ಅಡವಿಯಲ್ಲಿ ಅಕ್ಷರದಾಟ

September 5, 2013
ಕುವೆಂಪುರವರ ೧೨೦೦ ಪುಟಗಳುಳ್ಳ “ನೆನಪಿನ ದೋಣಿ” ಯಲ್ಲಿ ನೂರಾರು ಕವನಗಳನ್ನು ಓದಿದ ಯಾರಿಗಾದರೂ ತಾನೊಂದು ಪದ್ಯ ಬರೆಯಬೇಕೆಂಬ ಉತ್ಸಾಹ ಬರುವುದು ಸಹಜ. ಅನೇಕ ಬಾರಿ ಕವನದ ವಿಚಾರ ಮನಸ್ಸಿಗೆ ಗೋಚರವಾದರೂ, ಸೂಕ್ತ ಪದಗಳ ಕೊರತೆ ಹಾಗೂ ಛಂದಸ್ಸಿನ ಅಜ್ಞಾನದಿಂದ ಪದ್ಯವೊಂದು ಮೂಡಿರಲಿಲ್ಲ. U.K.G ಯಲ್ಲಿ ಓದುತ್ತಿರುವ ಮಗಳ ಅಕ್ಷರಮಾಲೆಯನ್ನು ಪರಿಚಯಿಸುವ ಪುಸ್ತಕವನ್ನು ನೋಡುತ್ತಿದ್ದಾಗ, ಕೆಳಕಂಡ ಶಿಶುಕವನಮೊಂದು ಸರಾಗವಾಗಿ ಮೂಡಿಬಂತು.

ಅಡವಿಯಲ್ಲಿ ಅಕ್ಷರದಾಟ
ಎಂಬ ಅಡವಿಯಲ್ಲಿ ಆಟವೊಂದು ನಡೆದಿದೆ

ಎಂಬ ಆನೆಯು ಓಡಿಯೋಡಿ ಬರುತಿದೆ

ಎಂಬ ಇರುವೆಯ ಗೂಡು ತುಳಿದು ನಡೆದಿದೆ

ಎಂಬ ಈಜಿನಲ್ಲಿ ಆಮೆ ಮಗ್ನವಾಗಿದೆ

ಎಂಬ ಉರಗವು ಹೆಡೆಯ ಬಿಚ್ಚಿ ನೋಡಿದೆ

ಎಂಬ ಊರಿನಲ್ಲೂ ಕಾಡ ಗಲಭೆ ಕೇಳಿದೆ

ಎಂಬ ಋತುವಿನಲ್ಲಿ ಸಣ್ಣ ಮಳೆಯು ಬರುತಿದೆ

ಎಂಬ ಎತ್ತು ಹೆದರಿ ಊರಕಡೆಗೆ ಓಡಿದೆ

ಎಂಬ ಏಡಿಯು ಆನೆ ಬೆರಳ ಕಡಿದಿದೆ

ಎಂಬ ಐಸಿರಿ ಕಾಡ ಸುತ್ತ ಹರಡಿದೆ

ಎಂಬ ಒಂಟೆಯು ಬೆದರಿ ಕಾಲನೆತ್ತಿದೆ

ಎಂಬ ಓಟದಲ್ಲಿ ಗೆಲುವು ಯಾರ ಪಾಲಿಗೆ

ಎಂಬ ಔತಣವು ಗೆದ್ದವರಿಗೆ ಕಾದಿದೆ

ಅಂ ಎಂಬ ಅಂಬರವು ಹೂವ ಮಳೆಯ ಸುರಿಸಿದೆ

ಅಃ ಎಂಬ ಅಂತಃಪುರದಂತೆ ಕಾಡು ನಲಿದಿದೆ

ಮಕ್ಕಳಿಗೆ ಕನ್ನಡ ಕಲಿಸುವುದು

December 11, 2011

ಇಂಗ್ಲಿಷ್ ಸರ್ವಮಯ ಆಗಿರುವ ಈಗಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್  ಶಾಲೆಯಲ್ಲಿ ಓದುವ, ಬೆಳೆಯುವ ಮಕ್ಕಳಿಗೆ ಕನ್ನಡ ಮಾತನಾಡುವುದಕ್ಕೆ ಬರುವುದು ಸ್ವಲ್ಪ ಕಷ್ಟಕರವೇ ಸರಿ. ಅಶುದ್ಧ ಕನ್ನಡವನ್ನು ಅದೇ ಸರಿಯೆನ್ನುವ ಮಟ್ಟಿಗೆ ಬಿತ್ತರಿಸುತ್ತಿರುವ ಇಂದಿನ ಟಿವಿ ರೇಡಿಯೋ ಗಳು ಇರುವಾಗ, ಮಕ್ಕಳಿಗೆ ಶುದ್ಧ ಭಾಷೆಯನ್ನು ಕಲಿಸುವುದು ಹೇಗೆ ?

Nursery ಯಲ್ಲಿ ಕಲಿಯುತ್ತಿರುವ ಮಗಳಿಗೆ ಹ-ಕಾರ ಅ-ಕಾರಗಳ , ಲ-ಕಾರ ಳ-ಕಾರಗಳ  ಹಾಗೂ ನ-ಕಾರ ಣ-ಕಾರಗಳ ವ್ಯತ್ಯಾಸವನ್ನು ಕಲಿಸಲು ಹೀಗೊಂದು ಪ್ರಯತ್ನ ಮಾಡಿದೆ. ಕೆಳಗೆ ತೋರಿಸಿರುವ ಪುಟ್ಟ ವಾಕ್ಯಗಳನ್ನು ಮಗಳು ಬೇಕಾದಲ್ಲಿ ಒತ್ತು ಕೊಡುತ್ತ ಹೇಳಿಕೊಳ್ಳುವಾಗ, ನನ್ನ ಪ್ರಯತ್ನ ಯಶಸ್ವಿ ಆಗುವ ಹಾಗೆ ಕಾಣುತ್ತಿದೆ.

ಹಕ್ಕಿ ಅಕ್ಕಿ ತಿಂದಿತು
ಹಾಲು ಹಾಳು ಆಯಿತು
ಅಣ್ಣ ಅನ್ನ ತಿಂದ
ಅಣ್ಣ ಹಣ್ಣು ತಿಂದ
ಹೊಳೆಯಲ್ಲಿ ಹುಲ್ಲು ಇದೆ
ಆನೆ ಹಾರುವುದಿಲ್ಲ
ಹಕ್ಕಿ ಹಾರುತ್ತದೆ

ಈ ರೀತಿ ಸಣ್ಣ ಮಕ್ಕಳಿಗೆ ಭಾಷೆಯ ಸೂಕ್ಷ್ಮ  ಅಂಶಗಳನ್ನೂ ಕಲಿಸಲು formal methods ಏನಾದರು ಇವೆಯ ?


गुरवे नमः (Salutations to Guru)

December 12, 2009

गुरुर्ब्रह्मा गुरुर्विष्णुः गुरुर्देवो  महेश्वरः |
गुरुस्साक्षात्  परब्रह्म तस्मै श्रीगुरवे नमः ||

This is probably one of the most common and widely recited shlokas in Indian households and schools. As can be seen, it is very simple; but at the same time, it is often written and recited wrongly.

The above can be re-written after splitting the sandhis as below:

गुरुः ब्रह्मा गुरुः विष्णुः गुरुः देवः महेश्वरः |
गुरुः साक्षात् परब्रह्म तस्मै श्रीगुरवे नमः ||

Here are some examples of common mistakes done in this shloka:

गुरुः looses विसर्ग and becomes just गुरु

and hence, गुरुर्ब्रह्मा or गुरुः ब्रह्मा becomes गुरु ब्रह्मा (similarly with विष्णुः and महेश्वरः)

गुरुस्साक्षात् or गुरुः साक्षात्  becomes गुरुसाक्षात् or गुरुर्साक्षात्

गुरवे  very commonly becomes गुरुवे
(Note that when saluting, चतुर्थी विभक्ति is used for whom salutations are done. चतुर्थी विभक्ति form of गुरु is गुरवे)

परब्रह्म becomes परं ब्रह्म or परब्रह्मा or परब्रह्मः
(Note that in “गुरुः ब्रह्मा”, ब्रह्मा is the प्रथमा विभक्ति एकवचन form of पुल्लिङ्ग (Masculine gender) ब्रह्मन् शब्दः which goes as  ब्रह्मा, ब्रह्माणौ, ब्रह्माणः ‘while in “परब्रह्म” it is the नपुंसकल्लिङ्ग (Neuter gender) form of ब्रह्मन् which goes as ‘ब्रह्म, ब्रह्मणी, ब्रह्माणि’. ब्रह्मा is used to denote the 1st God of the Trinity (Brahma Vishnu Maheshwara), but परब्रह्म is used to denote the Supreme Brahman.

ಕನ್ನಡದಲ್ಲಿ ಈ ಶ್ಲೋಕವನ್ನು ಸಾಮಾನ್ಯವಾಗಿ ಹೀಗೆ ಕಾಣಬಹುದು:

ಗುರು ಬ್ರಹ್ಮ ಗುರು ವಿಷ್ಣು  ಗುರು ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ  ಶ್ರೀಗುರುವೇ ನಮಃ ||

ಮೂಲ ಸಂಸ್ಕೃತ ಶ್ಲೋಕಕ್ಕೆ ಹೋಲಿಸಿದಾಗ ಇದು ಅಶುದ್ಧ ಎನಿಸಿದರೂ, ಕನ್ನಡದ ದೃಷ್ಟಿಯಿಂದ ಇದು almost ಸರಿಯೆನ್ನಬಹುದು! ಗುರುವೇ (ಗುರವೇ ಗೆ ಬದಲಾಗಿ) ಎಂದು ತಪ್ಪಾಗಿ ಬಳಸಿದರೂ, ಕನ್ನಡದ ಮಟ್ಟಿಗೆ ಇದು ಸರಿ. (ಇನ್ನೂ ಸರಿ ಎಂದರೆ ಗುರುವಿಗೆ ನಮಃ ಎನ್ನಬೇಕು, ಸಂಸ್ಕೃತದಲ್ಲಿ ಇದ್ದ ಹಾಗೆ ಚತುರ್ಥೀ ವಿಭಕ್ತಿಯಲ್ಲಿ)


ಹೆಸರಲ್ಲೇನಿದೆ ?

November 19, 2009

ಗೆಳೆಯನೊಬ್ಬನ ಮಗನ ನಾಮಕರಣ ಮುಗಿದಿತ್ತು. ಏನು ಹೆಸರಿಟ್ಟೆ ಎಂದು ಕೇಳಿದಾಗ ‘ಅಭಿ’ ಎಂದ. ಸರಿ, ಪೂರ್ತಿ ಹೆಸರೇನೆಂದೆ. ‘ಅಭಿ’ ಎಂದೇ ಹೇಳಿದ. ಅಭಿ ಎನ್ನುವುದು ಕೇವಲ ಉಪಸರ್ಗ (prefix), ಪೂರ್ಣ ಪದವಲ್ಲ ಏಂಬ ಅರಿವಿದೆಯೇ ಎಂದಾಗ, ಗೊತ್ತು, ಆದರೆ ಎರಡಕ್ಷರದ ಕರೆಯಲು ಸುಲಭವಾದ ಹೆಸರಿದು ಎಂದ. ಅಲ್ಲವೇ ಮತ್ತೆ ? ಸುಲಭವಾಗಿ ಕರೆಯಲಾಗುವ, ಕರೆದಾಗ ಓಗೊಡುವ ಹೆಸರಿದ್ದರೆ ಸಾಕಲ್ಲವೇ ? ಹೆಸರಿಗೆ ಒಂದು ಅರ್ಥವಿರುವುದು ಅಷ್ಟು  ಮಹತ್ವವೇ ? ಇತ್ತೀಚಿನವರೆಗೆ ಸುಮಾರಾಗಿ ಅರ್ಥಪೂರ್ಣವಾದ ಹೆಸರೇ ಇಡಲಾಗುತ್ತಿತ್ತು. ಈಗಿನ trend ಬದಲಾಗಿದೆ. ಇಷ್ಟೊಂದು ಜನರಿಗೆ ಭಿನ್ನವಾದ ಅರ್ಥಪೂರ್ಣವಾದ ಹೆಸರು ಎಲ್ಲಿಂದ ತರೋಣ ? ಉಪಸರ್ಗವೂ ಕಾಲಕ್ರಮೇಣ ಮುಖ್ಯಪದವಾಗಿ ಬದಲಾಗುತ್ತದೇನೋ! ಭಾಷೆಯು ಬೆಳೆಯಬೇಕಲ್ಲವೇ ?


ಪುರಂದರ ವಿಢಲ!

November 11, 2009

ಮೊನ್ನೆ ಅಮೃತವರ್ಷಿಣಿ (FM 100.1) channel ನಲ್ಲಿ ತಮಿಳು ಮೂಲದವರೊಬ್ಬರ ಕರ್ನಾಟಕ ಶಾಸ್ತ್ರೀಯ ಗಾಯನ ಪ್ರಸಾರವಾಗುತಿತ್ತು. ಇನ್ನೇನು channel ಬದಲಿಸಬೇಕೆನ್ನುವಷ್ಟರಲ್ಲಿ ದಾಸರ ಪದವೊಂದು ಶುರುವಾಯಿತು. ಸರಿ ಇದೊಂದನ್ನು ಕೇಳಿ ಬಿಡೋಣ ಎಂದು ಕೇಳುತ್ತಾ ಹೋದೆ. “ವೇಂಕಟಾಚಲ ನಿಲಯಂ ವೈಕುಂಠ ಪುರವಾಸಂ” ಎಂದು ಪ್ರಾರಂಭವಾಗುವ ಕೀರ್ತನೆಯದು. ಬಹುತೇಕ ತಮಿಳರ ಕನ್ನಡ/ಸಂಸ್ಕೃತ ಶಾಸ್ತ್ರೀಯ ಗಾಯನದಲ್ಲಿ ಅನೇಕ ತಪ್ಪುಗಳಿರುತ್ತವೆ ಎಂದು ಅನ್ಯರು ಹೇಳಿದ್ದು ಕೇಳಿದ್ದೆ, ಅದರ ಅನುಭವ ಈಗ ಆಗತೊಡಗಿತು. “ವೈಕುಂಡ ಪುರವಾಸಂ” ಎಂದು ಶುರುವಾದ ಪದ್ಯ “ಪುರಂದರ ವಿಢಲ” ಎಂದು ಕೊನೆಗೊಂಡಾಗ ಶಾಸ್ತ್ರೀಯ ಸಂಗೀತವನ್ನು ಹೀಗೂ ಹಾಡುತ್ತಾರಾ/ಹಾಡಬಹುದ ಎಂದು ಆಶ್ಚರ್ಯ ಹಾಗೊ ಸ್ವಲ್ಪ ಬೇಸರವೂ ಆಯಿತು.

ಜೊತೆಗೆ ದಾಸರ ಮತ್ತೊಂದು ಪದದ ನೆನಪಾಯಿತು – “ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ”. ಇದನ್ನು ಮೇಲೆ ತಿಳಿಸಿದ ಮಹನೀಯರು ಹಾಡಿದರೆ ಹೇಗಿರಬಹುದು ಎಂದು ಯೋಚಿಸಿದಾಗ ನಗು ಬಂತು – “ದಾರಿ ಯಾವುದಯ್ಯ ವೈಕುಂಡಕೆ ದಾರಿ ತೋರಿಸಯ್ಯ” ಎಂದು ದಾರಿ ಕೇಳಿದವನ ಪಾಡು ಏನೆಂದು! ದಾಸರ ಈ ಜಟಿಲ ಪ್ರಶ್ನೆಗೆ ಉತ್ತರ ದೊರೆಯಲು ಅನೇಕ ಜನ್ಮಗಳು ಬೇಕಗಿರುವಾಗ, ಹೀಗೆ ಪ್ರಶ್ನೆಯನ್ನೇ ಸರಿ ಕೇಳದಿದ್ದರೆ ಏನು ಅವಸ್ಥೆ ಎಂದು!


ಷ ಕಾರದ ಉಚ್ಚಾರ ಅಸ್ಟು ಕಸ್ಟವೇ ?

November 7, 2009

ಈ ನಡುವೆ FM ರೇಡಿಯೋದಲ್ಲಿ ಕನ್ನಡ ಪದಗಳ ತಪ್ಪು  ಉಚ್ಚಾರಣೆ ಸಾಮಾನ್ಯವಾಗುತ್ತಾ ಬರುತ್ತಿದೆ. ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಸರಿಯಾಗಿ ಬಳಸುವುದು ಸ್ವಲ್ಪ  ಪ್ರಯಾಸಕರವೇ ಎನ್ನಬಹುದು (ಇಂಥ vs ಇಂತ ಇತ್ಯಾದಿ). ಆದರೆ ಕಷ್ಟ, ಇಷ್ಟ, ಎಷ್ಟು , ಅಷ್ಟು, ಮುಂತಾದ ಪದಗಳನ್ನು ಕಸ್ಟ, ಇಸ್ಟ, ಎಸ್ಟು, ಅಸ್ಟು ಎಂದು ಉಚ್ಚರಿಸುವುದು  ಸರ್ವೇಸಾಮಾನ್ಯವಾಗಿ ಹೋಗಿದೆ.  ಇತರೆ channel ಗಳಲ್ಲಿ ಹೋಗಲಿ ಆದರೆ ಕನ್ನಡವನ್ನು ಮುತುವರ್ಜಿ ಇಂದ ಬಳಸುವ channel ಗಳಲ್ಲೂ ಇದನ್ನು ಕೇಳಿದಾಗ ಷ ಕಾರವನ್ನು  ಉಚ್ಚರಿಸುವುದು ಅಷ್ಟೊಂದು ಕಷ್ಟವೇ ಅನಿಸುತ್ತದೆ. ಅಥವಾ ಇಲ್ಲಿ ಷ ಕಾರವಿದೆಯೆಂದೇ ನಮ್ಮ ಕೆಲ FM ಬಂಧುಗಳಿಗೆ ತಿಳಿಯದೆ ? ಸಾಮಾನ್ಯವಾಗಿ ಭಾಷೆಯು ಬದಲಾವಣೆಗಳನ್ನು ಕಾಣುತ್ತಾ ಮಾರ್ಪಾಡಾಗುತ್ತ  ಬೆಳೆಯುತ್ತದೆಂದು ಕೇಳಿದ್ದೇನೆ. ಇದನ್ನು ಬೆಳವಣಿಗೆ ಎನ್ನಬಹುದೇ ?