊಂಬೆಯೊಂದರಲ್ಲಿ ಒಂದು ಗುಬ್ಬಚ್ಚಿ ದಂಪತಿಗಳು ವಾಸಿಸುತ್ತಿದ್ದವು. ಅವು ಸುಖವಾಗಿ ವಾಸಿಸುತ್ತಿದ್ದಾಗ ಒಮ್ಮೆ ಹೇಮಂತ ಋತುವಿನಲ್ಲಿ ಮೆಲ್ಲನೆ ಮಳೆಯು ಪ್ರಾರಂಭವಾಯಿತು. ಆಗ ಶೀತಗಾಳಿಯಿಂದ ಹಾಗೂ ಮಳೆಯಿಂದ ನೊಂದ ಮಂಗವೊಂದು ಶರೀರವನ್ನು ಮುದುಡಿಕೊಂಡು ಚಿಳಿಯಿಂದ ಹಲ್ಲುಕಡಿಯುತ್ತಾ ಆ ಶಮೀವೃಕ್ಷದ ಕೆಳಗೆ ಬಂದು ಕುಳಿತುಕೊಂಡಿತು. ಅದನ್ನು ಆ ಸ್ಥಿತಿಯಲ್ಲಿ ನೋಡಿದ ಹೆಣ್ಣು ಗುಬ್ಬಿಯು ಹೇಳಿತು – “ಭದ್ರ, ಹಸ್ತಪಾದಗಳಿಂದ ಕೂಡಿದ ಪುರುಷನಂತೆ ಕಾಣಿಸುತ್ತಿರುವೆ, ಚಳಿಯಿಂದ ತೊಂದರೆಗೊಳಗಾಗಿದ್ದರೂ ಏಕೆ ಮನೆಯನ್ನು ಮಾಡಿಕೊಂಡಿಲ್ಲ ?”

ಅದನ್ನು ಕೇಳಿದ ಮಂಗವು ಕೋಪದಿಂದ – “ಮೂರ್ಖಿ, ಸುಮ್ಮನಿರಲು ಆಗುವುದಿಲ್ಲವೇ ?” ಎಂದು ಹೇಳಿ ಹೀಗೆ ಯೋಚಿಸಿತು –  “ಅಹಾ ಇದರ ದರ್ಪವನ್ನು ನೋಡು. ಸೂಜಿಯಂತೆ ಮುಖವುಳ್ಳ, ದುರಾಚಾರಿಯಾದ ಈ ರಂಡೆ, ಪಂಡಿತಳಂತೆ ನಿಶ್ಯಂಕೆಯಿಂದ ನುಡಿಯುತ್ತಿರುವಳಲ್ಲಾ. ಇವಳನ್ನೇಕೆ ಕೊಲ್ಲಬಾರದು ?”

ಹೀಗೆ ಯೋಚಿಸಿ ಮಂಗವು – “ಮುಗ್ಧೆ, ನನ್ನ ಚಿಂತೆ ನಿನಗೇಕೆ ? ಶ್ರದ್ಧೆಯಿರುವ ಯಾರಾದರು ಕೇಳಿದಾಗ ನುಡಿಯಬೇಕೇ ಹೊರತು ಶ್ರದ್ಧೆಯಿಲ್ಲದವನಲ್ಲಿ ನುಡಿಯುವುದು ಅರಣ್ಯರೋದನದಂತೆ ವ್ಯರ್ಥ. ಹೆಚ್ಚೇಕೆ ? ಈ ನಿನ್ನ ದರ್ಪದ ಫಲವನ್ನು ಅನುಭವಿಸು” ಎನ್ನುತ್ತಾ ಶಮೀವೃಕ್ಷವನ್ನೇರಿ ಗುಬ್ಬಿಯು ಯಾವ ಗೂಡಿನಲ್ಲಿ ಕುಳಿತು ಮಾತನಾಡುತ್ತಿತ್ತೋ ಅದನ್ನು ಕಿತ್ತು ತುಂಡು ತುಂಡು ಮಾಡಿ ಎಸೆಯಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: