मानसम् सरः

November 3, 2013
Recently my brother-in-law Krishnamoorthy Bhat, a Sanskrit teacher wrote a collection of verses in Sanskrit describing  the importance and the story behind the Kailas Manasasarovara. Here is a translation attempt of the same in Kannada. Needless to say that all typing/spelling mistakes in the shlokas are mine.१) भरतस्य शिरोभागे चकास्तेsनर्घपर्वतः |

ख्यातोsयम् मुकुटमेवेति रत्नगर्भो नगाधिपः ||

ಭರತಖಂಡದ ಶಿರೋಭಾಗದಲ್ಲಿ ರತ್ನಗಳನ್ನು ತನ್ನ ಒಳಭಾಗದಲ್ಲಿ ಹೊಂದಿರುವ, ಪರ್ವತಗಳಿಗೆ ಅಧಿಪತಿಯಂತಿರುವ  ಶ್ರೇಷ್ಠವಾದ ಶಿಖರವೊಂದು ಮುಕುಟದಂತೆ ಶೋಭಿಸುತ್ತಿದೆ.

२) अस्याद्रेः पश्चिमे भागे वर्तते तत्र मानसम् |
     प्रख्यातम् शक्तिपीठेति देवानामालयम् इदम् ||
ಈ ಪರ್ವತದ ಪಶ್ಚಿಮ ಭಾಗದಲ್ಲಿ ಶಕ್ತಿಪೀಠವೆಂದು ಪ್ರಖ್ಯಾತವಾದ ದೇವತೆಗಳ ಆಲಯದಂತಿರುವ ‘ಮಾನಸ’ ಎಂಬ ಪ್ರದೇಶವಿದೆ.
३) वर्तन्ते ब्रह्मणः पुत्राः वस्तुतो मनसोद्भवाः|
     कुर्वन्त्येते देवकार्यम् मरीचिर्नारदादयः ||
ಒಮ್ಮೆ  ಬ್ರಹ್ಮನ ಪುತ್ರರು, ವಾಸ್ತವಿಕವಾಗಿ ಆತನ ಮಾನಸಪುತ್ರರಾದ ಮರೀಚಿ, ನಾರದ ಮುಂತಾದವರು ದೇವಕಾರ್ಯವನ್ನು ಮಾಡತ್ತಿದ್ದರು.
४) ऐच्छत्तेषु मरीचिस्तु ईक्षितुं शिवपार्वतीम् |
     तस्मादगच्छत्कैलासम् नापश्यत्तत्र शाङ्करम् ||
ಅವರಲ್ಲಿ ಮರೀಚಿಯು ಶಿವಪಾರ್ವತಿಯರನ್ನು ನೋಡಲು ಇಚ್ಛಿಸಿ ಕೈಲಾಸಕ್ಕೆ ಹೋದನು. ಆದರೆ ಶಂಕರನನ್ನು ಅಲ್ಲಿ ಅವನು ಕಾಣಲಿಲ್ಲ.
५) ततोsसौ तत्र स्थित्वा च अकरोत्स महतप: |
     तथैवातीतसमय: होरदिवसवासरम् ||
ಆದ್ದರಿಂದ ಆತನು ಅಲ್ಲಿಯೇ ನೆಲೆಯೂರಿ ಮಹಾತಪಸ್ಸನ್ನು ಮಾಡಲು ಘಂಟೆ, ದಿನ, ವಾರಗಳಷ್ಟು ಸಮಯ ಕಳೆದು ಹೋಯಿತು.
६) एवमतीते काले तु आगते शिशिरे सति |
     अखिलं तत्र संवृत्तम् नीरंतु हिममन्वभूत् ||
ಹೇಗೆ ಕಾಲವು ಕಳೆಯಲು ಶಿಶಿರ ಮಾಸವು ಬಂತು. ಅಲ್ಲಿದ್ದ ಸಂಪೂರ್ಣ ನೀರೂ ಕೂಡ ಹಿಮವಾಗಿಹೋಯಿತು.
७) नामैव सार्थकम् तत्र हिमसद्मेति वस्तुतः |
     किञ्चिज्जलंच न प्राप्तम् तेन पुत्रेण ब्रह्मणः ||
ಹಿಮದ ಆಲಯವೆಂಬ ಪರ್ವತದ ಹೆಸರು ವಾಸ್ತವಿಕವಾಗಿ ನಿಜವಾಗಿಹೋಯಿತು. ಆ ಬ್ರಹ್ಮನ ಪುತ್ರನಿಗೆ ಸ್ವಲ್ಪವೂ ನೀರು ಸಿಗದೆ ಹೋಯಿತು.
८) अतोsसौ प्रर्थयामास मरीचिस्तं प्रजापतिम् |
    स्नानानुष्ठानकर्मभ्यः नीरम् भक्तियुतेन च ||
ಆದ್ದರಿಂದ ಆ ಮರೀಚಿಯು ಸ್ನಾನಾನುಷ್ಟಾನುಕರ್ಮಗಳನ್ನು ಮಾಡಲು ನೀರಿಗಾಗಿ ಪ್ರಜಾಪತಿಯನ್ನು ಭಕ್ತಿಯಿಂದ ಪ್ರಾರ್ಥಿಸಿದನು.
९) श्रुत्वा च प्रार्थनां तस्य प्रत्यक्षोsभूत्प्रजापतिः |
     इच्छानुसारं पुत्रस्य लोकस्य मङ्गलाय च ||
ಅವನ ಪ್ರಾಥನೆಯನ್ನು ಕೇಳಿ, ಆತನ ಇಚ್ಛೆಗನುಗುಣವಾಗಿ, ಪುತ್ರನ ಹಾಗೂ ಲೋಕದ ಮಂಗಳಕ್ಕಾಗಿ ಪ್ರಜಾಪತಿಯು ಪ್ರತ್ಯಕ್ಷನಾದನು.
१०) निनर्म मनसा सो हि कासारम् सर्वहिताय च |
       वर्तते उन्नते स्थाने असामान्य विशालता ||
ಉನ್ನತ ಸ್ಥಾನದಲ್ಲಿರುವ, ಅಸಾಮಾನ್ಯ ವಿಶಾಲತೆಯನ್ನು ಹೊಂದಿರುವ ಸರೋವರವೊಂದನ್ನು ಎಲ್ಲರ ಹಿತಕ್ಕಾಗಿ ಆತನು ಮನಸ್ಸಿನ್ನಿಂದ ನಿರ್ಮಿಸಿದನು.
११) पावित्र् येण युतञ्चास्ति माधुर्येण युतं जलम् |
       शुद्धस्फटिकसदृशम् नीलवर्णयुतं च तत् ||
(ಆ ಸರೋವರದ) ಜಲವು ಪಾವಿತ್ರ್ಯದಿಂದ ಕೂಡಿ, ಮಾಧುರ್ಯದಿಂದ ಕೂಡಿ ಶುದ್ಧಸ್ಫಟಿಕದಂತೆ ನೀಲವರ್ಣದಿಂದ ಕೂಡಿತ್ತು.
१२) आवासम् स्वर्ण हंसानां सरोजानां च उद्गम: |
       बृहद्गात्रयुता मीनाः सञ्चरन्ति इतस्ततः ||
(ಆ ಸರೋವರವು) ಸ್ವರ್ಣ ಹಂಸಗಳ ಹಾಗೂ ಕಮಲಗಳ ವಾಸಸ್ಥಾನವಾಯಿತು. ಬೃಹದ್ಗಾತ್ರದ ಮೀನುಗಳು ಅಲ್ಲಿಂದಿಲ್ಲಿಗೆ ಸಂಚರಿಸುತ್ತಿದ್ದವು.
१३) तत्र स्थितानां वृक्षाणाम् ओषधीनां गुणेन च |
       सम्पर्केण च वृक्षाणां जलञ्चाप्यस्ति तादृशम् ||
ಅಲ್ಲಿ ನೆಲೆಸಿರುವ ಔಷಧೀಯ ಗುಣವುಳ್ಳ ವೃಕ್ಷಗಳ ಸಂಪರ್ಕದಿಂದ ನೀರು ಕೂಡ ಆ ಗುಣವುಳ್ಳದ್ದಾಯಿತು.
१४) ओषधीजलपानेन नूनं भवति न संशयः |
       प्राणीनां च मनुष्याणाम् सर्वरोगनिवारणम् ||ಔಷಧೀಯ ಗುಣವುಳ್ಳ ಈ ನೀರನ್ನು ಕುಡಿಯುವುದರಿಂದ ಪ್ರಾಣಿಗಳ ಹಾಗೂ ಮನುಷ್ಯರ ಸರ್ವರೋಗನಿವಾರಣೆಯಾಗುತ್ತದೆ, ಇದರಲ್ಲಿ ಸಂಶಯವಿಲ್ಲ.

१५) तत्र कृतेन स्नानेन पूता भवन्ति मानवाः |
       तीर्त्वा च भवरोगाणाम् प्राप्नुवन्ति पदम् महत् ||
ಅಲ್ಲಿ ಸ್ನಾನ ಮಾಡುವುದರಿಂದ ಮಾನವರು ಶುದ್ಧರಾಗುತ್ತಾರೆ. ಭವರೋಗಗಳು ತೀರಿ ಔನತ್ತ್ಯವನ್ನು ಪಡೆಯುತ್ತಾರೆ.
१६) अवधातम् विधतम् वा पापं कुर्वन्ति मानुषाः |
       कार्यम् त्यक्त्वा कर्म हित्वा अवाच्यम् वाचनेन च ||
ಕಾರ್ಯವನ್ನು ತ್ಯಜಿಸಿ, ಕರ್ಮಗಳನ್ನು ಮಾಡದೆ, ನುಡಿಯಬಾರದ್ದನ್ನು ನುಡಿದು ಮನುಷ್ಯರು ತಿಳಿದೋ ತಿಳಿಯದೆಯೋ ಪಾಪವನ್ನು ಮಾಡುತ್ತಾರೆ.
१७) नानाविधानि पापानि मेरुतुल्यानि वै पुनः |
       तत्र स्नानात् क्षयं यान्ति नात्र कार्या विचारणा ||
ಮೇರುವಿನಷ್ಟಿರುವ ನಾನಾವಿಧದ ಪಾಪಗಳು ಅಲ್ಲಿ ಸ್ನಾನಮಾಡುವುದರಿಂದ ಕಡಿಮೆಯಾಗುತ್ತವೆ, ಈ ವಿಚಾರದಲ್ಲಿ ಚಿಂತಿಸಬೇಕಿಲ್ಲ.
१८) सरसस्तस्य दर्शनेन लभ्यते हर्षनिर्भरम् |
       धार्मिकम् मानसम् चेति द्विधेनापि सुखं महत् ||
ಆ ಸರೋವರದ ದರ್ಶನದಿಂದ ಅತ್ಯಧಿಕವಾದ ಹರ್ಷವು ಲಭಿಸುತ್ತದೆ. ಧಾರ್ಮಿಕ ಹಾಗೂ ಮಾನಸಿಕ – ಈ ಎರಡು ರೀತಿಯ ಮಹಾಸುಖವು ಲಭಿಸುತ್ತದೆ.
१९) तटेष्वस्य कासारस्य विद्यन्तेsष्टनिकेतनम् |
       तेषु केचिन्मन्दिरेषु वर्तन्ते हिन्दुदेवताः ||
ಈ ಸರೋವರದ ತಟದಲ್ಲಿ ಅಷ್ಟಮಂದಿರಗಳಿವೆ. ಆ ಕೆಲವು ಮಂದಿರಗಳಲ್ಲಿ ಹಿಂದುದೇವತೆಗಳು ನೆಲೆಸಿದ್ದಾರೆ.
२०) एतत् स्थानम् पवित्रं च हिन्दूनाञ्जैनबौद्धयोः |
       एते सर्वेsप्यत्रागत्य मेनिरे आत्मपूतनम् ||
ಈ ಸ್ಥಾನವು ಹಿಂದು, ಜೈನ, ಬೌದ್ಧರಿಗೆ ಪವಿತ್ರವಾದುದು. ಈ ಎಲ್ಲರೂ ಇಲ್ಲೆಗೆ ಬಂದು ಮಿಂದು ಆತ್ಮಶುದ್ದಿಯನ್ನು ಪಡೆದುಕೊಳ್ಳುತ್ತಾರೆ.
२१) कासारमभितस्तत्र कैलासश्शोभते गिरिः |
       मान्धाता मेरुगिरयः नेत्रान्दकरं शुभम् ||
ಸರೋವರದ ಸುತ್ತಲೂ ಕೈಲಾಸ, ಮಾಂಧಾತಾ, ಮೇರು ಪರ್ವತಗಳು ಶೋಭಿಸುತ್ತಾ ಶುಭವನ್ನು ಹಾಗೂ ಕಣ್ಣುಗಳಿಗೆ ಆನಂದವನ್ನು ಉಂಟುಮಾಡುತ್ತಿವೆ.
२२) पुण्याचलेष्वन्यतमो गिरिर्मेरुशिवालयम् |
       राजते पर्वतश्रेणिः सस्यवृक्षलतायुतम् ||
ಪುಣ್ಯಪರ್ವತಗಳಲ್ಲ್ಲಿ  ಶ್ರೇಷ್ಠವಾಗಿರುವುದು, ಉನ್ನತವಾಗಿರುವುದು ಕೈಲಾಸವು. ಸಸ್ಯ, ವೃಕ್ಷ, ಲತೆಗಳಿಂದ ಕೂಡಿದ ಈ ಪರ್ವತಶ್ರೇಣಿ ರಾರಾಜಿಸುತ್ತಿದೆ.
२३) शुध्दत्वशीतलत्वेन आकृष्टौ शिवपार्वती |
       सरसतीरे विहरतः वासञ्चात्राभूत्तयोः ||
ಶುದ್ಧತ್ವ ಹಾಗೂ ಶೀತಲತ್ವದಿಂದ ಆಕರ್ಷಿತರಾಗಿ ಸರೋವರದ ತೀರದಲ್ಲಿ ವಿಹರಿಸುತ್ತಾ ಶಿವಪಾರ್ವತಿಯರು ಇಲ್ಲಿ ವಾಸಿಸಲು ಆರಂಭಿಸಿದರು.
२४) शक्तीत्यस्ति अन्यन्नाम पार्वती शक्तिदेवता |
       तस्मात्सरोवरस्यापि पीठं शक्तेर्निवासनात् ||ಶಕ್ತೀ ಎಂಬ ಮತ್ತೊಂದು ಹೆಸರಿರುವ ಶಕ್ತಿದೇವತೆಯಾದ ಪಾರ್ವತಿಯ ವಾಸದಿಂದ ಆ ಸರೋವರವು ಶಕ್ತಿಪೀಠವಾಯಿತು.

२५) अन्यदेकं सरस्तत्र नाम्ना राक्षसतालकम् |
       तदप्यतीव रुचिरम् तपस्थानं च राक्षसाम् ||
ಅಲ್ಲಿಯೇ ರಾಕ್ಷಸಕೊಳವೆಂಬ ಮತ್ತೊಂದು ಸರೋವರವಿದೆ. ಇದು ರಾಕ್ಷಸರಿಗೆ ಅತ್ಯಂತ ಇಷ್ಟವಾದ ತಪಃಸ್ಥಾನವಾಗಿದೆ.
२६) लङ्काधिपो रावणोsपि स्थित्वात्रैवाकरोत्तपः |
       शिवानुग्रहप्राप्त्यर्थम् आत्मलिङ्गमवाप्नुवान् ||
ಇಲ್ಲೆಯೇ ನೆಲೆಸಿ ಲಂಕಾಧಿಪತಿಯಾದ ರಾವಣನು ಶಿವನ ಅನುಗ್ರಹಪ್ರಾಪ್ತಿಗಾಗಿ ತಪಸ್ಸನ್ನು ಮಾಡಿ ಆತ್ಮಲಿಂಗವನ್ನು ಪಡೆದನು.
२७) प्रभृष्टेनात्मलिङ्गेन दुःखितेन च विष्णुना |
       गणेशः प्रार्थ्यते तेन लिङ्गोsयं मुच्यतामिति ||
ಆತ್ಮಲಿಂಗವು ನಷ್ಟವಾದ್ದರಿಂದ, ಲಿಂಗವನ್ನು ಮತ್ತೆ ಪಡೆಯುವುದಕ್ಕೆ, ದುಃಖಿತನಾದ ವಿಷ್ಣುವಿನಿಂದ ಗಣೇಶನು ಪ್ರ್ರರ್ಥಿಸ್ಪಡುತ್ತಾನೆ.
२८) प्रवहन्त्यस्मात्सरसः रोधावक्त्रा च वै पुनः |
       नद्यस्सरयू सिन्धू च ब्रह्मपुत्रादयोsपि च ||
ಈ ಸರೋವರದಿಂದ ನದಿಗಳು ಹರಿಯುತ್ತವೆ. (ಅವುಗಳಲ್ಲಿ ಕೆಲವು) ಸರಯೂ, ಸಿಂಧೂ ಮತ್ತು ಬ್ರಹ್ಮಪುತ್ರ ಮುಂತಾದ ನದಿಗಳು.
२९) तासाम् नदीनां सम्पर्कात् पूताsभूत्सा वसुन्धरा |
       जगत्येव यशः प्राप्ता ख्यातेयं पुण्यभूरिति ||
ಆ ನದಿಗಳ ಸಂಪರ್ಕದಿಂದ ವಸುಧೆಯು ಶುದ್ಧಳಾದಳು. ಜಗತ್ತಿನಲ್ಲೇ ಪುಣ್ಯಭೂಮಿಯೆಂದು (ಈ ಭೂಮಿಗೆ) ಯಶಸ್ಸು  ಪ್ರ್ರಾಪ್ತವಾಯಿತು.
३०) समन्तात्तस्य सरसः राजते गहनं वनम् |
       सुगन्धेन सपुष्पेण आवर्षम् पुष्पसौरभम् ||
ಸರೋವರದ ಸುತ್ತಲು ಗಹನವಾದ ವನವು  ವರ್ಷಪೂರ್ತಿ ಸುಗಂಧವುಳ್ಳ ಪುಷ್ಪಸೌರಭದಿಂದ ರಾಜಿಸುತ್ತದೆ.
३१) आसीत्तत्र देवदारू श्रीखण्डचन्दनादयः |
       अशोभतलताभिश्च सदृशं नन्दनं वनम् ||ಆ ವನದಲ್ಲಿ ದೇವದಾರು, ಶ್ರೀಖಂಡ, ಚಂದನ ಮುಂತಾದ ವೃಕ್ಷಗಳಿದ್ದವು. ಲತೆಗಳಿಂದ ಶೋಭಿಸುತ್ತಿರುವ ಆ ವನವು (ಇಂದ್ತ್ರನ) ನಂದನ ವನದಂತೆ ಇತ್ತು.

३२) सेवन्ते च प्रदेशं तम् सिंहो व्याघ्रो गजाधिपाः |
       कस्तूरिकामृगश्चेति सर्वे वन्यमृगादयः ||
ಆ ಪ್ರದೇಶದಲ್ಲಿ ಸಿಂಹ, ಹುಲಿ, ಆನೆ, ಕೃಷ್ಣಮೃಗ ಮುಂತಾದ ಎಲ್ಲಾ ವನ್ಯಮೃಗಗಳು ವಾಸಿಸುತ್ತಿದ್ದವು.
३३) तैरेव वर्धते शोभा कन्यायाः प्रकृतेरियम् |
       वर्तते तत्र काले तु प्राधान्यम् सर्वप्राणिनाम् ||
ಆ ಪ್ರಾಣಿಗಳಿಂದಲೇ, ಪ್ರಕೃತಿಕನ್ಯೆಯ ಶೋಭೆಯು ವರ್ಧಿಸುತ್ತದೆ. ಆ ಕಾಲದಲ್ಲಿ ಸರ್ವಪ್ರಾಣಿಗಳಿಗೊ ಪ್ರಾಧಾನ್ಯತೆಯಿತ್ತು.
३४) वैज्ञानिका अपि आयान्ति कुर्वन्त्यत्र च शोधनम् |
       जन्तूनाञ्च मृगाणाञ्च मृत्तिकायाश्च वै पुनः ||
ವಿಜ್ಞಾನಿಗಳೂ ಕೂಡ ಇಲ್ಲಿಗೆ ಬಂದು ಜಂತುಗಳ, ಪ್ರಾಣಿಗಳ ಹಾಗೂ ಮಣ್ಣೆನ ಶೋಧಕಾರ್ಯವನ್ನು ಮಾಡುತ್ತಾರೆ.
३५) विनाssसंवत्सरम् ग्रीष्मम् सर्वत्रहिमपूरितम् |
      अतोsत्र बाधते शैत्यम् प्रवासीनाञ्च प्राणिनाम् ||
ಬೇಸಿಗೆಯೊಂದನ್ನು ಬಿಟ್ಟು ವರ್ಷಪೂರ್ತಿ ಹಿಮದಿಂದ ಕೂಡಿರುತ್ತದೆ. ಹಾಗಾಗಿ ತಂಪು ಹವೆಯು ಪ್ರವಾಸಿಗಳನ್ನು ಮತ್ತು ಪ್ರಾಣಿಗಳನ್ನು ಬಾಧಿಸುತ್ತದೆ.
३६) स्थानम् पवित्रम् कासारम् बौध्दजैनटिबेटिनाम् |
       हिन्दूनां मोक्षदायित्वम् पुण्यस्थानेति कीर्तितम् ||
ಬೌದ್ಧ, ಜೈನ, ಟಿಬೇಟಿಯನ್ನರಿಗೆ ಪವಿತ್ರ ಸ್ಥಳವಾದ ಈ ಸರೋವರವು ಹಿಂದುಗಳಿಗೆ ಮೋಕ್ಷಪಡೆಯುವ ಪುಣ್ಯಸ್ಥಾನವೆಂದು ಕೀರ್ತಿಗಳಿಸಿದೆ.
३७) मुमुक्षवोsत्रागच्छन्ति नानादेशाच्छताधिकाः |
       पार्वतीशञ्च सम्पूज्य प्राप्नुवन्ति च धन्यताम् ||
ನಾನಾದೇಶಗಳಿಂದ ನೂರಾರು ಮೋಕ್ಷವನ್ನು ಪಡೆಯಲ್ಲಿಚ್ಛಿಸುವ ಜನರು ಇಲ್ಲಿಗೆ ಬರುತ್ತಾರೆ. ಶಿವಪಾರ್ವತಿಯರನ್ನು ಪೂಜಿಸಿ ಧನ್ಯತೆಯನ್ನು ಪಡೆಯುತ್ತಾರೆ.
३८) आन्मानं धन्यतां मत्वा पूजयेत्तं विशेषतः |
       शिवलोकमवाप्नोति शिवेन सह मोदते ||
ವಿಶೇಷವಾಗಿ ಪೂಜಿಸಿ ಆತ್ಮಧನ್ಯತೆಯತೆಯಿಂದ ಶಿವಲೋಕವನ್ನು ಪಡೆದು ಶಿವನ ಜೊತೆ ಇರುತ್ತಾರೆ.Disclaimer:
संस्कृतं न जानामि न जानामि पाणिनिम्।
पदार्थमपि  न जानामि क्षमस्व वागीश्वरि॥