ಅಡವಿಯಲ್ಲಿ ಅಕ್ಷರದಾಟ

September 5, 2013
ಕುವೆಂಪುರವರ ೧೨೦೦ ಪುಟಗಳುಳ್ಳ “ನೆನಪಿನ ದೋಣಿ” ಯಲ್ಲಿ ನೂರಾರು ಕವನಗಳನ್ನು ಓದಿದ ಯಾರಿಗಾದರೂ ತಾನೊಂದು ಪದ್ಯ ಬರೆಯಬೇಕೆಂಬ ಉತ್ಸಾಹ ಬರುವುದು ಸಹಜ. ಅನೇಕ ಬಾರಿ ಕವನದ ವಿಚಾರ ಮನಸ್ಸಿಗೆ ಗೋಚರವಾದರೂ, ಸೂಕ್ತ ಪದಗಳ ಕೊರತೆ ಹಾಗೂ ಛಂದಸ್ಸಿನ ಅಜ್ಞಾನದಿಂದ ಪದ್ಯವೊಂದು ಮೂಡಿರಲಿಲ್ಲ. U.K.G ಯಲ್ಲಿ ಓದುತ್ತಿರುವ ಮಗಳ ಅಕ್ಷರಮಾಲೆಯನ್ನು ಪರಿಚಯಿಸುವ ಪುಸ್ತಕವನ್ನು ನೋಡುತ್ತಿದ್ದಾಗ, ಕೆಳಕಂಡ ಶಿಶುಕವನಮೊಂದು ಸರಾಗವಾಗಿ ಮೂಡಿಬಂತು.

ಅಡವಿಯಲ್ಲಿ ಅಕ್ಷರದಾಟ
ಎಂಬ ಅಡವಿಯಲ್ಲಿ ಆಟವೊಂದು ನಡೆದಿದೆ

ಎಂಬ ಆನೆಯು ಓಡಿಯೋಡಿ ಬರುತಿದೆ

ಎಂಬ ಇರುವೆಯ ಗೂಡು ತುಳಿದು ನಡೆದಿದೆ

ಎಂಬ ಈಜಿನಲ್ಲಿ ಆಮೆ ಮಗ್ನವಾಗಿದೆ

ಎಂಬ ಉರಗವು ಹೆಡೆಯ ಬಿಚ್ಚಿ ನೋಡಿದೆ

ಎಂಬ ಊರಿನಲ್ಲೂ ಕಾಡ ಗಲಭೆ ಕೇಳಿದೆ

ಎಂಬ ಋತುವಿನಲ್ಲಿ ಸಣ್ಣ ಮಳೆಯು ಬರುತಿದೆ

ಎಂಬ ಎತ್ತು ಹೆದರಿ ಊರಕಡೆಗೆ ಓಡಿದೆ

ಎಂಬ ಏಡಿಯು ಆನೆ ಬೆರಳ ಕಡಿದಿದೆ

ಎಂಬ ಐಸಿರಿ ಕಾಡ ಸುತ್ತ ಹರಡಿದೆ

ಎಂಬ ಒಂಟೆಯು ಬೆದರಿ ಕಾಲನೆತ್ತಿದೆ

ಎಂಬ ಓಟದಲ್ಲಿ ಗೆಲುವು ಯಾರ ಪಾಲಿಗೆ

ಎಂಬ ಔತಣವು ಗೆದ್ದವರಿಗೆ ಕಾದಿದೆ

ಅಂ ಎಂಬ ಅಂಬರವು ಹೂವ ಮಳೆಯ ಸುರಿಸಿದೆ

ಅಃ ಎಂಬ ಅಂತಃಪುರದಂತೆ ಕಾಡು ನಲಿದಿದೆ

ಶಿಶು ಗೀತೆ

June 13, 2010

Does baby sitting make one creative ?

I would say yes…

I was just creating some stuff for my kid on the fly and the 1st half of this poem came out spontaneously.  With a bit of additional effort, here I am with my 1st rhymes.

ಚಿಟ್ಟೆಯ ಹಾಡು

ಚಿಟ್ಟೆ  ಚಿಟ್ಟೆ
ಬಣ್ಣದ  ಚಿಟ್ಟೆ
ಎಲ್ಲಿಂದ  ಬಂದಿರುವೆ ? || 1||

ರೆಕ್ಕೆಯ  ಬಡಿಯುತ
ಮೀಸೆಯ  ತಿರುವುತ
ಹಾರುತ  ಏರುತ
ಇಳಿಯುತ  ಅಲೆಯುತ
ಕಾಡಿಂದ  ಬಂದಿರುವೆ || 2||

ಚಿಟ್ಟೆ  ಚಿಟ್ಟೆ
ಬಣ್ಣದ  ಚಿಟ್ಟೆ
ಏನನ್ನು  ಕಂಡಿರುವೆ ? || 3 ||

ಬಾನಿನಲ್ಲಿ  ಹಕ್ಕಿಯ  ಕಂಡೆ
ಬ್ಯಾಣದಲ್ಲಿ  ಕೋಣವ  ಕಂಡೆ
ಬಿದುರಿನಲ್ಲಿ  ಆನೆಯ  ಕಂಡೆ
ನೀರಿನಲ್ಲಿ  ಆಮೆಯ  ಕಂಡೆ
ಕಾಡನು  ದಾಟಿ  ಹಳ್ಳಿಗೆ  ಬಂದೆ || 4 ||

ಹಳ್ಳಿಯಲ್ಲಿ  ಮಂದಿಯ  ಕಂಡೆ
ಅಂಗಳದಲ್ಲಿ  ಮಕ್ಕಳ  ಕಂಡೆ
ಮಕ್ಕಳ  ಆಟವ  ಕಾಣುತ  ನಿಂದೆ
ಹಿತ್ತಲಿನಲ್ಲಿ  ಆಕಳ  ಕಂಡೆ
ಆಕಳ  ಕರೆಯುವ  ತಂಗಿಯ  ಕಂಡೆ || 5 ||

ಚಿಟ್ಟೆ  ಚಿಟ್ಟೆ
ಬಣ್ಣದ  ಚಿಟ್ಟೆ
ಏತಕೆ  ಬಂದಿರುವೆ ? || 6 ||

ಹೂವಿನ  ಮಧುವನು  ಹೀರಲು  ಬಂದೆ
ಹಣ್ಣಿನ  ಸಿಹಿಯನು  ಸವಿಯಲು  ಬಂದೆ
ವಿಧವಿಧ  ಬಣ್ಣದ  ಹೂವನು  ಕಂಡೆ
ಹಳ್ಳಿಯ  ಸೊಗಸಿಗೆ  ಬೆರಗಾಗಿ  ನಿಂದೆ || 7 ||