Surya Namaskara Mantras

October 12, 2014

Suryanamaskara is typical done in the sets of 12 and each iteration is usually preceded by a Mantra which involves salutation to Sun using his various names. I have given the Mantras in Kannada as well as Sanskrit here. The short form (which is what is chanted during the Suryanamaskara) and the long form (Shloka from which it is derived) are given here.

Suryanamaskara is usually started by chanting this Shloka:

ಹಿರಣ್ಮಯೇನ ಪಾತ್ರೇಣ ಸತ್ಯಸಾಪಿಹಿತಂ ಮುಖಂ|
ತತ್ ತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ ||

हिरण्मयेन पात्रेण सत्यस्यापिहितं मुखम् |
तत्त्वं पूषन् अपावृणु सत्यधर्माय दृष्टये ||

Each iteration is then preceded by the following Mantras in the order given:

1. ಓಂ ಹ್ರಾಂ ಮಿತ್ರಾಯ ನಮಃ, ॐ ह्रां मित्राय नमः

ಮಿತ್ರಾಯ ಲೋಕಮಿತ್ರಾಯ ಕಂಜ ಮಿತ್ರಾಯ ತೇ ನಮಃ|
ಆಮಿತ್ರಹಾರಿಣೇ ತುಭ್ಯಂ ಭಾಸ್ಕರಾಯ ನಮೋ ನಮಃ||

मित्राय लोकमित्राय कञ्ज मित्राय ते नमः |
आमित्रहारिणे तुभ्यं भास्कराय नमो नमः ||

2. ಓಂ ಹ್ರೀಂ ರವಯೇ ನಮಃ, ॐ ह्रीं रवये नमः

ರವಯೇ ರತ್ನಗರ್ಭಾಯ ರಾಜೀವಾಕ್ಷಾಯ ರಾಜಿನೇ |
ರಾಮಾಯ ರಮಣೀಯಾಯ ಭಾಸ್ಕರಾಯ ನಮೋ ನಮಃ ||

रवये रत्नगर्भाय राजीवाक्षाय राजिने |
रामाय रमणीयाय भास्कराय नमो नमः ||

3. ಓಂ ಹ್ರ್ರೂಂ ಸೂರ್ಯಾಯ ನಮಃ, ॐ ह्रूं सूर्याय नमः

ಸೂರ್ಯಾಯ ಸುರನಾಥಾಯ ಸುಖಾಯ ಸುಖದಾಯ ಚ |
ಸುರೂಪಾಯ ಸುಭೂಷಾಯ ಭಾಸ್ಕರಾಯ ನಮೋ ನಮಃ ||

सूर्याय सुरनाथाय सुखाय सुखदाय च |
सुरूपाय सुभूषाय भास्कराय नमो नमः ||

4. ಓಂ ಹ್ರೈಂ ಭಾನವೇ ನಮಃ, ॐ ह्रैं भानवे नमः

ಭಾನವೇ ಭವದೇಮಾಯ ಭಯಾಯ ಭಯಹಾರಿಣೇ |
ಭೋಗೀಶಾಯ ಭವಜ್ಞಾಯ ಭಾಸ್ಕರಾಯ ನಮೋ ನಮಃ ||

भानवे भवदेवाय भयाय भयहारिणे |
भोगीशाय भवज्ञाय भास्कराय नमो नमः ||

5. ಓಂ ಹ್ರೌಂ ಖಗಾಯ ನಮ:, ॐ ह्रौं खगाय नमः

ಖಗಾಯ ಖಗಹಂತ್ರೇ ಚ ಖದ್ಯೋತಾಯ ಖಗಾಂಶವೇ |
ಖಗರೂಪಾಯ ದೇವಾಯ ಭಾಸ್ಕರಾಯ ನಮೋ ನಮಃ ||

खगाय खगहन्त्रे च खद्योताय खगांशवे |
खगरूपाय देवाय भास्कराय नमो नमः ||

6. ಓಂ ಹ್ರಃ ಪೂಷ್ಣೇ ನಮಃ, ॐ ह्रः पूष्णे नमः

ಪೂಷ್ಣೇತು ಪೂರ್ವಪುಣ್ಯಾಯ ಪುರಾಣ ಪುರುಷಾಯ ಚ |
ಪುಷ್ಕರಾಕ್ಷಾಯ ಪುಣ್ಯಾಯ ಭಾಸ್ಕರಾಯ ನಮೋ ನಮಃ ||

पूष्णे तु पूर्वपुण्याय पुराणपुरुषाय च |
पुष्कराक्ष्याय पुण्याय भास्कराय नमो नमः ||

7. ಓಂ ಹ್ರ್ರಾಂ ಹಿರಣ್ಯಗರ್ಭಾಯ ನಮಃ, ॐ ह्रां हिरयगर्भाय नमः

ಹೇಮವರ್ಣ ಸ್ವರೂಪಾಯ ಕಾಮಕ್ರೋಧ ಹರಾಯ ಚ |
ಹಿರಣ್ಯಗರ್ಭದೇಹಾಯ ಭಾಸ್ಕರಾಯ ನಮೋ ನಮಃ ||

हेमवर्ण स्वरूपाय कामक्रोध हराय च |
हिरण्यगर्भदेहाय भास्कराय नमो नमः ||

8. ಓಂ ಹ್ರೀಂ ಮರಿಚಯೇ ನಮಃ, ॐ ह्रीं मरीचये नमः

ಮರಿಚಯೇ ಮಹೇಶಾಯ ಮಾಧವಾಯ ಮುರಾರಯೇ |
ಮಂತ್ರಾಯ ಮಂತ್ರರಾಜಾಯ ಭಾಸ್ಕರಾಯ ನಮೋ ನಮಃ ||

मरीचये महेशाय माधवाय मुरारये |
मंत्राय मंत्रराजाय भास्कराय नमो नमः ||

9. ಓಂ ಹ್ರ್ರೂಂ ಆದಿತ್ಯಾಯ ನಮಃ, ॐ ह्रूं आदित्याय नमः

ಆದಿತ್ಯಾದಿ ರೂಪಾಯ ಆಕಾಶಪತಯೇ ನಮಃ |
ಆರೋಗ್ಯದಾಯ ಆರ್ಯಾಯ ಭಾಸ್ಕರಾಯ ನಮೋ ನಮಃ ||

आदित्यादि रूपाय आकाशपतये नमः |
आरोग्यदाय आर्याय भास्कराय नमो नमः ||

10. ಓಂ ಹ್ರೈಂ ಸವಿತ್ರೇ ನಮಃ, ॐ ह्रैं सवित्रे नमः

ಸವಿತ್ರೇ ಸರ್ವಲೋಕಾಧಿಪತಯೇ ಸರ್ವದಾಯ ಚ |
ಸರ್ವಾಭೀಷ್ಟ ಪ್ರದೇಚೈವ ಭಾಸ್ಕರಾಯ ನಮೋ ನಮಃ ||

सवित्रे सर्वलोकाधिपतये सर्वदाय च |
सर्वाभीष्ट प्रदेचैव भास्कराय नमो नमः ||

11. ಓಂ ಹ್ರೌಂ ಅರ್ಕಾಯ ನಮ:, ॐ ह्रौं अर्काय नमः

ಅರ್ಕಾಯಾಕ್ಷರ ರೂಪಾಯ ಅಚ್ಯುತಾಯ ಮರಾಯ ಚ |
ಅನ್ನದಾಯನ್ನರೂಪಾಯ ಭಾಸ್ಕರಾಯ ನಮೋ ನಮಃ ||

अर्कायाक्षररूपाय अच्युताय मराय च |
अन्नदायन्नरुपाय भास्कराय नमो नमः ||

12. ಓಂ ಹ್ರಃ ಭಾಸ್ಕರಾಯ ನಮಃ, ॐ ह्रः भास्कराय नमः

ಭಾನೋ ಭಾಸ್ಕರ ಮಾರ್ತಾಂಡ ಚಂಡರಶ್ಮೇ ದಿವಾಕರ |
ಆರೋಗ್ಯಮಾಯುರ್ವಿಜಯಂ ಪುತ್ರಾನ್ ದೇಹಿ ನಮೋಸ್ತುತೇ ||

भानो भास्कर मार्ताण्ड चण्डरश्मे दिवाकर |
आरोग्यमायुर्विजयं पुत्रान् देहि नमोस्तुते ||

Disclaimer:
संस्कृतं न जानामि न जानामि पाणिनिम्।
पदार्थमपि न जानामि क्षमस्व वागीश्वरि॥


Books for Life

September 27, 2014

I have been collecting books (and of course reading them!) for a long time now and realized that lately I have acquired quite a few “complete series” kind of books. Now when my existing book shelf
is unable to accommodate the new additions, I thought of writing about a few books that are close to my heart.

Sriman Mahabharata

This is a monumental work that provides simple Kannada translation of Vyasa Mahabharata. Published by Bharatha Darshana, this work consists of 32 volumes with more than 600 pages in each volume. I have been looking for this kind of work in Kannada which provides just the faithful translation of the original Sanskrit Shlokas and nothing else. Though this work doesn’t list and provide full translation of 100000 Mahabharata Shlokas, it includes quite a few shlokas in each of the version. Bharatha Darshana staff tell me that they have included only the important Shlokas but for the rest only the translation exists in the books. For those who want basic translations without any
interpretation of all 100000 Shlokas of Mahabharata, Gita Press provides such a series, but it is in Hindi.

IMG_5147

This entire series costs Rs. 2300 which comes to around Rs 75 per book. Needless to say that the price is heavily subsidized.

IMG_5148

Srimadvalmiki Ramayana

Last year I purchased this 3 volume series of Valmiki Ramayana in Kannada from Gita Press. These books provide basic Kannada translation of all the 24000 Shlokas from 7 Khandas of Valmiki Ramayana. I am actively reading this work from last year and till now completed Bala, Ayodhya and Aranya Khandas. I always wanted to read and understand the original Shlokas of Ramayana and this book is exactly serving the purpose. I have now acquired enough hold in Sanskrit language that I can follow the Sanskrit Shlokas with some help from the Kannada translation present in this book. I am
thoroughly enjoying this book both from Kavya perspective and the Sanskrit language learning perspective and I usually manage to read and understand at least one Sarga in a day. After reading 3
Khandas, I am realizing that we have been fed with many wrong interpretations of Ramayana which I plan to write about separately some other time.

IMG_5160

This 3 volume set costs around Rs.600 which is of course heavily subsidized considering the paper and printing quality.

Kumaravyasa Bharata

Sometime back I happened to read Kuvempu’s autobiography Nenapina Doniyalli which includes hundreds of his poems. This inspired me to read (and of course write!) Kannada poetry and I bought Kumaravyasa Bharata edited and translated by A R Seturamrao. This book provides Kannada translation/interpretation of Kumaravyasa’s (aka Gadugina Naranappa) epic work Kumaravyasa Bharata aka Gadugina Bharata. In Kumaravyasa Bharata, Kumaravyasa has retold Vyasa Mahabharata in the form of Kannada poetry composed in Bhamini Shatpadi meter. For Kannadigas, this is like what Tulasidas Ramayana is for Hindi speaking population and it used to be the primary source of Mahabharata for my parents’ generation where singing, listening and interpreting the verses from Kumaravyasa Bharata used to be favorite evening pass time in many households.

IMG_5162

The liberal amount of Ganjifa art work throughout the book by Ganjifa Raghupathi Bhatta is an added attraction in this book.

Anything related to Mahabharata must be huge and so is this book comprising of 1300 pages. With high quality paper and printing, this single book costs Rs. 2500. This is the most expensive single
book that I have invested in till now!

Rigveda Samhita

The word Veda is so commonplace to us that I am sure most of us don’t know or never had opportunity to really know what’s in Vedas.  In 1950s, Mysore Maharaja Jayachamarajendra Wadiyar brought together a team of Vidwans led by H. P Venkatrao to provide a version of Rigveda for Kannada speaking population. This monumental work resulted in a series of 36 books which are now being reprinted by Kannada and Culture Department, Government of Karnataka. This book lists each Rigveda Mantra, with word by word listing of the Mantra, description of it from Sayanacharya’s Bhashya, word by word meaning, translation, English translation, special notes and grammar notes.

IMG_5149

This is a collector’s item and over last few years, I have managed to collect all 36 volumes with the intention of reading them after my retirement 🙂 However quite a few retired people are advising me to finish this reading before retirement as their experience tells them that such work can’t be done with reduced mental faculties of old age!

IMG_5150

Each volume has more than 750 pages with high quality print and paper. Each volume is available for a subsidized average price of Rs 250 per volume.

The History and Culture of Indian People

I picked up this series from Bharatiya Vidya Bhavan mainly as a reference book and not really for page-to-page reading. This is a set of 11 books covering Indian History from Vedic age till
Independence.

IMG_5151

IMG_5152

Shivaram Karanthara Sahitya Shreni

This is a series of books over 25 volumes that aims to include the complete works of Kannada writer K Shivaram Karanth. This was published by Kannada and Culture Department, Govt of Karnataka. Most of his novels and plays are included in these books. Each book has 2 novels and when I bought this, each book was available for as low as Rs.50!

IMG_5153

IMG_5154

The complete works of Swami Vivekananda

This is a set of 9 books (when I bought long time back) that includes Swami Vivekananda’s writings, lectures, discourses and more. Published by Advaita Ashrama Kolkata, it is generally available in Ramakrishna Ashram book shops.

IMG_5155

IMG_5156

DVG’s Jnapaka Chitrashale

This is a series of 8 books written by D V Gundappa (of Manku Thimmana Kagga fame) which describe certain aspects of DVG’s association and experiences with different kinds of people whom he came across throughout his life. He has categorized them into different categories like “common people”, “Patrons of Art” etc. This series should give a good insight into the life of DVG
himself.

IMG_5157

IMG_5158

 

 

 


ಮಕ್ಕಳಿಗೆ ಕನ್ನಡ ಕಲಿಸುವುದು

December 11, 2011

ಇಂಗ್ಲಿಷ್ ಸರ್ವಮಯ ಆಗಿರುವ ಈಗಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್  ಶಾಲೆಯಲ್ಲಿ ಓದುವ, ಬೆಳೆಯುವ ಮಕ್ಕಳಿಗೆ ಕನ್ನಡ ಮಾತನಾಡುವುದಕ್ಕೆ ಬರುವುದು ಸ್ವಲ್ಪ ಕಷ್ಟಕರವೇ ಸರಿ. ಅಶುದ್ಧ ಕನ್ನಡವನ್ನು ಅದೇ ಸರಿಯೆನ್ನುವ ಮಟ್ಟಿಗೆ ಬಿತ್ತರಿಸುತ್ತಿರುವ ಇಂದಿನ ಟಿವಿ ರೇಡಿಯೋ ಗಳು ಇರುವಾಗ, ಮಕ್ಕಳಿಗೆ ಶುದ್ಧ ಭಾಷೆಯನ್ನು ಕಲಿಸುವುದು ಹೇಗೆ ?

Nursery ಯಲ್ಲಿ ಕಲಿಯುತ್ತಿರುವ ಮಗಳಿಗೆ ಹ-ಕಾರ ಅ-ಕಾರಗಳ , ಲ-ಕಾರ ಳ-ಕಾರಗಳ  ಹಾಗೂ ನ-ಕಾರ ಣ-ಕಾರಗಳ ವ್ಯತ್ಯಾಸವನ್ನು ಕಲಿಸಲು ಹೀಗೊಂದು ಪ್ರಯತ್ನ ಮಾಡಿದೆ. ಕೆಳಗೆ ತೋರಿಸಿರುವ ಪುಟ್ಟ ವಾಕ್ಯಗಳನ್ನು ಮಗಳು ಬೇಕಾದಲ್ಲಿ ಒತ್ತು ಕೊಡುತ್ತ ಹೇಳಿಕೊಳ್ಳುವಾಗ, ನನ್ನ ಪ್ರಯತ್ನ ಯಶಸ್ವಿ ಆಗುವ ಹಾಗೆ ಕಾಣುತ್ತಿದೆ.

ಹಕ್ಕಿ ಅಕ್ಕಿ ತಿಂದಿತು
ಹಾಲು ಹಾಳು ಆಯಿತು
ಅಣ್ಣ ಅನ್ನ ತಿಂದ
ಅಣ್ಣ ಹಣ್ಣು ತಿಂದ
ಹೊಳೆಯಲ್ಲಿ ಹುಲ್ಲು ಇದೆ
ಆನೆ ಹಾರುವುದಿಲ್ಲ
ಹಕ್ಕಿ ಹಾರುತ್ತದೆ

ಈ ರೀತಿ ಸಣ್ಣ ಮಕ್ಕಳಿಗೆ ಭಾಷೆಯ ಸೂಕ್ಷ್ಮ  ಅಂಶಗಳನ್ನೂ ಕಲಿಸಲು formal methods ಏನಾದರು ಇವೆಯ ?


गुरवे नमः (Salutations to Guru)

December 12, 2009

गुरुर्ब्रह्मा गुरुर्विष्णुः गुरुर्देवो  महेश्वरः |
गुरुस्साक्षात्  परब्रह्म तस्मै श्रीगुरवे नमः ||

This is probably one of the most common and widely recited shlokas in Indian households and schools. As can be seen, it is very simple; but at the same time, it is often written and recited wrongly.

The above can be re-written after splitting the sandhis as below:

गुरुः ब्रह्मा गुरुः विष्णुः गुरुः देवः महेश्वरः |
गुरुः साक्षात् परब्रह्म तस्मै श्रीगुरवे नमः ||

Here are some examples of common mistakes done in this shloka:

गुरुः looses विसर्ग and becomes just गुरु

and hence, गुरुर्ब्रह्मा or गुरुः ब्रह्मा becomes गुरु ब्रह्मा (similarly with विष्णुः and महेश्वरः)

गुरुस्साक्षात् or गुरुः साक्षात्  becomes गुरुसाक्षात् or गुरुर्साक्षात्

गुरवे  very commonly becomes गुरुवे
(Note that when saluting, चतुर्थी विभक्ति is used for whom salutations are done. चतुर्थी विभक्ति form of गुरु is गुरवे)

परब्रह्म becomes परं ब्रह्म or परब्रह्मा or परब्रह्मः
(Note that in “गुरुः ब्रह्मा”, ब्रह्मा is the प्रथमा विभक्ति एकवचन form of पुल्लिङ्ग (Masculine gender) ब्रह्मन् शब्दः which goes as  ब्रह्मा, ब्रह्माणौ, ब्रह्माणः ‘while in “परब्रह्म” it is the नपुंसकल्लिङ्ग (Neuter gender) form of ब्रह्मन् which goes as ‘ब्रह्म, ब्रह्मणी, ब्रह्माणि’. ब्रह्मा is used to denote the 1st God of the Trinity (Brahma Vishnu Maheshwara), but परब्रह्म is used to denote the Supreme Brahman.

ಕನ್ನಡದಲ್ಲಿ ಈ ಶ್ಲೋಕವನ್ನು ಸಾಮಾನ್ಯವಾಗಿ ಹೀಗೆ ಕಾಣಬಹುದು:

ಗುರು ಬ್ರಹ್ಮ ಗುರು ವಿಷ್ಣು  ಗುರು ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ  ಶ್ರೀಗುರುವೇ ನಮಃ ||

ಮೂಲ ಸಂಸ್ಕೃತ ಶ್ಲೋಕಕ್ಕೆ ಹೋಲಿಸಿದಾಗ ಇದು ಅಶುದ್ಧ ಎನಿಸಿದರೂ, ಕನ್ನಡದ ದೃಷ್ಟಿಯಿಂದ ಇದು almost ಸರಿಯೆನ್ನಬಹುದು! ಗುರುವೇ (ಗುರವೇ ಗೆ ಬದಲಾಗಿ) ಎಂದು ತಪ್ಪಾಗಿ ಬಳಸಿದರೂ, ಕನ್ನಡದ ಮಟ್ಟಿಗೆ ಇದು ಸರಿ. (ಇನ್ನೂ ಸರಿ ಎಂದರೆ ಗುರುವಿಗೆ ನಮಃ ಎನ್ನಬೇಕು, ಸಂಸ್ಕೃತದಲ್ಲಿ ಇದ್ದ ಹಾಗೆ ಚತುರ್ಥೀ ವಿಭಕ್ತಿಯಲ್ಲಿ)


ಹೆಸರಲ್ಲೇನಿದೆ ?

November 19, 2009

ಗೆಳೆಯನೊಬ್ಬನ ಮಗನ ನಾಮಕರಣ ಮುಗಿದಿತ್ತು. ಏನು ಹೆಸರಿಟ್ಟೆ ಎಂದು ಕೇಳಿದಾಗ ‘ಅಭಿ’ ಎಂದ. ಸರಿ, ಪೂರ್ತಿ ಹೆಸರೇನೆಂದೆ. ‘ಅಭಿ’ ಎಂದೇ ಹೇಳಿದ. ಅಭಿ ಎನ್ನುವುದು ಕೇವಲ ಉಪಸರ್ಗ (prefix), ಪೂರ್ಣ ಪದವಲ್ಲ ಏಂಬ ಅರಿವಿದೆಯೇ ಎಂದಾಗ, ಗೊತ್ತು, ಆದರೆ ಎರಡಕ್ಷರದ ಕರೆಯಲು ಸುಲಭವಾದ ಹೆಸರಿದು ಎಂದ. ಅಲ್ಲವೇ ಮತ್ತೆ ? ಸುಲಭವಾಗಿ ಕರೆಯಲಾಗುವ, ಕರೆದಾಗ ಓಗೊಡುವ ಹೆಸರಿದ್ದರೆ ಸಾಕಲ್ಲವೇ ? ಹೆಸರಿಗೆ ಒಂದು ಅರ್ಥವಿರುವುದು ಅಷ್ಟು  ಮಹತ್ವವೇ ? ಇತ್ತೀಚಿನವರೆಗೆ ಸುಮಾರಾಗಿ ಅರ್ಥಪೂರ್ಣವಾದ ಹೆಸರೇ ಇಡಲಾಗುತ್ತಿತ್ತು. ಈಗಿನ trend ಬದಲಾಗಿದೆ. ಇಷ್ಟೊಂದು ಜನರಿಗೆ ಭಿನ್ನವಾದ ಅರ್ಥಪೂರ್ಣವಾದ ಹೆಸರು ಎಲ್ಲಿಂದ ತರೋಣ ? ಉಪಸರ್ಗವೂ ಕಾಲಕ್ರಮೇಣ ಮುಖ್ಯಪದವಾಗಿ ಬದಲಾಗುತ್ತದೇನೋ! ಭಾಷೆಯು ಬೆಳೆಯಬೇಕಲ್ಲವೇ ?


ಪುರಂದರ ವಿಢಲ!

November 11, 2009

ಮೊನ್ನೆ ಅಮೃತವರ್ಷಿಣಿ (FM 100.1) channel ನಲ್ಲಿ ತಮಿಳು ಮೂಲದವರೊಬ್ಬರ ಕರ್ನಾಟಕ ಶಾಸ್ತ್ರೀಯ ಗಾಯನ ಪ್ರಸಾರವಾಗುತಿತ್ತು. ಇನ್ನೇನು channel ಬದಲಿಸಬೇಕೆನ್ನುವಷ್ಟರಲ್ಲಿ ದಾಸರ ಪದವೊಂದು ಶುರುವಾಯಿತು. ಸರಿ ಇದೊಂದನ್ನು ಕೇಳಿ ಬಿಡೋಣ ಎಂದು ಕೇಳುತ್ತಾ ಹೋದೆ. “ವೇಂಕಟಾಚಲ ನಿಲಯಂ ವೈಕುಂಠ ಪುರವಾಸಂ” ಎಂದು ಪ್ರಾರಂಭವಾಗುವ ಕೀರ್ತನೆಯದು. ಬಹುತೇಕ ತಮಿಳರ ಕನ್ನಡ/ಸಂಸ್ಕೃತ ಶಾಸ್ತ್ರೀಯ ಗಾಯನದಲ್ಲಿ ಅನೇಕ ತಪ್ಪುಗಳಿರುತ್ತವೆ ಎಂದು ಅನ್ಯರು ಹೇಳಿದ್ದು ಕೇಳಿದ್ದೆ, ಅದರ ಅನುಭವ ಈಗ ಆಗತೊಡಗಿತು. “ವೈಕುಂಡ ಪುರವಾಸಂ” ಎಂದು ಶುರುವಾದ ಪದ್ಯ “ಪುರಂದರ ವಿಢಲ” ಎಂದು ಕೊನೆಗೊಂಡಾಗ ಶಾಸ್ತ್ರೀಯ ಸಂಗೀತವನ್ನು ಹೀಗೂ ಹಾಡುತ್ತಾರಾ/ಹಾಡಬಹುದ ಎಂದು ಆಶ್ಚರ್ಯ ಹಾಗೊ ಸ್ವಲ್ಪ ಬೇಸರವೂ ಆಯಿತು.

ಜೊತೆಗೆ ದಾಸರ ಮತ್ತೊಂದು ಪದದ ನೆನಪಾಯಿತು – “ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ”. ಇದನ್ನು ಮೇಲೆ ತಿಳಿಸಿದ ಮಹನೀಯರು ಹಾಡಿದರೆ ಹೇಗಿರಬಹುದು ಎಂದು ಯೋಚಿಸಿದಾಗ ನಗು ಬಂತು – “ದಾರಿ ಯಾವುದಯ್ಯ ವೈಕುಂಡಕೆ ದಾರಿ ತೋರಿಸಯ್ಯ” ಎಂದು ದಾರಿ ಕೇಳಿದವನ ಪಾಡು ಏನೆಂದು! ದಾಸರ ಈ ಜಟಿಲ ಪ್ರಶ್ನೆಗೆ ಉತ್ತರ ದೊರೆಯಲು ಅನೇಕ ಜನ್ಮಗಳು ಬೇಕಗಿರುವಾಗ, ಹೀಗೆ ಪ್ರಶ್ನೆಯನ್ನೇ ಸರಿ ಕೇಳದಿದ್ದರೆ ಏನು ಅವಸ್ಥೆ ಎಂದು!


ಷ ಕಾರದ ಉಚ್ಚಾರ ಅಸ್ಟು ಕಸ್ಟವೇ ?

November 7, 2009

ಈ ನಡುವೆ FM ರೇಡಿಯೋದಲ್ಲಿ ಕನ್ನಡ ಪದಗಳ ತಪ್ಪು  ಉಚ್ಚಾರಣೆ ಸಾಮಾನ್ಯವಾಗುತ್ತಾ ಬರುತ್ತಿದೆ. ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಸರಿಯಾಗಿ ಬಳಸುವುದು ಸ್ವಲ್ಪ  ಪ್ರಯಾಸಕರವೇ ಎನ್ನಬಹುದು (ಇಂಥ vs ಇಂತ ಇತ್ಯಾದಿ). ಆದರೆ ಕಷ್ಟ, ಇಷ್ಟ, ಎಷ್ಟು , ಅಷ್ಟು, ಮುಂತಾದ ಪದಗಳನ್ನು ಕಸ್ಟ, ಇಸ್ಟ, ಎಸ್ಟು, ಅಸ್ಟು ಎಂದು ಉಚ್ಚರಿಸುವುದು  ಸರ್ವೇಸಾಮಾನ್ಯವಾಗಿ ಹೋಗಿದೆ.  ಇತರೆ channel ಗಳಲ್ಲಿ ಹೋಗಲಿ ಆದರೆ ಕನ್ನಡವನ್ನು ಮುತುವರ್ಜಿ ಇಂದ ಬಳಸುವ channel ಗಳಲ್ಲೂ ಇದನ್ನು ಕೇಳಿದಾಗ ಷ ಕಾರವನ್ನು  ಉಚ್ಚರಿಸುವುದು ಅಷ್ಟೊಂದು ಕಷ್ಟವೇ ಅನಿಸುತ್ತದೆ. ಅಥವಾ ಇಲ್ಲಿ ಷ ಕಾರವಿದೆಯೆಂದೇ ನಮ್ಮ ಕೆಲ FM ಬಂಧುಗಳಿಗೆ ತಿಳಿಯದೆ ? ಸಾಮಾನ್ಯವಾಗಿ ಭಾಷೆಯು ಬದಲಾವಣೆಗಳನ್ನು ಕಾಣುತ್ತಾ ಮಾರ್ಪಾಡಾಗುತ್ತ  ಬೆಳೆಯುತ್ತದೆಂದು ಕೇಳಿದ್ದೇನೆ. ಇದನ್ನು ಬೆಳವಣಿಗೆ ಎನ್ನಬಹುದೇ ?