4-5-ನಂದ – ವರರುಚಿ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದಲ್ಲಿ ಬರುತ್ತದೆ. ಲಬ್ಧಪ್ರಣಾಶದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ದೇಶದಲ್ಲಿ ಪ್ರಸಿದ್ಧನಾದ, ಬಲ ಹಾಗೂ ಪೌರುಷವನ್ನುಳ್ಳ, ಅನೇಕ ರಾಜರ ಕಿರೀಟಗಳ ರತ್ನದ ಪ್ರಭೆಯಿಂದ ಬೆಳಗಿದ ಪಾದಪೀಠವನ್ನುಳ್ಳ, ಶರತ್ಕಾಲದ ಚಂದ್ರನ ಕಿರಣದಂತೆ ನಿರ್ಮಲವಾದ ಯಶಸ್ಸನ್ನುಳ್ಳ, ಸಮುದ್ರದವರೆಗಿನ ಭೂಮಿಯ ಒಡೆಯನಾದ ನಂದ ಎಂಬ ರಾಜನಿದ್ದನು. ಅವನಿಗೆ ಸಕಲಶಾಸ್ತ್ರ ಪಾರಂಗತನಾದ, ತತ್ತ್ವಗಳನ್ನು ಬಲ್ಲ ವರರುಚಿ ಎಂಬ ಸಚಿವನಿದ್ದನು.

ಒಮ್ಮೆ ವರರುಚಿಯ ಹೆಂಡತಿ ಅವನೊಂದಿಗೆ ಪ್ರಣಯಕಲಹದ ಕಾರಣ ಕೋಪಗೊಂಡಳು. ಪ್ರೀತಿಪಾತ್ರಳಾದ ಅವಳನ್ನು ವರರುಚಿಯು ಅನೇಕ ವಿಧಗಳಿಂದ ಸಮಾಧಾನ ಪಡಿಸಿದರೂ ಅವಳು ಪ್ರಸನ್ನಳಾಗಲಿಲ್ಲ. ಆಗ ವರರುಚಿಯು ಹೇಳಿದನು – “ಭದ್ರೆ, ಯಾವ ಕಾರಣದಿಂದ ನಿನಗೆ ಸಂತೋಷವಾಗುತ್ತಿಲ್ಲ ಎಂದು ತಿಳಿಸು, ಅದನ್ನು ನಿಶ್ಚಯವಾಗಿ ಮಾಡುವೆನು.”

ಆಗ ಅವಳು ನುಡಿದಳು – “ನೀನು ತಲೆಯನ್ನು ಬೋಳಿಸಿಕೊಂಡು ನನ್ನ ಕಾಲಿಗೆ ಬಿದ್ದರೆ ನಾನು ಸಂತೋಷಗೊಳ್ಳುವೆನು”. ಅವನು ಹಾಗೆಯೇ ಮಾಡಿದಾಗ ಅವಳು ಸಂತೋಷಗೊಂಡಳು.

ಒಮ್ಮೆ ನಂದನ ಹೆಂಡತಿಯೂ ಅದೇ ರೀತಿ ಕೋಪಗೊಂಡು ಸಮಾಧಾನ ಮಾಡಿದರೂ ಸಂತೋಷಗೊಳ್ಳಲಿಲ್ಲ. ಆಗ ರಾಜನು – “ಭದ್ರೆ, ನಿನ್ನ ಬಿಟ್ಟು ಒಂದು ಕ್ಷಣವೂ ಜೀವಿಸಲಾರೆನು. ನಿನ್ನ ಕಾಲುಗಳಿಗೆ ಬಿದ್ದು ನಿನ್ನನ್ನು ಸಂತೋಷಗೊಳಿಸುವೆನು” ಎಂದನು.

ಆಗ ಅವಳು – “ನಿನ್ನ ಮುಖಕ್ಕೆ ಲಗಾಮನ್ನು ಹಾಕಿ, ನಿನ್ನ ಬೆನ್ನೇರಿ ಸವಾರಿ ಮಾಡುತ್ತಿದ್ದಾಗ ನೀನು ಕುದುರೆಯಂತೆ ಕೆನೆಯಬೇಕು. ಆಗ ನನಗೆ ಸಂತೋಷವಾಗುತ್ತದೆ”.ರಾಜನು ಹಾಗೆಯೇ ಮಾಡಿದನು.

ನಂತರ ಬೆಳಗ್ಗೆ ಸಭೆಯಲ್ಲಿದ್ದ ರಾಜನ ಬಳಿಗೆ ವರರುಚಿಯು ಬಂದನು. ಅವನನ್ನು ನೋಡಿ ರಾಜನು ಕೇಳಿದನು – “ಎಲೈ ವರರುಚಿ, ಏಕಾಗಿ ಪರ್ವದಿನದಂದು ತಲೆಯನ್ನು ಬೋಳಿಸಿಕೊಂಡಿರುವೆ ?”

ವರರುಚಿ – “ಹೆಂಗಸರು ಆಗ್ರಹಿಸಿದರೆ ಮನುಷ್ಯನು ಏನನ್ನು ತಾನೆ ಕೊಡುವುದಿಲ್ಲ ಮತ್ತು ಏನನ್ನು ತಾನೆ ಮಾಡುವುದಿಲ್ಲ ? ಕುದುರೆಯಲ್ಲವರೂ ಕುದುರೆಯಂತೆ ಕೆನೆಯುತ್ತಾರೆ ಮತ್ತು ಪರ್ವದ ದಿನವೂ ಕೂಡ ಕೇಶಮುಂಡನವನ್ನು ಮಾಡಿಕೊಳ್ಳುತ್ತಾರೆ “ ಎಂದು ಹೇಳಿದನು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: