Kannada Panchatantra Book – 3rd edition

November 5, 2022

ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನುಳ್ಳ ಪಂಚತಂತ್ರ ಪುಸ್ತಕದ 3ನೆಯ ಆವೃತ್ತಿ ಈಗ ಲಭ್ಯವಿದೆ.

ಪುಸ್ತಕದ ಕಿರುಪರಿಚಯ

ಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದು. ವಿಡಿಯೋ ರೂಪದಲ್ಲಿರುವ ಪುಸ್ತಕದ ಪರಿಚಯವನ್ನು YouTubeನಲ್ಲಿ ನೋಡಬಹುದು

The full Kannada translation of Vishnu Sharma’s original Sanskrit Panchatantram is now available in the book form.

 • Title – ಪಂಚತಂತ್ರ – 3ನೆಯ ಆವೃತ್ತಿ (Panchatantra – A Kannada Translation)
 • Author and Publisher: Bharata Bhasker Rao
 • Book type: Paperback
 • Number of pages: 302
 • Year of publication: 2022
 • ISBN-13: 978-93-5361-129-3
 • Book size: 5.5″x8.5″
 • Weight: 360g
 • Paper: 80 GSM NS Maplitho
 • MRP: Rs. 350/-

Online buying options

 1. Amazon
 2. Navakarnataka
 3. TotalKannada

Stores options

 1. All book stores of Navakarnataka Publications across Karnataka
 2. Vedanta Book House, Chamarajpet, Bangalore

ಕೃತಜ್ಞತೆಗಳು

ಮೂರನೆಯ ಆವೃತ್ತಿ ಹೊರಬರುತ್ತಿರುವ ಈ ಸಂದರ್ಭದಲ್ಲಿ ನಾನು ಹಲವರಿಗೆ ಧನ್ಯವಾದಗಳನ್ನು ಅರ್ಪಿಸಬೇಕಿದೆ. ಪುಸ್ತಕವನ್ನು ಕೊಂಡು ಓದಿದ ಎಲ್ಲಾ ಓದುಗರಿಗೂ, ತಮಗಷ್ಟೇ ಅಲ್ಲದೆ ತಮ್ಮ ಸ್ನೇಹಿತರಿಗಾಗಿ ಪುಸ್ತಕವನ್ನು ಖರೀದಿಸಿದ ಮಿತ್ರರಿಗೂ, ಟ್ವಿಟರ್ ನಲ್ಲಿ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು ಅನೇಕರಿಗೆ ಪುಸ್ತಕವು ತಲುಪುವಂತೆ ಮಾಡಿದ ಎಲ್ಲರಿಗೂ, ಪುಸ್ತಕವನ್ನು ಓದುಗರಿಗೆ ತಲುಪಿಸಲು ಸಾಧ್ಯಮಾಡಿಕೊಟ್ಟ ಎಲ್ಲಾ ಪುಸ್ತಕ ಮಳಿಗೆಗಳಿಗೂ, ಪುಸ್ತಕದ ಬಗ್ಗೆ ಪತ್ರಿಕೆಗಳಲ್ಲಿ ಬರೆದ ಹಾಗೂ ದೂರದರ್ಶನದಲ್ಲಿ ನುಡಿದ ಮಾಧ್ಯಮದವರಿಗೂ, ಅಂದವಾಗಿ ಅಕ್ಷರ ಜೋಡಣೆಯನ್ನು ಮಾಡಿಕೊಟ್ಟ ಪ್ರಕಾಶ್ ಹೆಬ್ಬಾರರಿಗೂ ನನ್ನ ಕೃತಜ್ಞಾಪೂರ್ವಕ ವಂದನೆಗಳು.

A few sample pages from the book


Kannada Panchatantra Book – 2nd Edition

April 28, 2019

[ಈ ಮೊದಲನೆಯ ಮುದ್ರಣದ ಎಲ್ಲಾ ಪ್ರತಿಗಳೂ ಮುಗಿದಿದ್ದು, ಪುಸ್ತಕದ ಮೂರನೆಯ ಆವೃತ್ತಿಯ ಬಗ್ಗೆ ಇಲ್ಲಿ ನೋಡಬಹುದು]

ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನುಳ್ಳ ಪಂಚತಂತ್ರ ಪುಸ್ತಕದ 2ನೆಯ ಆವೃತ್ತಿ ಈಗ ಲಭ್ಯವಿದೆ.

front-page

ಪುಸ್ತಕದ ಕಿರುಪರಿಚಯ

ಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದು. ವಿಡಿಯೋ ರೂಪದಲ್ಲಿರುವ ಪುಸ್ತಕದ ಪರಿಚಯವನ್ನು YouTubeನಲ್ಲಿ ನೋಡಬಹುದು

The full Kannada translation of Vishnu Sharma’s original Sanskrit Panchatantram is now available in the book form.

 • Title – ಪಂಚತಂತ್ರ – 2ನೆಯ ಆವೃತ್ತಿ (Panchatantra – A Kannada Translation)
 • Author and Publisher: Bharata Bhasker Rao
 • Book type: Paperback
 • Number of pages: 302
 • Year of publication: 2019
 • ISBN-13: 978-93-5361-129-3
 • Book size: 5.5″x8.5″
 • Weight: 360g
 • Paper: 70 GSM NS Maplitho
 • MRP: Rs. 275/-

Online buying options

 1. Buying directly from the author: Please drop a mail to panchatantra.kannada@gmail.com or send a message to twitter handle @PanchatantraKan You will be sent the details of the payment options. Currently UPI and NEFT payment modes are available. Once the payment is received and shipping address is obtained via mail, the book will be shipped to your address via speed post. (Shipping is only within India at Rs 275/- which includes packaging, shipping and handling charges {Rajyotsava November price: 200/- including shipping})Author copies are all sold out currently.
 2. Buying online from Navakarnataka
 3. On Amazon
 4. TotalKannada
 5. Flipkart
 6. Masterminds

Stores options

 1. All book stores of Navakarnataka Publications across Karnataka
 2. Vedanta Book House, Chamarajpet, Bangalore
 3. Total Kannada Book stores, Jayanagar, Bangalore
 4. Ankita Pustaka, Gandhibazar, Bengaluru

ಕೃತಜ್ಞತೆಗಳು

ಎರಡನೆಯ ಆವೃತ್ತಿ ಹೊರಬರುತ್ತಿರುವ ಈ ಸಂದರ್ಭದಲ್ಲಿ ನಾನು ಹಲವರಿಗೆ ಧನ್ಯವಾದಗಳನ್ನು ಅರ್ಪಿಸಬೇಕಿದೆ. ಪುಸ್ತಕವನ್ನು ಕೊಂಡು ಓದಿದ ಎಲ್ಲಾ ಓದುಗರಿಗೂ, ತಮಗಷ್ಟೇ ಅಲ್ಲದೆ ತಮ್ಮ ಸ್ನೇಹಿತರಿಗಾಗಿ ಪುಸ್ತಕವನ್ನು ಖರೀದಿಸಿದ ಮಿತ್ರರಿಗೂ, ಟ್ವಿಟರ್ ನಲ್ಲಿ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು ಅನೇಕರಿಗೆ ಪುಸ್ತಕವು ತಲುಪುವಂತೆ ಮಾಡಿದ ಎಲ್ಲರಿಗೂ, ಪುಸ್ತಕವನ್ನು ಓದುಗರಿಗೆ ತಲುಪಿಸಲು ಸಾಧ್ಯಮಾಡಿಕೊಟ್ಟ ಎಲ್ಲಾ ಪುಸ್ತಕ ಮಳಿಗೆಗಳಿಗೂ, ಪುಸ್ತಕದ ಬಗ್ಗೆ ಪತ್ರಿಕೆಗಳಲ್ಲಿ ಬರೆದ ಹಾಗೂ ದೂರದರ್ಶನದಲ್ಲಿ ನುಡಿದ ಮಾಧ್ಯಮದವರಿಗೂ, ಅಂದವಾಗಿ ಅಕ್ಷರ ಜೋಡಣೆಯನ್ನು ಮಾಡಿಕೊಟ್ಟ ಪ್ರಕಾಶ್ ಹೆಬ್ಬಾರರಿಗೂ ನನ್ನ ಕೃತಜ್ಞಾಪೂರ್ವಕ ವಂದನೆಗಳು.

2ನೆಯ ಆವೃತ್ತಿಯಲ್ಲಿನ ಬದಲಾವಣೆಗಳು

ಮೂಲ ಪ್ರತಿಯನ್ನು Google docs ನಲ್ಲಿ ಸಿದ್ಧಪಡಿಸಿ, ಅದನ್ನು ಮುದ್ರಣಕ್ಕೆ ಅಳವಡಿಸುವಾಗ ಅನಿವಾರ್ಯವಾಗಿ ಅಕ್ಷರಜೋಡಣೆಯಲ್ಲಾಗುವ ವ್ಯತ್ಯಾಸಗಳನ್ನೆಲ್ಲಾ ಸಾಧ್ಯವಾದಷ್ಟು ಹುಡುಕಿ ಈ ಎರಡನೆಯ ಆವೃತ್ತಿಯಲ್ಲಿ ತಿದ್ದಿದ್ದೇನೆ. ಅನುವಾದದಲ್ಲಿ ಬಿಟ್ಟುಹೋಗಿದ್ದ ಬೆರಳೆಣಿಕೆಯಷ್ಟು ಸುಭಾಷಿತಗಳನ್ನು ಈ ಆವೃತ್ತಿಯಲ್ಲಿ ಸೇರಿಸಿದ್ದೇನೆ. ಅದಲ್ಲದೇ, ಪಂಚತಂತ್ರವು ಏಕೆ ನಮಗೆ ಇನ್ನೂ ಪ್ರಸ್ತುತವಾಗಿದೆ ಎಂಬ ವಿವರಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಿದ್ದೇನೆ.

A few sample pages from the book

2

4567891718232627121167227263


ಪಂಚತಂತ್ರ – ನಮಗೇಕಿನ್ನೂ ಪ್ರಸ್ತುತ ?

December 21, 2018

ಪಂಚತಂತ್ರ ಕಥೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ? ನಾವೆಲ್ಲರೂ ಬಾಲ್ಯದಲ್ಲಿ ಅನೇಕ ಪಂಚತಂತ್ರದ ಕಥೆಗಳನ್ನು ಕೇಳಿಯೇ ಬೆಳೆದಿರುತ್ತೇವೆ. ಈಗಲೂ ಯಾವುದೇ ಪುಸ್ತಕ ಮಳಿಗೆಯಲ್ಲಿ ಮಕ್ಕಳ ವಿಭಾಗವನ್ನು ನೋಡಿದರೆ ಪಂಚತಂತ್ರದ ಪುಸ್ತಕಗಳು ಕಾಣದೇ ಇರಲಾರದು. ಶತಮಾನಗಳ ಹಿಂದೆ ರಚಿಸಲ್ಪಟ್ಟ ಅಪ್ಪಟ ಭಾರತೀಯ ಕಥೆಗಳು ಮೂಲ ಸಂಸ್ಕೃತದಿಂದ ಬಹುತೇಕ ಎಲ್ಲಾ ಭಾರತೀಯ ಮತ್ತು ಅನೇಕ ವಿದೇಶೀ ಭಾಷೆಗಳಿಗೂ ಭಾಷಾಂತರಗೊಂಡು ಇನ್ನೂ ಮಕ್ಕಳನ್ನು ಸೆಳೆಯುತ್ತಿವೆ ಎಂಬುದು ನಾವು ಹೆಮ್ಮೆಪಡಬೇಕಾದ ವಿಚಾರ.

ಪ್ರಸ್ತುತ ಫೇಸ್ ಬುಕ್ ಹಾಗೂ ಟ್ವಿಟರ್ ಯುಗದಲ್ಲಿ, 2 ನಿಮಿಷಗಳಿಗಿಂತ ಹೆಚ್ಚು ಒಂದು ವಿಷಯದ ಬಗ್ಗೆ ಓದಲು ಯಾರಿಗೂ ಸಾಮನ್ಯವಾಗಿ ಮನಸ್ಸು ಬರುವುದಿಲ್ಲ. ಹಾಗಾಗಿ ಏನಾದರು ಹೇಳುವುದಿದ್ದರೆ ಅದನ್ನು 2 ನಿಮಿಷಗಳ ಒಳಗೆ ಅಥವಾ ಒಂದು ಮೊಬೈಲ್ ಸ್ಕ್ರೇನ್ ಮೀರದಂತೆ ಹೇಳಿ ಮುಗಿಸಬೇಕು. ಹಾಗಿದ್ದರೆ ಮಾತ್ರ ಓದುಗರನ್ನು ತಲುಪಬಹುದು. ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಪರಿಸ್ಥಿಯು ಪಂಚತಂತ್ರವನ್ನು ರಚಿಸಿದ ಪಂಡಿತ ವಿಷ್ಣುಶರ್ಮನಿಗೂ ಬಂದೊದಗಿತ್ತು ಎಂದರೆ ನಂಬಲು ಸ್ವಲ್ಪ ಕಷ್ಟವೇ ಸರಿ. ಆದರೆ ಇಂತಹ ಒಂದು ಸಂದರ್ಭದಲ್ಲಿಯೇ ಪಂಚತಂತ್ರದ ರಚನೆಯಾಯಿತೆಂದು ವಿಷ್ಣುಶರ್ಮನೇ ಹೇಳಿಕೊಂಡಿದ್ದಾನೆ.

ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸುತ್ತಾನೆ. ಪಾಣಿನಿಯ ವ್ಯಾಕರಣ, ಮನುಸ್ಮೃತಿ, ಚಾಣಕ್ಯನ ಅರ್ಥಶಾಸ್ತ್ರ, ವಾತ್ಸಾಯನನ ಕಾಮಶಾಸ್ತ್ರ ಮುಂತಾದವುಗಳನ್ನು ಸಾಂಪ್ರದಾಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗುತ್ತದೆ. ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಸಾರವನ್ನು ಮಾತ್ರ ಬೋಧಿಸಿ ವಿಷ್ಣುಶರ್ಮನು ಆರು ತಿಂಗಳುಗಳಲ್ಲಿ ಅವರನ್ನು ನೀತಿಶಾಸ್ತ್ರದಲ್ಲಿ ಕೌಶಲರನ್ನಾಗಿ ಮಾಡುತ್ತೇನೆಂದು ಅವರಿಗಾಗಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿ ಬೋಧಿಸುತ್ತಾನೆ. ಎಲ್ಲದರಲ್ಲೂ ಸಾರಮಾತ್ರವನ್ನು ಬೇಗನೆ ತಿಳಿದುಕೊಳ್ಳುವ ಹಂಬಲವಿರುವ ಇಂದಿನ ಯುವಜನಾಂಗಕ್ಕೆ, ವಿವಿಧ ಶಾಸ್ತ್ರಗಳ ಸಾರವನ್ನು ಶೋಧಿಸಿಟ್ಟಿರುವ ಪಂಚತಂತ್ರದ ರಚನೆಯೇ ಸಹಜವಾಗಿಯೇ ಆಕರ್ಷಣೀಯವಾಗಿ ಕಾಣಬೇಕು.

ಪಂಚತಂತ್ರದ ಕಥಾಮುಖದಲ್ಲಿ ವಿಷ್ಣುಶರ್ಮನು ಇದನ್ನು ಬಾಲಬೋಧನೆಗಾಗಿ ರಚಿಸಿದ್ದೆಂದು ಹೇಳಿಕೊಂಡಿದ್ದಾನೆ. ಆ ಕಾಲದ ಬಾಲಕರಿಗೆ ಇಂದಿನವರಿಗಿಂತ ಹೆಚ್ಚು ಪ್ರೌಢಿಮೆಯಿತ್ತೇನೋ ತಿಳಿಯದು, ಆದರೆ ಇದರಲ್ಲಿರುವ ವಿಷಯಗಳು ನಮ್ಮ ಈ ಕಾಲದಲ್ಲಿ ಮಕ್ಕಳಿಗಷ್ಟೇ ಸೀಮಿತವಾಗಿರದೆ, ದೊಡ್ಡವರಿಗೂ ಸಾಕಷ್ಟು ಗ್ರಹಿಕೆಗೆ ಹಾಗೂ ಕಲಿಕೆಗೆ ವಿಷಯಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ವಿಪರ್ಯಾಸವೆಂದರೆ ಈಗ ಲಭ್ಯವಿರುವ ಪಂಚತಂತ್ರದ ಕಥಾಪುಸ್ತಕಗಳನ್ನು ಓದಿದಾಗ, ಮೂಲ ಆಶಯವೇ ಕಳೆದುಹೋಗಿ ಕೇವಲ ಸಣ್ಣ ಮಕ್ಕಳಿಗಾಗಿ ಬರೆದಂತಹ ಕಥೆಗಳಾಗಿ ತೋರಿಬರುತ್ತವೆ. ಪಂಚತಂತ್ರವನ್ನು ಮೂಲ ಸಂಸ್ಕೃತದಲ್ಲಿ ಓದಿದಾಗ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ.

 • ನಮಗೆ ಲಭ್ಯವಿರುವ ಪಂಚತಂತ್ರದ ವಿವಿಧ ಕಥೆಗಳು ಹೆಚ್ಚಿನದಾಗಿ ಸ್ವತಂತ್ರ ರೀತಿಯಲ್ಲಿ ಹೇಳಲ್ಪಟ್ಟಿರುತ್ತವೆ. ಅಂದರೆ ಯಾವುದೇ ಕಥೆಯು ಪಂಚತಂತ್ರದ ಐದು ತಂತ್ರಗಳಲ್ಲಿ ಬರುವ ಮೂಲಕಥೆಗೆ ಹೇಗೆ ಪೂರಕವಾಗಿ ಬರುತ್ತದೆ ಎನ್ನುವುದು ಮೂಲವನ್ನು ಓದದಿದ್ದರೆ ಸ್ಪಷ್ಟವಾಗುವುದಿಲ್ಲ.
 • ಐದು ತಂತ್ರಗಳ ಸೂತ್ರ ಕಥೆಗಳಲ್ಲಿ ಬರುವ ಪಾತ್ರಗಳು, ತಮ್ಮ ಯಾವ ವಾದವನ್ನು ಪ್ರತಿಪಾದಿಸಲು ಉಪಕಥೆಯನ್ನು ಸಂದರ್ಭೋಚಿತವಾಗಿ ಹೇಗೆ ಬಳಸಿವೆ ಎಂಬುದನ್ನು ಅರಿಯುವುದು ಮುಖ್ಯ.
 • ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ವಾದವನ್ನು ಅಥವಾ ನಿಲುವನ್ನು ಸಮರ್ಥಿಸಿಕೊಳ್ಳಲು ಹಲವು ಸುಭಾಷಿತಗಳನ್ನು ಹಾಗೂ ಲೋಕೋಕ್ತಿಗಳನ್ನು ಯಥೇಚ್ಛವಾಗಿ ಬಳಸಿವೆ. ಇದಾವುದು ಬಹುತೇಕ ಮಕ್ಕಳಿಗೆ ಲಭ್ಯವಿರುವ ಕಥೆಗಳಲ್ಲಿ ಬಾರದೇ ಇರುವುದರಿಂದ ಒಂದು ಒಳ್ಳೆಯ ಜ್ಞಾನಭಂಡಾರವನ್ನೇ ಕಳೆದುಕೊಂಡಂತೆ ಆಗಿದೆ.

ಆದ್ದರಿಂದ ಈಗಿನ ಯುವಜನಾಂಗಕ್ಕೆ ನಮ್ಮ ಹಳೆಯ ಪಂಚತಂತ್ರದ ಕಥೆಗಳು ಹೇಗೆ ಇನ್ನೂ ಪ್ರಸ್ತುತವಾಗಿವೆ, ಅದರಿಂದ ನಾವು ಕಲಿಯಬೇಕಾದುದ್ದೇನು, ತಿಳಿಯಬೇಕಾದುದ್ದೇನು ಎಂಬುದರ ಬಗ್ಗೆ ಸ್ವಲ್ಪ ವಿಸ್ತಾರವಾಗಿ ನೋಡಬೇಕಾದ ಅವಶ್ಯಕತೆಯಿದೆ. ಆದರೆ ಮೊದಲು ಪಂಚತಂತ್ರದ ಸ್ಥೂಲ ಪರಿಚಯವನ್ನು ಮಾಡಿಕೊಂಡು ನಂತರ ಅದರ ಪ್ರಸ್ತುತತೆಯ ಬಗ್ಗೆ ದೃಷ್ಟಿಹರಿಸೋಣ.

ಹೆಸರೇ ಹೇಳುವಂತೆ ಪಂಚತಂತ್ರದಲ್ಲಿ ಒಟ್ಟು ಐದು ತಂತ್ರಗಳಿವೆ. ಈ ಐದೂ ತಂತ್ರಗಳಲ್ಲಿ ಒಂದೊಂದು ಪ್ರಧಾನ ಸೂತ್ರಕಥೆಯಿದ್ದು, ಸೂತ್ರಕಥೆಗಳಲ್ಲಿ ಇತರ ಉಪಕಥೆಗಳು ಸಾಂದರ್ಭಿಕವಾಗಿ ಬರುತ್ತವೆ. ಐದು ತಂತ್ರಗಳ ಸ್ಥೂಲ ಪರಿಚಯ ಹೀಗಿದೆ:

 1. ಮಿತ್ರಭೇದ: ಕಾಡಿನ ರಾಜನಾದ ಸಿಂಹ ಹಾಗೂ ನಾಡಿನಿಂದ ಬಂದ ಎತ್ತಿನ ಮಧ್ಯೆ ಉಂಟಾದ ಅಸಹಜ ಮೈತ್ರಿಯ ಮೋಹದಲ್ಲಿ ಸಿಂಹವು ಕರ್ತವ್ಯಭ್ರಷ್ಟನಾಗಿ ಅದರ ಪ್ರಜೆಗಳು ತೊಂದರೆಗೆ ಸಿಲುಕಿದಾಗ, ಸಿಂಹದ ಮಂತ್ರಿಯಾಗಿದ್ದ ನರಿಯು ಈ ಮೈತ್ರಿಯನ್ನು ಹೇಗೆ ಒಡೆಯಿತು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು 22 ಉಪಕಥೆಗಳಿವೆ.
 2. ಮಿತ್ರಸಂಪ್ರಾಪ್ತಿ: ಒಳ್ಳೆಯ ಮಿತ್ರರನ್ನು ಗಳಿಸುವುದರಿಂದ ಏನೂ ವಿಶೇಷವಾದ ಸಲಕರಣೆಗಳಿಲ್ಲದೆಯೇ ಆಪತ್ತಿನಿಂದ ಹೇಗೆ ದೂರವಾಗಬಹುದೆಂದು ಕಾಗೆ, ಇಲಿ, ಆಮೆ ಮತ್ತು ಜಿಂಕೆಯ ಸೂತ್ರಕಥೆಯ ಮೂಲಕ ತೋರಿಸಲಾಗಿದೆ. ಇಲ್ಲಿ ಉತ್ತಮ ಮಿತ್ರನ ಲಕ್ಷಣಗಳನ್ನು ವಿವರಿಸಲಾಗಿದೆ. ಈ ತಂತ್ರದಲ್ಲಿ ಒಟ್ಟು 6 ಉಪಕಥೆಗಳು ಬರುತ್ತವೆ.
 3. ಕಾಕೋಲೂಕೀಯ: ಕಾಗೆ ಹಾಗೂ ಗೂಬೆಗಳ ಮಧ್ಯೆ ಇರುವ ಸಹಜ ವೈರತ್ವದ ಬಗ್ಗೆ ಸೂತ್ರಕಥೆಯನ್ನುಳ್ಳ ಈ ತಂತ್ರದಲ್ಲಿ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ ಮತ್ತು ದ್ವೈಧೀಭಾವ ಮುಂತಾದ ಶತ್ರುವನ್ನು ಗೆಲ್ಲಲು ಬಳಸುವ ವಿಧಾನಗಳನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕೆಂದು 17 ಉಪಕಥೆಗಳ ಮೂಲಕ ವಿವರಿಸಲಾಗಿದೆ.
 4. ಲಬ್ಧಪ್ರಣಾಶ: ಈ ತಂತ್ರದಲ್ಲಿ ಮಂಗ ಹಾಗೂ ಮೊಸಳೆಯ ಸೂತ್ರಕಥೆಯ ಮೂಲಕ ಪಡೆದುಕೊಂಡದ್ದನ್ನು ಮೂರ್ಖತನದಿಂದ ಕಳೆದುಕೊಳ್ಳುವುದರ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ 11 ಉಪಕಥೆಗಳಿವೆ.
 5. ಅಪರೀಕ್ಷಿತಕಾರಕ: ಸರಿಯಾಗಿ ವಿಚಾರ ಮಾಡದೆ ಕೈಗೊಂಡ ಕಾರ್ಯಗಳಿಂದ ಆಗುವ ಅನಾಹುತಗಳನ್ನು ವಿವಿಧ ಕಥೆಗಳ ಮೂಲಕ ತೋರಿಸಲಾಗಿದೆ. ಈ ಭಾಗದಲ್ಲಿ ಒಟ್ಟು 14 ಉಪಕಥೆಗಳಿವೆ.

ಹೆಚ್ಚಾಗಿ ಭಾರತೀಯ ಸಂಪ್ರದಾಯದಲ್ಲಿ ಕಥೆಗಳು ನೇರವಾಗಿ ಪ್ರಾರಂಭವಾಗುವುದಿಲ್ಲ. ಕಥೆಗಳು ಹೇಗೆ ಉದ್ಭವವಾಯಿತು, ಯಾರು ಯಾರಿಗೆ ಆ ಕಥೆಗಳನ್ನು ಯಾವ ಕಾರಣದಿಂದ ಹೇಳಿದರು ಎಂದೆಲ್ಲಾ ವಿವರಗಳು ಮೊದಲು ಬಂದು, ಮತ್ಯಾರೋ ಆ ಕಥೆಗಳನ್ನು ಇನ್ನೊಬ್ಬರಿಗೆ ಹೇಳುತ್ತಿರುವಂತೆ ಗ್ರಂಥವು ರಚಿತವಾಗಿರುತ್ತದೆ. ಅಲ್ಲದೆ ಮೂಲ ಕಥೆಯೊಳಗೆ ಉಪಕಥೆಗಳು, ಉಪಕಥೆಗಳಲ್ಲಿ ಮತ್ತೂ ಉಪಕಥೆಗಳು, ಉಪಕಥೆಯು ಮುಗಿದ ನಂತರ ಮೂಲಕಥೆಯು ಮುಂದುವರೆಯುವುದು ಸಾಮಾನ್ಯವಾಗಿ ಕಾಣುವ ರಚನಾವಿಧಾನ. ರಾಮಾಯಣ, ಮಹಾಭಾರತ ಅಲ್ಲದೆ ಕಥೆಗಳ ಆಗರವಾಗಿರುವ ಕಥಾಸರಿತ್ಸಾಗರದಲ್ಲಿ ಕಂಡುಬರುವ ಇಂಥ ರಚನಾವೈಶಿಷ್ಟ್ಯವೇ ಪಂಚತಂತ್ರದಲ್ಲೂ ಕಾಣಸಿಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈಗ ಲಭ್ಯವಿರುವ ಮಕ್ಕಳ ಪಂಚತಂತ್ರ ಪುಸ್ತಕಗಳು ಈ ವೈಶಿಷ್ಟ್ಯವನ್ನು ಉಳಿಸಿಕೊಳ್ಳದೆ ಕಥೆಗಳನ್ನು ಬಿಡಿಬಿಡಿಯಾಗಿ ಪ್ರಸ್ತುತಪಡಿಸುತ್ತವೆ.

ಪಂಚತಂತ್ರವು ಸಾಂಪ್ರದಾಯಿಕವಾಗಿ ಮಾಡಿದಂತಹ ನೀತಿಯ ಪಾಠವಲ್ಲದ್ದರಿಂದ ವಿಷಯವು ಹೆಚ್ಚು practical ಆಗಿದೆ ಎಂದರೆ ತಪ್ಪಾಗಲಾರದು. ವಿವಿಧ ಸಂದರ್ಭಗಳನ್ನು ಹೇಗೆ ಎದುರಿಸಬೇಕು, ಸ್ವಧರ್ಮ ಯಾವಾಗ ಪಾಲಿಸಬೇಕು, ಆಪತ್ ಧರ್ಮ ಯಾವಾಗ ಅನ್ವಯಿಸುತ್ತದೆ, ಧೂರ್ತರನ್ನು, ನೀಚರನ್ನು, ಸಮಬಲರನ್ನು, ಬಲಶಾಲಿಗಳನ್ನು  ಹೇಗೆ ಎದುರಿಸಬೇಕು, ಮೂರ್ಖರೊಂದಿಗೆ ಹಾಗೂ ಬುದ್ಧಿವಂತರೊಂದಿಗಿನ ವ್ಯವಹಾರ ಹೇಗಿರಬೇಕು, ಪರಂಪರೆಯ ಮಹತ್ವವೇನು, ಸ್ವದೇಶದಲ್ಲಿ ಎಲ್ಲಿಯವರೆಗೆ ನೆಲೆನಿಲ್ಲಬೇಕು, ವಿದೇಶವನ್ನು ಯಾವಾಗ ಆಶ್ರಯಿಸಬೇಕು, ಗುರಿ ಮುಟ್ಟಲು ಕಪಟತಂತ್ರವನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು, ಕಾರ್ಯಾಲಯದ ರಾಜಕೀಯಕ್ಕೆ ಹೇಗೆ ಸ್ಪಂದಿಸಬೇಕು ಮುಂತಾದ ಹತ್ತು ಹಲವು ವಿಷಯಗಳನ್ನು ನಮ್ಮ ವೃತ್ತಿ, ವಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ಪಂಚತಂತ್ರದಿಂದ ತಿಳಿಯಲು ಸಾಧ್ಯ.

ಪಂಚತಂತ್ರ ಕಥೆಗಳಲ್ಲಿ ಬರುವ ಪ್ರಮುಖ ವಿಷಯಗಳನ್ನು ಈಗ ವಿಂಗಡಿಸಿ ನೋಡೋಣ:

ರಾಜಧರ್ಮ

ಪಂಚತಂತ್ರವು ರಾಜಕುಮಾರರಿಗೆ ಮಾಡಿದ ಪಾಠವಾದ್ದರಿಂದ ರಾಜಧರ್ಮದ ಅನೇಕ ವಿಚಾರಗಳು ಇಲ್ಲಿ ಬರುವುದು ಸಹಜ. ಮಿತ್ರಭೇದದಲ್ಲಿ ದಮನಕ ನರಿಯು ಕಳೆದುಕೊಂಡ ಮಂತ್ರಿಪದವಿಯನ್ನು ಮರುಪಡೆಯಲು ಕಾರ್ಯಪ್ರವೃತ್ತವಾದಾಗ ಕರಟಕ ನರಿಯು ಅದನ್ನು ಎಚ್ಚರಿಸುತ್ತಾ ರಾಜನಾದವನ ಬಹುಮುಖ ವ್ಯಕ್ತಿತ್ವವನ್ನು ಪರ್ವತಕ್ಕೆ ಹಾಗೂ ವಿಷಸರ್ಪಕ್ಕೆ ಹೋಲಿಸುತ್ತದೆ. ಪರ್ವತವು ಹೇಗೆ ಕ್ರೂರಮೃಗಗಳಿಂದ ಕೂಡಿ, ಎತ್ತರತಗ್ಗುಗಳಿಂದ ದುರ್ಗಮವಾಗಿ, ಕಲ್ಲುಮುಳ್ಳುಗಳಿಂದ ಕಠಿಣವಾಗಿ ಏರಲು ಅಸಾಧ್ಯವಾಗಿದೆಯೋ, ಅದೇ ರೀತಿ ರಾಜನೂ ಕೂಡ ದುಷ್ಟಜನರೂ, ಉಪಾಯಬಲ್ಲವರೂ ಹಾಗೂ ಕಪಟಿಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಹಾಗಾಗಿ ಆತನನ್ನು ತಲುಪುವುದು ಕಷ್ಟಕರವು. ರಾಜರು ಹಾವುಗಳಂತೆ ಭೋಗವಿಲಾಸಿಗಳು, ಕವಚ ಧರಿಸಿರುವವರು, ವಕ್ರಸ್ವಭಾವದವರು, ಕ್ರೂರಿಗಳು, ಅತೀವ ದುಷ್ಟರು ಹಾಗೂ ಮಂತ್ರಗಳಿಗೆ ವಶವಾಗುವವರು. ಹಾವುಗಳು ಹೇಗೆ ಎರಡು ನಾಲಿಗೆಗಳನ್ನು ಹೊಂದಿರುತ್ತವೆಯೋ, ಕ್ರೂರಕಾರ್ಯಗಳನ್ನು ಮಾಡುತ್ತವೆಯೋ, ಬಿಲವನ್ನನುಸರಿಸಿ ನಡೆಯುತ್ತವೆಯೋ, ದೂರದಿಂದಲೇ ಗ್ರಹಿಸುತ್ತವೆಯೋ ಹಾಗೆ ರಾಜರೂ ಕೂಡ ಒಮ್ಮೊಮ್ಮೆ ಒಂದೊಂದು ರೀತಿ ನುಡಿಯುವ ಎರಡು ನಾಲಿಗೆಯುಳ್ಳವರು, ಕ್ರೂರಕಾರ್ಯಗಳನ್ನು ಮಾಡುವವರು, ಇತರರ ದೋಷಗಳನ್ನು ಅನುಸರಿಸಿ ನಡೆಯುವವರು ಹಾಗೂ ದೂರದರ್ಶಿಗಳಾಗಿರುತ್ತಾರೆ. ಈ ಎಲ್ಲಾ ಉಪಮೆಗಳು ಇಂದಿನ ರಾಜಕೀಯ ಮುತ್ಸದಿಗಳಿಗೆ ಯಥಾವತ್ತಾಗಿ ಅನ್ವಯವಾಗುವುದಿಲ್ಲವೇ ?

ಮಿತ್ರಭೇದದ ಸಿಂಹ ಮತ್ತು ಮೊಲದ ಕಥೆಯಲ್ಲಿ ಹೊಟ್ಟೆಯ ಅಗತ್ಯಕ್ಕಿಂತ ಹೆಚ್ಚು ಪ್ರಾಣಿಗಳನ್ನು ಕೊಲ್ಲುತ್ತಿದ್ದ ಸಿಂಹರಾಜನಿಗೆ ದಿನಕ್ಕೊಂದರಂತೆ ಪ್ರಾಣಿಯನ್ನು ಒದಗಿಸುವುದಾಗಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಕಾಡುಪ್ರಾಣಿಗಳು ತಮ್ಮ ರಾಜನಿಗೆ ಪ್ರಜೆಗಳನ್ನು ಪಾಲಿಸುವ ಸೂಕ್ಷ್ಮತೆಯನ್ನು ಹೇಳಿ ತೋರಿಸುತ್ತವೆ. ಗೋಪಾಲಕನು ಗೋವುಗಳನ್ನು ಪಾಲನೆ ಪೋಷಣೆ ಮಾಡುತ್ತಾ ಮೆಲ್ಲಮೆಲ್ಲನೆ ಹೇಗೆ ಹಾಲನ್ನು ಪಡೆದುಕೊಳ್ಳುವನೋ ಹಾಗೆ ರಾಜನು ತನ್ನ ಪ್ರಜೆಗಳನ್ನು ಪಾಲನೆ ಪೋಷಣೆ ಮಾಡುತ್ತಾ ನಿಧಾನವಾಗಿ ಧನವನ್ನು ಸಂಪಾದಿಸಿಕೊಂಡು ನ್ಯಾಯಮಾರ್ಗದಲ್ಲಿ ನಡೆಯಬೇಕು. ಪ್ರಕಾಶಿಸುತ್ತಿರುವ ದೀಪವು ತನ್ನಲ್ಲಿರುವ ಬಿಳಿಯಾದ ಬತ್ತಿಯಿಂದ ಎಣ್ಣೆಯನ್ನು ಹೀರಿಕೊಳ್ಳುವುದು ಹೇಗೆ ಯಾರಿಗೂ ತಿಳಿಯುವುದಿಲ್ಲವೋ, ಹಾಗೆ ರಾಜನು ತನ್ನ ಒಳ್ಳೆಯ ಗುಣಗಳಿಂದ ಪ್ರಜೆಗಳಿಂದ ಧನವನ್ನು (ಕರ) ತೆಗೆದುಕೊಳ್ಳುವುದು ವಿಶೇಷವಾಗಿ ಯಾರ ಗಮನಕ್ಕೂ ಬರದಂತಿರಬೇಕು.

ಮಿತ್ರಸಂಪ್ರಾಪ್ತಿಯ ಕಥೆಯೊಂದರಲ್ಲಿ ಪಾರಿವಾಳ ರಾಜನು ಬಲೆಯಲ್ಲಿ ಸೆರೆಸಿಕ್ಕ ತಮ್ಮೆಲ್ಲರನ್ನೂ ಇಲಿಯ ಸಹಾಯದಿಂದ ಬಿಡಿಸಿಕೊಳ್ಳುವ ಸಂದರ್ಭದಲ್ಲಿ, ಮೊದಲು ತನ್ನ ಆಪ್ತಜನರನ್ನೆಲ್ಲಾ ಬಿಡಿಸಿ ನಂತರ ತಾನು ಬಿಡುಗಡೆಹೊಂದುವ ಉತ್ತಮ ನಿದರ್ಶನವನ್ನು ತೋರುತ್ತದೆ.

ಹೀಗೆ ಹತ್ತು ಹಲವು ಕಥೆಗಳ ಮೂಲಕ ಆಡಳಿತದಲ್ಲಿರುವವನು ಹೇಗಿರಬೇಕು, ಹೇಗಿರಬಾರದು, ಹೇಗೆ ಆಡಳಿತ ನಡೆಸಬೇಕು, ಆತನ ಆದ್ಯತೆಗಳೇನು, ಗುಣಗಳೇನು, ಪ್ರಜೆಗಳು ಎಂತಹ ರಾಜನನ್ನು ತ್ಯಜಿಸಬೇಕು ಮುಂತಾದ ಉದಾಹರಣೆಗಳು ಬರುತ್ತವೆ. ಇವೆಲ್ಲವೂ ಇಂದಿಗೆ ಹಾಗೂ ಮುಂದೆದಿಗೂ ಪ್ರಸ್ತುತವಾಗಿರುವಂತಹ ವಿಷಯಗಳು.

ಕೇವಲ ರಾಜನ ಬಗ್ಗೆ ಅಲ್ಲದೆ ಮಂತ್ರಿಯ ಕರ್ತವ್ಯಗಳನ್ನೂ ಪರಿಣಾಮಕಾರಿ ಕಥೆಗಳ ಮೂಲಕ ತೋರಿಸಿಕೊಡಲಾಗಿದೆ. ಮಿತ್ರಭೇದದಲ್ಲಿ ಸಂಜೀವಕ ಎತ್ತಿನ ಸ್ನೇಹದಿಂದ ಪಿಂಗಲಕ ಸಿಂಹರಾಜನು ಕರ್ತವ್ಯಭ್ರಷ್ಟನಾದಾಗ, ಮಂತ್ರಿ ದಮನಕ ನರಿಯು ಅವರಿಬ್ಬರಿಗೂ ತಿಳಿಯದಂತೆ ಅವರ ಮಧ್ಯೆ ಕಲಹವನ್ನುಂಟುಮಾಡಿ ಸಿಂಹವೇ ಎತ್ತನ್ನು ಕೊಲ್ಲುವಂತೆ ಮಾಡುತ್ತದೆ. ಪರಂಪರಾಗತವಾಗಿ ಬಂದ ತನ್ನ ಮಂತ್ರಿಪದವಿಯನ್ನು ಉಳಿಸಿಕೊಳ್ಳಲು ಮತ್ತು ರಾಜ್ಯದ ಹಿತದೃಷ್ಟಿಯಿಂದ ಮಂತ್ರಿಯಾದವನು ಎಷ್ಟು ನಿರ್ದಯಿಯಾಗಲು ಸಾಧ್ಯವೆಂದು ಇದು ಚಿತ್ರಿಸುತ್ತದೆ. ಈಗಿನ ಸಂದರ್ಭಕ್ಕೆ ನೋಡುವುದಾದರೆ ಆಡಳಿತ ನಡೆಸುವವನ ಸಲಹೆಗಾರ ಹೇಗಿರಬೇಕು, ಆತನ ಅರ್ಹತೆಗಳೇನು ಮುಂತಾದ ಅನೇಕ ವಿಷಯಗಳನ್ನು ಪಂಚತಂತ್ರದಿಂದ ತಿಳಿಯಲು ಸಾಧ್ಯ.

ಕೇವಲ ಆದರ್ಶಗಳನ್ನು ಮಾತ್ರ ಚಿತ್ರಿಸದೆ ನಿತ್ಯಜೀವನದ ವ್ಯವಹಾರದಲ್ಲಿ ಹೇಗಿರಬೇಕೆಂದು ತೋರಿಸುವುದು ಪಂಚತಂತ್ರದ ವಿಶೇಷ. ರಾಜನ ಸೇವೆಯಲ್ಲಿರುವ ಕಸಗುಡಿಸುವವನಿಗೆ ಗೌರವ ಕೊಡದಿದ್ದರೆ ಏನಾಗತ್ತದೆ ಎಂಬುದಕ್ಕೆ ದಂತಿಲ-ಗೋರಂಭರ ಕಥೆ ಉತ್ತಮವಾದ ನಿದರ್ಶನ.

ಶತ್ರುನಿಗ್ರಹ ಮತ್ತು ರಣತಂತ್ರ

ಪಂಚತಂತ್ರದ ಹಲವೆಡೆ ಶತ್ರುವನ್ನು ಹೇಗೆ ನಿಭಾಯಿಸಬೇಕೆಂದು ಉದಾಹರಣೆಗಳು ಬಂದರೂ, ಮೂರನೆಯ ತಂತ್ರವಾದ ಕಾಕೋಲೂಕೀಯವನ್ನು ಈ ವಿಷಯಗಳಿಗಾಗಿಯೇ ಮೀಸಲಿಡಲಾಗಿದೆ. ರಾಷ್ಟ್ರ ಮತ್ತು ರಾಜ್ಯವನ್ನು ನಡೆಸುವವರಿಗೆ ಉತ್ತಮವಾದ ಪಾಠವನ್ನು ಇಲ್ಲಿ ಕಾಣಬಹುದು.

ಹಗಲುಕುರುಡರಾದ ಗೂಬೆಗಳು ಕತ್ತಲಿನಲ್ಲಿ ಕಾಗೆಗಳ ವಾಸಸ್ಥಾನಕ್ಕೆ ಬಂದು ಅವುಗಳನ್ನು ನಾಶಮಾಡುತ್ತಿದ್ದಾಗ ಅವುಗಳಿಂದ ಹೇಗೆ ಪಾರಾಗಬೇಕೆಂದು ಕಾಗೆಗಳ ರಾಜ ತನ್ನ ಮಂತ್ರಿಗಳ ಸಲಹೆಯನ್ನು ಕೇಳುತ್ತದೆ. ಸತ್ಯಸಂಧನೂ, ಧಾರ್ಮಿಕನೂ ಆದ ಬಲಿಷ್ಠನೊಂದಿಗೆ ಸಂಧಿ, ಅಧಾರ್ಮಿಕ ಮತ್ತು ಲೋಭಿಯಾದವನೊಂದಿಗೆ ಯುದ್ಧ, ಶತ್ರು ದುಷ್ಟನೂ ಹಾಗೂ ಬಲಿಷ್ಠನೂ ಆದರೆ ಪಲಾಯನ, ತನ್ನ ರಕ್ಷಣಾ ವ್ಯವಸ್ಥೆಯ ಮೇಲೆ ನಂಬಿಕೆಯಿದ್ದರೆ ಆಸನ, ಬಲಹೀನನಾಗಿದ್ದಾಗ ಇತರರ ಆಶ್ರಯ ಮತ್ತು ತಂತ್ರಗಾರಿಕೆಯ ಬುದ್ಧಿವಂತಿಕೆಯಿದ್ದರೆ ದ್ವ್ವೈಧೀಭಾವ (double game) – ಈ ಸಲಹೆಗಳು ಮಂತ್ರಿಗಳಿಂದ ದೊರೆಯುತ್ತವೆ. ಈ ಆರು ಉಪಾಯಗಳನ್ನು ಯಾವ ಸಂದರ್ಭದಲ್ಲಿ ಯಾರು ಉಪಯೋಗಿಸಬಹುದೆಂಬ ಸವಿಸ್ತಾರ ವಿವರಣೆಯನ್ನು ಕಥೆಯಲ್ಲಿ ಕಾಣಬಹುದು.

ಶರಣಾಗತನಾಗಿ ಬಂದ ಶತ್ರುಪಕ್ಷದವನನ್ನು ಹೇಗೆ ನೆಡೆಸಿಕೊಳ್ಳಬೇಕೆಂದು ಅನೇಕ ಕಥೆಗಳ ಮೂಲಕ ವಿವರಗಳು ದೊರೆಯುತ್ತವೆ. ಸೆರೆಸಿಕ್ಕ ಶತ್ರುವನ್ನು ವಿಚಾರಮಾಡದೆ ಕೊಲ್ಲಬೇಕೇ, ರಕ್ಷಣೆಯನ್ನು ಬೇಡಿ ಬಂದವರಿಗೆ ಆಶ್ರಯ ನೀಡುಬೇಕೇ, ಪರಸ್ಪರ ಕಚ್ಚಾಡುವ ಶತ್ರುಗಳನ್ನು ಹೇಗೆ ಬಳಸಿಕೊಳ್ಳಬೇಕು, ಸಮಯ ಬಂದಾಗ ಅಪಮಾನವನ್ನು ಸಹಿಸಿಕೊಂಡು ನಂತರದಲ್ಲಿ ವಿಜಯಕ್ಕಾಗಿ ಕಾರ್ಯಾಚರಣೆ, ಕೋಟೆ ಅಥವಾ ಇಂದಿನ ಯುಗಕ್ಕೆ ಹೊಂದುವ ರಕ್ಷಾಣಾ ವ್ಯವಸ್ಥೆಯ ಮಹತ್ವ ಮುಂತಾದ ರಣತಂತ್ರಗಳನ್ನು ಸರಳವಾದ ಕಥೆಗಳ ಮೂಲಕ ವಿವರಿಸಲಾಗಿದೆ.

ಎಲ್ಲಾ ವಿವಾದಗಳನ್ನು non-combative ವಿಧಾನ ಅಥವಾ ಮಾತುಕತೆಯಿಂದಲೇ ಬಗೆಹರಿಸಬೇಕೆಂಬ ಈಗಿನ ಮನಸ್ಥಿತಿಯ ಹಿನ್ನಲೆಯಲ್ಲಿ, ನಮ್ಮ ಪೂರ್ವಜರು ಶತ್ರುಗಳನ್ನು ಕೊಲ್ಲಲು ಬಳಸುತ್ತಿದ್ದ ತಂತ್ರಗಳನ್ನು ಈ ಕಥೆಗಳ ಮೂಲಕ ತಿಳಿದಾಗ ನಮ್ಮ ಕ್ಷಾತ್ರ ಸಂಪ್ರದಾಯ ಎಂಥದ್ದೆಂದು ತಿಳಿಯುತ್ತದೆ. ಈ ಸಂದರ್ಭದಲ್ಲಿ ಕಥೆಯಲ್ಲಿ ಬರುವ ಒಂದೆರಡು ಮಾತುಗಳನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ:

“ಆಗ ತಾನೇ ಚಿಗುರುತ್ತಿರುವ ಶತ್ರುವನ್ನು ಮತ್ತು ವ್ಯಾಧಿಯನ್ನು ಯಾರು ನಿವಾರಿಸಿಕೊಳ್ಳದೇ ಅವುಗಳನ್ನು ಬೆಳೆಯಲು ಬಿಡುತ್ತಾರೋ ಅವರು ಅವುಗಳಿಂದಲೇ ನಾಶಹೊಂದುತ್ತಾರೆ.”

“ಒಂದು ವೇಳೆ ಬೇರೆ ಉಪಾಯಗಳಿಂದ ಶತ್ರುನಾಶ ಸಾಧ್ಯವಾಗದೇ ಇದ್ದಾಗ, ತನ್ನ ಮಗಳನ್ನು ಶತ್ರುವಿಗೆ ಮದುವೆ ಮಾಡಿಕೊಟ್ಟು ಆತನ ವಿಶ್ವಾಸಗಳಿಸಿ ಅನಂತರ ಆತನನ್ನು ಕೊಲ್ಲಬೇಕು. ಹೀಗೆ ಮಾಡಿದರೂ ಏನು ದೋಷವಿಲ್ಲ. ಶತ್ರುವಿನೊಂದಿಗೆ ಯುದ್ಧನಿರತನಾದ ಕ್ಷತ್ರಿಯನು ಏನು ಮಾಡಬಹುದು ಅಥವಾ ಏನು ಮಾಡಬಾರದು ಎಂದೆಲ್ಲಾ (ಕೃತ್ಯಾಕೃತ್ಯಗಳನ್ನು) ಪರಿಗಣಿಸುವಂತಿಲ್ಲ.”

ಹೀಗೆ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ಗುರುತಿಸುವ ಬುದ್ಧಿವಂತಿಕೆ, ಸಂಧಿ ಮುಂತಾದ ಉಪಾಯಗಳಿಂದ ಹಿಡಿದು ಶತ್ರುವನ್ನು ಬುಡಸಮೇತವಾಗಿ ನಾಶಮಾಡುವ ಛಲ ಹಾಗೂ ಬಲ ದೇಶವನ್ನು ನಡೆಸುವವರಿಗೆ ಇರಬೇಕೆಂದು ಪಂಚತಂತ್ರವು ವಿವರವಾಗಿ ತೋರಿಸಿಕೊಡುತ್ತದೆ.

ಸೇವಾವೃತ್ತಿ

ರಾಜನ ಸೇವೆಯಲ್ಲಿರುವ ಭೃತ್ಯರು (employees) ರಾಜನೊಂದಿಗೆ ಹೇಗೆ ನಡೆದುಕೊಳ್ಳಬೇಕು ಹಾಗೂ ರಾಜನು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ವಿವರಗಳು ಪಂಚತಂತ್ರದಲ್ಲಿ ಬರುತ್ತವೆ.

ದಮನಕನು ಪಿಂಗಲಕನಿಗೆ ರಾಜ-ಸೇವಕರ ನಡುವಿನ ಸಂಬಂಧವನ್ನು ವಿವರಿಸುತ್ತಾ ನುಡಿದ ಕೆಲವು ಮಾತುಗಳು ಹೀಗಿವೆ – “ರಾಜನಿಲ್ಲದೆ ಸೇವಕರಿಲ್ಲ ಹಾಗೂ ಸೇವಕರಿಲ್ಲದೆ ರಾಜನಿಲ್ಲ. ಅವರ ವ್ಯವಹಾರವು ಪರಸ್ಪರ ಅವಲಂಬಿತವಾಗಿರುತ್ತದೆ. ಚಕ್ರದಲ್ಲಿ ಹೇಗೆ ಕಡ್ಡಿಗಳೂ ಹಾಗೂ ನಾಭಿಯು (ಮಧ್ಯಬಿಂದು ಪ್ರದೇಶ) ಒಂದಕ್ಕೊಂದು ಆಧರಸಿ ನಿಂತಿವೆಯೋ, ಹಾಗೆ ಸೇವಕರೂ ಮತ್ತು ರಾಜನು ವೃತ್ತಿ ಚಕ್ರದಲ್ಲಿ ಪರಸ್ಪರ ಅವಲಂಬಿಗಳಾಗಿದ್ದಾರೆ. ಭೃತ್ಯರು ರಾಜನನ್ನು ಮೂರು ಕಾರಣಗಳಿಂದ ತ್ಯಜಿಸುತ್ತಾರೆ – ಸಮಾನರಲ್ಲದ ಎಲ್ಲರನ್ನೂ ಸಮಾನರಾಗಿ ಪರಿಗಣಿಸುವುದು, ಸಮಾನರನ್ನು ಸತ್ಕರಿಸುವಾಗ ಒಬ್ಬನನ್ನು ಸತ್ಕರಿಸದೇ ಇರುವುದು ಹಾಗೂ ಸರಿಯಾದ ಸ್ಥಾನದಲ್ಲಿ ನಿಯೋಜಿಸಿಕೊಳ್ಳದಿರುವುದು. ಯಾವ ರಾಜನು ಅವಿವೇಕತನದಿಂದ ಉತ್ತಮ ಪದವಿಯ ಯೋಗ್ಯತೆಯುಳ್ಳ ಭೃತ್ಯನನ್ನು ನೀಚ ಅಥವಾ ಅಧಮ ಸ್ಥಾನದಲ್ಲಿರುಸುತ್ತಾನೋ, ಅಂತಹವನ ಬಳಿ ಸೇವಕನು ನಿಲ್ಲುವುದಿಲ್ಲ.”

ಹೀಗೆ ಎಂತಹ ಸೇವಕರನ್ನು ರಾಜನು ತ್ಯಜಿಸುತ್ತಾನೆ ಮತ್ತು ಎಂತಹ ರಾಜನನ್ನು ಸೇವಕರು ಬಿಟ್ಟು ಹೋಗುತ್ತಾರೆ ಎಂಬ ವಿವರಗಳು ಬರುತ್ತವೆ.

ಈಗಿನ ಸಂದರ್ಭಕ್ಕೆ ಸಮನ್ವಯ ಮಾಡಿ ನೋಡಿದಾಗ ಸೇವಾವೃತ್ತಿಯಲ್ಲಿರುವ ನೌಕರರ ಮತ್ತವರ ಮೇಲಾಧಿಕಾರಿಗಳ ನಡುವಿನ ಸಂಬಂಧಕ್ಕೆ ಅನೇಕ ಸನ್ನಿವೇಶಗಳನ್ನು ಕಂಡುಕೊಳ್ಳಬಹುದು. ಈಗಿನ ಸರ್ಕಾರಿ ಕಚೇರಿಗಳಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರೂ ಯೋಗ್ಯರೆಂದು ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ಹಿನ್ನಲೆಯಲ್ಲಿ, ಗುಣಗಳಿಗೆ ಮಾನ್ಯತೆ ದೊರೆಯಬೇಕೆಂಬ ಪ್ರತಿಪಾದನೆಯನ್ನು ಪಂಚತಂತ್ರದಲ್ಲಿ ಕಾಣಬಹುದು.

ಯಜಮಾನ-ನೌಕರರ ಸಂಬಂಧ ಸಂಯೋಗವು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಇಬ್ಬರ ಹೊಣೆಗಾರಿಕೆಯೂ ಇದೆ ಎಂಬುದನ್ನು ಕಾಣಬಹುದು.

ಧನದ ಮಹತ್ವ

ಧನದ ಮಹತ್ವವೇನು, ಹಣವಿದ್ದವನ ಬಾಳು ಹೇಗಿರುತ್ತದೆ, ಹಣವಿಲ್ಲದವನ ಬಾಳು ಎಷ್ಟು ಕಷ್ಟಕರ, ಹಣದ ಸಂಪಾದನೆ ಹಾಗೂ ವಿನಿಯೋಗ ಹೇಗೆ, ದಾನದ ಮಹತ್ವ ಮುಂತಾದ ವಿಷಯಗಳ ಉಲ್ಲೇಖ ಪಂಚತಂತ್ರದ ಉದ್ದಗಲಕ್ಕೂ ಬರುತ್ತದೆ.

ಧನವಿಲ್ಲದವರ ಶೋಚನೀಯ ಪರಿಸ್ಥಿಯನ್ನು ಚಿತ್ರಿಸಲು ಅವರನ್ನು ಹಲ್ಲಿಲ್ಲದ ಹಾವು ಹಾಗೂ ಮದವಿಲ್ಲದ ಆನೆಗೆ ಹೋಲಿಸಿರುವುದನ್ನು ಕಾಣಬಹುದು. ಧನವಿಲ್ಲದವನು ಏನೆಲ್ಲಾ ಪರಿಸ್ಥಿತಿಯನ್ನು ಎದುರಿಸುತ್ತಾನೆಂದು ವಿಸ್ತಾರವಾಗಿ ಅನೇಕ ಉಕ್ತಿಗಳ ಮೂಲಕ ವಿವರಿಸಲಾಗಿದೆ. ಹಾಗೆಯೇ ಹಣವಿದ್ದವರ ಅನುಕೂಲಗಳನ್ನು ವಿವರಿಸಲೂ ಅಷ್ಟೇ ಸ್ವಾರಸ್ಯಕರವಾದ ಉಕ್ತಿಗಳನ್ನು ಬಳಸಿಕೊಳ್ಳಲಾಗಿದೆ. ಉದಾಹರಣೆಗೆ, ಹಣವಿದ್ದವನು ದಾನವನ್ನು ಮಾಡದಿದ್ದರೂ ಆತನು ಎಂದಾದರೊಂದು ದಿನ ಕೊಡಬಹುದೆಂಬ ನಿರೀಕ್ಷೆಯಲ್ಲೇ ಆತನ ಸುತ್ತ ಜನ ಸೇರಿರುತ್ತಾರೆ ಎಂಬ ಸತ್ಯವನ್ನು ತೋರಿಸಲು ಕಥೆಯೊಂದಿದೆ. ಎಷ್ಟೇ ಹಣವಿದ್ದರೂ ಕೂಡ ದಾನ ಹಾಗೂ ಭೋಗಕ್ಕೆ ಸಲ್ಲದ ಹಣದಿಂದ ಏನೂ ಉಪಯೋಗವಿಲ್ಲವೆಂದು ಕಥೆಯ ಮೂಲಕ ನಿದರ್ಶಿಸಲಾಗಿದೆ.

ಪ್ರಾಯಶಃ ಪಂಚತಂತ್ರದಲ್ಲಿ ಹೆಚ್ಚು ವ್ಯಂಗ್ಯನುಡಿಗಳನ್ನು ಧನದ ವಿಷಯಕ್ಕೇ ಮೀಸಲಿಡಲಾಗಿದೆಯೆಂದು ಭಾಸವಾಗುತ್ತದೆ.

ಸ್ನೇಹ

ಪಂಚತಂತ್ರದ ಮೊದಲೆರಡು ತಂತ್ರಗಳನ್ನೇ ಮೈತ್ರಿಯೆಂಬ ಮುಖ್ಯ ವಿಷಯದ ಮೇಲೆ ರಚಿಸಲಾಗಿದೆ. ಮಿತ್ರಭೇದವು ಸಮಾಜಕ್ಕೆ ಹಾನಿಯಾಗುವಂತಹ ಅಸಹಜ ಮೈತ್ರಿಯನ್ನು ಹೇಗೆ ಒಡೆಯಬೇಕೆಂಬ ವಿಚಾರವನ್ನು ಹೊಂದಿದ್ದರೆ, ಮಿತ್ರಸಂಪ್ರಾಪ್ತಿಯಲ್ಲಿ ಮೈತ್ರಿಯ ಲಕ್ಷಣಗಳು, ಉತ್ತಮ ಮಿತ್ರರನ್ನು ಸಂಪಾದಿಸುವುದು, ಸಮಾಜದಲ್ಲಿ ಮಿತ್ರನಿಗಿರುವ ವಿಶಿಷ್ಟವಾದ ಸ್ಥಾನ, ಪ್ರಾಣಕ್ಕೆ ಪ್ರಾಣ ಕೊಡುವಂತಹ ಮಿತ್ರರು, ಯಾರೊಡನೆ ಸ್ನೇಹ ಮಾಡಬೇಕು, ಎಂಥವರೊಂದಿಗೆ ಮಾಡಬಾರದು ಮುಂತಾದ ವಿಷಯಗಳನ್ನು ಕಥೆಗಳ ಮೂಲಕ ವಿವರಿಸಲಾಗಿದೆ.

ಸುಭಾಷಿತಪ್ರಿಯರಿಗೆ ಮೈತ್ರಿಯ ಬಗ್ಗೆ ಅನೇಕ ಉತ್ತಮ ಉಕ್ತಿಗಳು ಪಂಚತಂತ್ರದಲ್ಲಿ ದೊರೆಯುತ್ತವೆ. “ಮಿತ್ರ ಎಂಬ ಎರಡಕ್ಷರದ ಅಮೃತವನ್ನು ಯಾರು ಸೃಷ್ಟಿಸಿದರೋ? ಇದು ಕಷ್ಟಗಳಿಗೆ ಪರಿಹಾರವು ಹಾಗೂ ಶೋಕಸಂತಾಪಗಳಿಗೆ ಔಷಧಿಯಿದ್ದಂತೆ” ಎಂಬುದೊಂದು ಉದಾಹರಣೆ.

ಶತ್ರುತ್ವದ ಬಗ್ಗೆಯೂ ವಿವರಗಳನ್ನು ಇಲ್ಲಿ ಕಾಣಬಹುದು.  ಬೆಕ್ಕು-ನಾಯಿ, ಅತ್ತೆ-ಸೊಸೆಯರ ಮಧ್ಯೆ ಕಾರಣವಿಲ್ಲದೆಯೇ ಇರುವ, ಎಂದೆಂದಿಗೂ ಶಮನವಾಗದ ಸಹಜ/ಸ್ವಾಭಾವಿಕ ಶತ್ರುತ್ವ ಮತ್ತು ಯೋವುದೋ ಕಾರಣದಿಂದ ಹುಟ್ಟಿಕೊಂಡು ಬಗೆಹರಿಸಿಕೊಳ್ಳಬಹುದಾದ ಕೃತ್ರಿಮ ಶತ್ರುತ್ವ ಮುಂತಾದ ವಿಷಯಗಳ ಬಗ್ಗೆ ವಿವರಣೆಯನ್ನು ಕಾಣಬಹುದು.

ತಂತ್ರ ಮತ್ತು ಕಪಟತನದ ಬಳಕೆ

ಪಂಚತಂತ್ರದ ಹೆಸರೇ ಹೇಳುವಂತೆ ಇದು ನಿರ್ಧಾರಿತ ಗುರಿ ಸಾಧನೆಗಾಗಿ ಮಾಡುವಂತಹ ತಂತ್ರಗಳ ಕಥೆ. ಮೇಲ್ನೋಟಕ್ಕೆ ಅನೇಕ ಕಡೆ ಕಥೆಯಲ್ಲಿ ಬರುವ ತಂತ್ರಗಳ ಬಳಕೆ ಸಮಜಂಸವೇ ಅಥವಾ ಧರ್ಮಕ್ಕೆ ವಿರುದ್ಧವಾಗಿಲ್ಲವೇ ಎಂಬ ಸಂಶಯವು ಮೂಡುತ್ತದೆ. ಉದಾಹರಣೆಗೆ ಈ ಶ್ಲೋಕವು ಮಿತ್ರಭೇದದ ಸೂತ್ರಕಥೆಯನ್ನು ಹೀಗೆ ಪರಿಚಯಿಸುತ್ತದೆ – “ಒಂದು ಕಾಡಿನಲ್ಲಿ, ಒಮ್ಮೆ ಸಿಂಹ ಹಾಗೂ ಎತ್ತಿಗೂ ಗಾಢವಾದ ಸ್ನೇಹವುಂಟಾಗಿರಲು, ದುಷ್ಟನಾದ ಹಾಗೂ ಅತಿಲೋಭಿಯಾದ ನರಿಯಿಂದ ಆ ಸ್ನೇಹವು ನಾಶಮಾಡಲ್ಪಟ್ಟಿತು”

ಸಿಂಹ ಮತ್ತು ಎತ್ತಿನ ಸ್ನೇಹವನ್ನು ಮುರಿದಿದ್ದು ತಪ್ಪೇ ? ನರಿಯು ನಿಜವಾಗಲೂ ದುಷ್ಟನೇ, ಲೋಭಿಯೇ ? ಸ್ನೇಹವನ್ನು ಒಡೆಯುವ ತರವಲ್ಲದ ವಿಷಯವನ್ನು ವಿವರಿಸಲು ಒಂದು ಪೂರ್ಣ ಅಧ್ಯಾಯವೇ ? ಉತ್ತಮ ಮಿತ್ರರಾಗಿದ್ದ ಸಿಂಹ ಹಾಗೂ ಎತ್ತಿನ ಮಧ್ಯೆ ಅವರಿಬ್ಬರಿಗೂ ತಿಳಿಯದ ಹಾಗೆ ಕಾದಾಡುವಂತಹ ವೈರವನ್ನು ಉಂಟುಮಾಡಿ ಸಿಂಹದ ಕೈಯಿಂದಲೇ ಎತ್ತನ್ನು ಕೊಲ್ಲಿಸಿದ ನರಿಯು ಕಪಟಿಯೇ ?

ಹೀಗೆ ಅನೇಕ ಕಥೆಗಳಲ್ಲಿ ಹಲವು ಬಾರಿ ಸರಿ-ತಪ್ಪುಗಳ ಮಧ್ಯೆ ಇರುವ ಅಂತರವು ಮಾಸಿಹೋದಂತೆ ಕಂಡರೂ, ಕೂಲಂಕುಷವಾಗಿ ನೋಡಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ತನ್ನ ನಂಬಿಕೆಗೆ ಮತ್ತು ಧರ್ಮಕ್ಕೆ (ಸ್ವಧರ್ಮ ಅಥವಾ ಆಪತ್ ಧರ್ಮ) ಸರಿಯೆನಿಸಿದ ಕಾರ್ಯವನ್ನು ಅಥವಾ ಸಮಾಜಕ್ಕೆ ಹಿತವನ್ನುಂಟುಮಾಡುವ ಕಾರ್ಯವನ್ನು ಸಾಧಿಸಿಕೊಳ್ಳಬೇಕಿದ್ದಾಗ, ನಮ್ಮ ಪರಂಪರೆಗೆ ಧಕ್ಕೆಯುಂಟಾದಾಗ, ಸ್ವಸ್ಥಾನವನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿಯುಂಟಾದಾಗ, ಶತ್ರುವನ್ನು ಸೋಲಿಸಬೇಕಾದಾಗ ಹಾಗೂ ಇನ್ನಿತರ ಸಂದರ್ಭಗಳಲ್ಲಿ, ಗುರಿಯನ್ನು ತಲುಪಲು ಸೂಕ್ತವಾದ ಯಾವುದಾದರೂ ಮಾರ್ಗವನ್ನು (ಸಾಮ, ಭೇದ, ದಾನ, ದಂಡ, ಕಪಟ, ಬೇರೆಯವರನ್ನು ಬಳಸಿಕೊಳ್ಳುವುದು ಇತ್ಯಾದಿ) ಹಿಡಿದಾದರೂ ಕಾರ್ಯವನ್ನು ಸಾಧಿಸಿಕೊಳ್ಳಬಹುದು ಎಂದು ಕಥೆಗಳು ಸಾರುತ್ತಿರುವಂತೆ ಕಾಣುತ್ತದೆ.

ಎಲ್ಲರಿಗೂ ಎಲ್ಲರೂ ಒಳ್ಳೆಯವರಾಗಿ ಸಾಧುಪ್ರಾಣಿಗಳಂತೆ ಇರಬೇಕೆಂದು ತಿಳಿಸಿಕೊಡುವ ಇಂದಿನ ಶಿಕ್ಷಣಪದ್ದತಿಯಲ್ಲಿ ಬೆಳೆದುಬಂದ ಯುವಜನಾಂಗಕ್ಕೆ, ನಿರ್ಧಿಷ್ಟವಾದ ಗುರಿಗಾಗಿ, ತಂತ್ರ, ಬುದ್ಧಿಶಕ್ತಿ ಮತ್ತು ಕಪಟತನವನ್ನು ಬಳಸಿಯಾದರೂ ಕಾರ್ಯಸಾಧನೆ ಮಾಡಿಕೊಳ್ಳುವ ಉದಾಹರಣೆಗಳು ವಿಸ್ಮಯವನ್ನು ತರಬಹುದು.

ಒಳ್ಳೆಯತನ ಮತ್ತು ಧರ್ಮದಲ್ಲಿ ನಡೆಯುವುದು ಆರೋಗ್ಯಕರ ಸಮಾಜಕ್ಕೆ ಅವಶ್ಯಕ. ಆದರೆ ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರಾಗಿರುವುದಿಲ್ಲ, ಎಲ್ಲರೂ ಧರ್ಮದಂತೆ ನಡೆಯುವುದಿಲ್ಲ. ಸಮಾಜದ ಯಾವುದೇ ವ್ಯವಸ್ಥೆಯಲ್ಲಿ ಧೂರ್ತರು ಇದ್ದೇ ಇರುತ್ತಾರೆ. ನಮ್ಮಲ್ಲಿ ಒಳ್ಳೆಯತನವಿದ್ದರೆ ಮಾತ್ರ ಸಾಲದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಕಪಟಿಗಳನ್ನು ಕಪಟತನದಿಂದಲೇ ಹತ್ತಿಕ್ಕಬೇಕು ಹಾಗೂ ಧೂರ್ತರ ಧೂರ್ತಮಾರ್ಗಗಳ ತಿಳುವಳಿಕೆಯಿರಬೇಕು. ಸಮಾಜವು ಧರ್ಮದ ಆದರ್ಶದಂತೆ ನಡೆಯುವುದಿಲ್ಲ ಎಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮವನ್ನು ಎತ್ತಿಹಿಡಿಯಲು ಏನೇನು ತಂತ್ರ ಮಾಡಬೇಕೋ ಅದೆಲ್ಲವನ್ನು ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಅತಿದೊಡ್ಡ ಪಾಠ.

ಬುದ್ಧಿಯ ಶ್ರೇಷ್ಠತೆ

ಬುದ್ಧಿಶಕ್ತಿಯ ಹಿರಿಮೆಯನ್ನು ತೋರಿಸಲು ಪಂಚತಂತ್ರದಲ್ಲಿ ಅನೇಕ ಕಥೆಗಳು ಬರುತ್ತವೆ. ಬೇರೆ ಯಾವ ರೀತಿಯಿಂದಲೂ ಸಾಧ್ಯವಾಗದ ಕೆಲಸಗಳನ್ನು ಬುದ್ಧಿಯ ಮೂಲಕ ಸಾಧಿಸಬಹುದೆಂದು ಈ ಕಥೆಗಳು ತೋರಿಸಿಕೊಡುತ್ತವೆ.

ಬುದ್ಧಿಶಕ್ತಿಯ ಪ್ರಭಾವವನ್ನು ಎತ್ತಿಹಿಡಿಯುವ ಅನೇಕ ಉಕ್ತಿಗಳು ಕಾಣಸಿಗುತ್ತವೆ. ವಿದ್ಯೆಗಿಂತ ಬುದ್ಧಿಯೇ ಶ್ರೇಷ್ಠವೆಂದು ಎಂದು ಸಾರುವ ಹಲವು ಕಥೆಗಳನ್ನು ಕಾಣಬಹುದು.

ಬುದ್ಧಿವಂತನಾದವನು ರಾಜನನ್ನೇ ತನ್ನ ವಶದಲ್ಲಿಟ್ಟುಕೊಳ್ಳಬಹುದು, ಪ್ರತಿಕೂಲ ಪರಿಸ್ಥಿಯಲ್ಲೂ ಬುದ್ಧಿ ನಷ್ಟವಾಗಬಾರದು, ಬುದ್ಧಿವಂತನೇ ನಿಜವಾದ ಬಲಶಾಲಿ, ಬುದ್ಧಿವಂತನಿಗೆ ಸ್ವದೇಶ ಪರದೇಶವೆಂಬ ಭೇದವಿಲ್ಲ, ಆತ ಎಲ್ಲಿಯಾದರು ಬದುಕಿಯಾನು, ಬುದ್ಧಿವಂತರು ಬುದ್ಧಿಶಕ್ತಿಯಿಂದ ಸ್ವಾರ್ಥಸಾಧನೆ ಮಾಡಿಕೊಳ್ಳಬಲ್ಲರು, ಅತಿಶಯ ಬುದ್ಧಿವಂತರು ಹೇಗೆ ಅನ್ಯರನ್ನು ವಂಚಿಸಲು ಶಕ್ತರು ಮುಂತಾದ ವಿಚಾರಗಳೆನ್ನೆಲ್ಲಾ ಹಲವು ಕಥೆಗಳ ಮೂಲಕ್ ವಿಮರ್ಶಿಸಲಾಗಿದೆ.

ಮೂರ್ಖರೊಂದಿಗಿನ ವ್ಯವಹಾರ

ಪಂಚತಂತ್ರದಲ್ಲಿ ಮೂರ್ಖರನ್ನು ಅತ್ಯಂತ ನಿಕೃಷ್ಟರಾಗಿ ಚಿತ್ರಿಸಿರುವ ಅನೇಕ ಉಕ್ತಿಗಳು ಹಾಗೂ ಕಥೆಗಳು ಕಂಡುಬರುತ್ತವೆ. ಅಲ್ಲದೆ ಮೂರ್ಖರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ನೀತಿ, ಮೂರ್ಖರಿಗೆ ಉಪದೇಶ ಮಾಡಿದರೆ ಏನಾಗುತ್ತದೆಂದು ತಿಳಿಸುವುದಕ್ಕಾಗಿಯೇ ಕೆಲವು ಕಥೆಗಳು ಬರುತ್ತವೆ.

ಅದೃಷ್ಟದ ಪಾತ್ರ

ಕೇವಲ ಅದೃಷ್ಟವನ್ನು ನಂಬಿ ಇರಲಾಗದು, ಪುರುಷಪ್ರಯತ್ನ ಬೇಕೆಂದು ಪ್ರತಿಪಾದಿಸುವ ಕಥೆಯ ಜೊತೆಗೇ ವಿಧಿನಿಯಮವನ್ನು ಮೀರಲು ಯಾರಿಗೆ ತಾನೇ ಸಾಧ್ಯ ಅಥವಾ ದೈವಾನುಕೂಲವಿಲ್ಲದಿದ್ದರೆ ಕಾರ್ಯಸಾಧನೆಯಾಗದು ಎಂದು ತೋರಿಸುವ ಕಥೆಯೂ ಇದೆ!

ಪ್ರಯತ್ನಶೀಲನಾಗಿರುವ ಪುರುಷಸಿಂಹನಿಗೆ ಲಕ್ಷ್ಮಿಯು ಒಲಿಯುವಳು ಆದರೆ ಹೇಡಿಗಳು ಅದೃಷ್ಟದಿಂದಲೇ ಎಲ್ಲವೂ ಪ್ರಾಪ್ತವಾಗುವುದು ಎಂದು ನುಡಿಯುತ್ತಾರೆ ಎಂಬ ಉಕ್ತಿಯು ಕಥೆಯೊಂದರಲ್ಲಿ ಬಂದರೆ, ಕಥೆಯೊಂದರಲ್ಲಿ ವ್ಯಾಪಾರಿಯ ಪುತ್ರನೊಬ್ಬನು ಏನೇನೂ ಪ್ರಯತ್ನವಿಲ್ಲದಿದ್ದರೂ ತನಗೆ ಪ್ರಾಪ್ತವಿದ್ದಷ್ಟನ್ನು ಪಡೆದನು ಎಂದು ವಿವರಿಸಲು ಈ ಮಾತು ಬರುತ್ತದೆ – “ಮನುಷ್ಯನು ತನಗೆ ಪ್ರಾಪ್ತವಿದ್ದಷ್ಟು ಹಣವನ್ನು ಮಾತ್ರ ಪಡೆಯುತ್ತಾನೆ. ದೇವರಿಗೂ ಕೂಡ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾನು ದುಃಖಿಸುವುದಿಲ್ಲ ಅಥವಾ ಆಶ್ಚರ್ಯವನ್ನೂ ಪಡುವುದಿಲ್ಲ. ನನ್ನದು ಯಾವುದಿದೆಯೋ ಅದೆಂದಿಗೂ ಪರರದಾಗುವುದಿಲ್ಲ”

ಕೊನೆಗೆ…

ಇವಿಷ್ಟೇ ಅಲ್ಲದೆ ಇತರ ಅನೇಕ ವಿಷಯಗಳನ್ನು ಪಂಚತಂತ್ರದಿಂದ ಕಲಿತು ಇಂದಿನ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದು. ಹೇಗೆ ಎಲ್ಲಾ ಕಡೆ ಸತ್ಯ ನುಡಿದರೆ ಸ್ವಾರ್ಥದ ನಾಶವಾಗುತ್ತದೆ, ಮಾತನಾಡಬಾರದ ಸಂದರ್ಭದಲ್ಲಿ ಅತಿಯಾಗಿ ಮಾತನಾಡಿದರೆ ಏನಾಗುತ್ತದೆ, ಹಿತವಚನವನ್ನು ಕೇಳದಿದ್ದರೆ ಆಗುವ ಪರಿಣಾಮ, ಬಡತನದ ಕಷ್ಟಗಳು, ಸರಿಯಾಗಿ ಪರೀಕ್ಷಿಸದೆ ಕೈಗೊಂಡ ಕೆಲಸಗಳಿಗಾಗುವ ಸೋಲು, ಅಯೋಗ್ಯರನ್ನು ಪೂಜಿಸುವುದರ ದುಷ್ಪರಿಣಾಮ, ಅತಿಯಾಸೆಯ ಫಲ, ನೀಚರನ್ನು ಆಡಳಿತಸ್ಥಾನದಲ್ಲಿ ನೇಮಿಸಿಕೊಳ್ಳುವುದರಿಂದಾಗುವ ಹಾನಿ, ಅನೇಕ ಜನರ ವಿರೋಧವನ್ನು ಕಟ್ಟಿಕೊಳ್ಳಬಾರದೆಂಬ ವಿವೇಕ, ಯಾರಿಗೆ ಆಶ್ರಯ ನೀಡಬೇಕು, ಯಾರಿಗೆ ನೀಡಬಾರದೆಂಬ ವಿವೇಕ, ಒಗ್ಗೂಡಿ ಬಲವಂತನನ್ನು ಎದುರಿಸುವ ಬಗೆ, ಕಾಲಬಂದಾಗ ಸೇವಕನ ಮಾತನ್ನೂ ಯಜಮಾನನು ನಡೆಸಿಕೊಡಬೇಕಾಗುವ ಸಂದರ್ಭಗಳು, ಸ್ವಯಂಕೃತ ಅಪರಾಧಗಳ ಫಲ, ಸ್ವಜಾತಿಯವರನ್ನು ನಿರ್ಲಕ್ಷಿಸಿ ಬೇರೆಯವರನ್ನು ಹತ್ತಿರಮಾಡಿಕೊಂಡಾಗ ಆಗುವ ಸಮಸ್ಯೆಗಳು, ಶೌರ್ಯ ಮತ್ತು ವೀರಸ್ವರ್ಗದ ಮಹತ್ವ, ಸ್ವಾರ್ಥ ಸಾಧನೆ, ಉಪಾಯ ಅಪಾಯಗಳ ಮುಂದಾಲೋಚನೆ ಮುಂತಾದ ನಾವು ಪ್ರಸ್ತುತ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಅನೇಕ ವಿಷಯಗಳ ಬಗ್ಗೆ ಪಂಚತಂತ್ರದ ಕಥೆಗಳಲ್ಲಿ ಬರುತ್ತವೆ.

ಪಂಚತಂತ್ರದ ಕಥೆಗಳು ಕೇವಲ ಮಕ್ಕಳ ಕಥೆಗಳಲ್ಲ, ಬದಲಾಗಿ ಈಗಿನ ಪರಿಸ್ಥಿತಿಯಲ್ಲಿ ಅದರಿಂದ ಎಲ್ಲರಿಗೂ ತಿಳಿದುಕೊಳ್ಳುವುದು ಬಹಳಷ್ಟಿದೆ. ಆದರೆ ಅದಕ್ಕಾಗಿ ಈಗಿರುವ ಮಕ್ಕಳ ಪುಸ್ತಕಗಳನ್ನು ಅವಲಂಭಿಸದೆ, ಮೂಲ ಸಂಸ್ಕೃತವನ್ನೋ ಅಥವಾ ಮೂಲದ ಅನುವಾದವನ್ನೋ ನಾವು ಓದಿಕೊಂಡೂ ಮಕ್ಕಳಿಗೂ ತಿಳಿಸಿಕೊಡಬೇಕಾಗಿದೆ.

ಮೂಲ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನುಳ್ಳ ಪುಸ್ತಕವು ಈಗ ಲಭ್ಯವಿದೆ. ಕೊಂಡು ಓದಲು ಇಲ್ಲಿ ನೋಡಿ – Panchatantra Kannada Book


Kannada Panchatantra Book

April 28, 2018

[ಈ ಮೊದಲನೆಯ ಮುದ್ರಣದ ಎಲ್ಲಾ ಪ್ರತಿಗಳೂ ಮುಗಿದಿದ್ದು, ಪುಸ್ತಕದ ಮೂರನೆಯ ಆವೃತ್ತಿಯ ಬಗ್ಗೆ ಇಲ್ಲಿ ನೋಡಬಹುದು]

ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಳಗೆ ಮಾಹಿತಿಯನ್ನು ಒದಗಿಸಲಾಗಿದೆ. ಪುಸ್ತಕದ ಕೆಲವು ಪುಟಗಳನ್ನು ಈ ಲೇಖನದ ಕೊನೆಯಲ್ಲಿ ನೋಡಬಹುದು.

The full Kannada translation of Vishnu Sharma’s original Sanskrit Panchatantram is now available in the book form.

Title – ಪಂಚತಂತ್ರ (Panchatantra – A Kannada Translation)
Author: Bharata Bhasker Rao
Book type: Paperback
Number of pages: 294
Year of publication: 2018
ISBN-13: 978-93-5311-033-8
Book size: 5.5″x8.5″
Weight: 360g

MRP: Rs. 275/-

Online buying options

 1. Buying directly from the author (Preferred option): Please drop a mail to panchatantra.kannada@gmail.com or send a message to twitter handle @PanchatantraKan You will be sent the details of the payment options. Currently UPI and NEFT payment modes are available. Once the payment is received and shipping address is obtained via mail, the book will be shipped to your address via speed post. (Shipping is only within India at Rs 275/- which includes shipping charges)
 2. Buying online from Navakarnataka
 3. On Amazon
 4. TotalKannada
 5. TotalKarnataka

Stores options

 1.  All book stores of Navakarnataka Publications across Karnataka
 2. Vedanta Book House, Chamarajpet, Bangalore
 3. TotalKannada Book stores, Jayanagar, Bangalore

A few sample pages from the book:

cover-page

pg1

pg2

pg4

pg5

pg6

pg7

pg67

pg68

pg69


ಪಂಚತಂತ್ರ – ಅಪರೀಕ್ಷಿತಕಾರಕ ಕನ್ನಡಾನುವಾದ (Panchatantra – Aparikshitakaraka Kannada translation

January 30, 2018

ಪಂಚತಂತ್ರದ ಕೊನೆಯ ಹಾಗೂ 5ನೇ ತಂತ್ರವಾದ ಅಪರೀಕ್ಷಿತಕಾರಕದ ಕನ್ನಡಾನುವಾದವನ್ನು ಇಲ್ಲಿ ಓದಬಹುದು. ಅಪರೀಕ್ಷಿತಕಾರಕದಲ್ಲಿ, ಸರಿಯಾಗಿ ಪರಿಶೀಲಿಸದೆ ಮಾಡಿದ ಕೆಲಸಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಲವು ಕುತೂಹಲಕಾರಿ ಕಥೆಗಳ ಮೂಲಕ ವಿವರಿಸಲಾಗಿದೆ.

ಈಗಾಗಲೇ ಅನುವಾದಗೊಂಡಿರುವ ಭಾಗಗಳನ್ನು ಕೆಳಗೆ ಕೊಟ್ಟ URL ಗಳನ್ನು ಬಳಸಿ ಓದಬಹುದು:
ಪಂಚತಂತ್ರದ ಮುಖಪುಟ
ತಂತ್ರ 1 – ಮಿತ್ರಭೇದ
ತಂತ್ರ 2 – ಮಿತ್ರಸಂಪ್ರಾಪ್ತಿ
ತಂತ್ರ 3 – ಕಾಕೋಲೂಕೀಯ
ತಂತ್ರ 4 – ಲಬ್ಧಪ್ರಣಾಶ

ಪಂಚತಂತ್ರ – ಲಬ್ಧಪ್ರಣಾಶ ಕನ್ನಡಾನುವಾದ (Panchatantra – Labdhapranasha Kannada translation)

December 29, 2017

ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದ ಕನ್ನಡಾನುವಾದವನ್ನು ಇಲ್ಲಿ ನೋಡಬಹುದು. ಈ ತಂತ್ರದಲ್ಲಿ ಮಂಗ ಹಾಗೂ ಮೊಸಳೆಯ ಸೂತ್ರ ಕಥೆಯ ಮೂಲಕ ಪಡೆದುಕೊಂಡದ್ದನ್ನು ಮೂರ್ಖತನದಿಂದ ಕಳೆದುಕೊಳ್ಳುವುದರ ಬಗ್ಗೆ ವಿವರಿಸಲಾಗಿದೆ. ಇದು ಪಂಚತಂತ್ರದ ಐದು ತಂತ್ರಗಳಲ್ಲಿ ಅತ್ಯಂತ ಚಿಕ್ಕ ಭಾಗವಾಗಿದ್ದು 11 ಉಪಕಥೆಗಳಿಂದ ಕೂಡಿದೆ.

 

ಈಗಾಗಲೇ ಅನುವಾದಗೊಂಡಿರುವ ಭಾಗಗಳನ್ನು ಕೆಳಗೆ ಕೊಟ್ಟ URL ಗಳನ್ನು ಬಳಸಿ ಓದಬಹುದು:
ಪಂಚತಂತ್ರದ ಮುಖಪುಟ
ತಂತ್ರ 1 – ಮಿತ್ರಭೇದ
ತಂತ್ರ 2 – ಮಿತ್ರಸಂಪ್ರಾಪ್ತಿ
ತಂತ್ರ 3 – ಕಾಕೋಲೂಕೀಯ

ಪಂಚತ್ರಂತ್ರ – ಕಾಕೋಲೂಕೀಯ ಕನ್ನಡಾನುವಾದ (Panchatantra – Kakolukiya Kannada translation)

December 20, 2017

ಪಂಚತಂತ್ರ ಮೂರನೆಯ ತಂತ್ರವಾದ ಕಾಕೋಲೂಕೀಯವನ್ನು ಇಲ್ಲಿ ಓದಬಹುದು. ಈ ತಂತ್ರದಲ್ಲಿ ಕಾಗೆ ಹಾಗೂ ಗೂಬೆಗಳ ಮಧ್ಯೆ ಇರುವ ಸಹಜ ಶತ್ರುತ್ವದ ಕುತೂಹಕಾರಿ ಸೂತ್ರಕಥೆಯ ಮೂಲಕ ಸಂಧಿ, ಯುದ್ಧ, ಆಸನ, ಯಾನ, ಆಶ್ರಯ, ದ್ವೈಧೀಭಾವ ಮುಂತಾದ ಶತ್ರುಗಳನ್ನು ಗೆಲ್ಲಲು ಬಳಸುವ ಉಪಾಯಗಳನ್ನು ಅನೇಕ ಕಥೆಗಳ ಮೂಲಕ ವಿವರಿಸಲಾಗಿದೆ.

ಮೂಲ ಸಂಸ್ಕೃತ ಪಂಚತಂತ್ರದ ಕನ್ನಡಾನುವನ್ನು ಇಲ್ಲಿ ಕೊಡಲಾಗಿತ್ತು.

ಮೊದಲನೆಯ ತಂತ್ರವಾದ ಮಿತ್ರಭೇದವನ್ನು ಇಲ್ಲಿ ಓದಬಹುದು.

ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯನ್ನು ಇಲ್ಲಿ ಓದಬಹುದು.


ಪಂಚತಂತ್ರ – ಮಿತ್ರಸಂಪ್ರಾಪ್ತಿ ಕನ್ನಡಾನುವಾದ (Panchatantra – Mitrasamprapti Kannada translation)

November 1, 2017

ಮೂಲ ಸಂಸ್ಕೃತ ಪಂಚತಂತ್ರದ ಕನ್ನಡಾನುವನ್ನು ಇಲ್ಲಿ ಕೊಡಲಾಗಿತ್ತು ಮತ್ತು ಮೊದಲನೆಯ ತಂತ್ರವಾದ ಮಿತ್ರಭೇದವನ್ನು ಇಲ್ಲಿ ಕೊಡಲಾಗಿತ್ತು.

ಈಗ ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯ ಕನ್ನಡಾನುವಾದವನ್ನು ಇಲ್ಲಿ ಓದಬಹುದು.


ಪಂಚತಂತ್ರ – ಕನ್ನಡಾನುವಾದ (Panchatantra Kannada translation)

September 23, 2017

ಪಂಚತ್ರಂತ್ರದ ಕಥೆಗಳು ಸುಮಾರು ಎಲ್ಲರಿಗೂ ಚಿರಪರಿಚಿತವೇ. ಇಂಗ್ಲೀಷ್ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಮಕ್ಕಳಿಗಾಗಿ ಇರುವ ಪುಸ್ತಕಗಳಲ್ಲಿ ಈ ಕಥೆಗಳು ಲಭ್ಯವಿದೆ. ಆದರೆ ಪಂಚತಂತ್ರವನ್ನು ಮೂಲ ಸಂಸ್ಕೃತದಲ್ಲಿ ಓದಿದಾಗ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ.

 • ಪಂಚತ್ರಂತ್ರದ ವಿವಿಧ ಕಥೆಗಳು ಹೆಚ್ಚಿನದಾಗಿ ನಮಗೆ standalone ರೀತಿಯಲ್ಲಿ ಹೇಳಲ್ಪಟ್ಟಿರುತ್ತವೆ. ಅಂದರೆ ಯಾವುದೇ ಕಥೆಯು ಪಂಚತ್ರಂತ್ರದ ಐದು ತಂತ್ರಗಳಲ್ಲಿ ಬರುವ ಮೂಲ ಕಥೆಗೆ ಹೇಗೆ ಪೂರಕವಾಗಿ ಬರುತ್ತದೆ ಎನ್ನುವುದು ಮೂಲವನ್ನು ಓದದಿದ್ದರೆ ಸ್ಪಷ್ಟವಾಗುವುದಿಲ್ಲ.
 • ಐದು ತಂತ್ರಗಳನ್ನು ತಿಳಿಸುವ ಮೂಲ ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ಯಾವ ವಾದವನ್ನು ಪ್ರತಿಪಾದಿಸಲು ಉಪಕಥೆಯನ್ನು ಸಂದರ್ಭೋಚಿತವಾಗಿ ಹೇಗೆ ಬಳಸಿವೆ ಎಂಬುದನ್ನು ಅರಿಯುವುದು ಮುಖ್ಯ.
 • ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ವಾದವನ್ನು ಅಥವಾ ನಿಲುವನ್ನು ಸಮರ್ಥಿಸಿಕೊಳ್ಳಲು ಹಲವು ಸುಭಾಷಿತಗಳನ್ನು ಹಾಗೂ ಲೋಕೋಕ್ತಿಗಳನ್ನು ಯಥೇಚ್ಛವಾಗಿ ಬಳಸಿವೆ. ಇದಾವುದು ಬಹುತೇಕ ಮಕ್ಕಳಿಗೆ ಲಭ್ಯವಿರುವ ಕಥೆಗಳಲ್ಲಿ ಬಾರದೇ ಇರುವುದರಿಂದ ಒಂದು ಒಳ್ಳೆಯ ಜ್ಞಾನಭಂಡಾರವನ್ನೇ ಕಳೆದುಕೊಂಡಂತೆ ಆಗಿದೆ.

ಈ ದೃಷ್ಟಿಯಿಂದ ಮೂಲ ಸಂಸ್ಕೃತ ಪಂಚತಂತ್ರದ ಕನ್ನಡ ಅನುವಾದವನ್ನು ಇಲ್ಲಿ ಓದಬಹುದು.

The Kannada translation of the original Panchatantra in Samskritam by Vishnu Sharma’s can be read here.


CPU hotplug support in PowerKVM

August 9, 2016
Introduction
Pre requisites
Basic hotplug operation
More options
Driving via libvirt
KVM Forum 2016 presentation

Introduction

CPU hotplug is a technique or a feature that can be used to dynamically increase or decrease the number of CPUs available in the system. In order for the dynamically added CPUs to become available to the applications, CPU hotplug should be supported appropriately at multiple layers like in the firmware and operating system. This blog post mainly looks at the emerging support for CPU hotplug in KVM virtualization for PowerPC sPAPR virtual machines (pseries guests). In case of virtual machines, CPU hotplug is typically used to vertically scale up or scale down the guest CPUs at runtime based on the requirements. This feature is expected to be useful for supporting vertical scaling of PowerPC guests in KVM Cloud environments. Memory hotplug, which is also part of VM scale up requirement was discussed in my previous post.

CPU hotplug is supported for PowerPC sPAPR by means of device_add/device_del interfaces and not via the legacy cpu-add interface.

Pre requisites

CPU hotplug support for PowerPC sPAPR guests is now part of QEMU upstream and is expected to be available starting from QEMU-2.7 release. This implies that CPU hotplug support is available for pseries machine types starting from pseries-2.7.

In addition to QEMU and guest kernel (which btw has existed for a long time), some changes were done in PowerPC RAS tools also to support CPU hotplug. The minimum version of these packages needed in the guest are listed below:

Package Minimum required version
powerpc-utils 1.2.26
ppc64_diag 2.6.8
librtas 1.3.9

rtas_errd daemon which is provided by ppc64_diag package needs to be running in the guest for CPU hotplug to function correctly.

Basic hotplug operation

This section describes the steps to be followed by a QEMU user for CPU hotplug operation.

* CPU hotplug will be performed in core granularity on PowerPC. For eg. if the core has 8 threads, then one CPU hotplug operation will result in addition of 1 core with 8 CPU threads.

* Start a single thread guest with those command line options required for CPU hotplug.

qemu-system-ppc64 … –smp 2,cores=4,threads=1,maxcpus=4 -cpu POWER8E

-smp 2 will start the guest with 2 CPUs.
maxcpus=4 specifies that this guest can have a maximum of 4 CPUs, which implies 2 more CPUs can be added via CPU hotplug operations.
cores=4,threads=1 specifies the topology of the guest (4 cores each with 1 thread)
-cpu POWER8E specifies the guest CPU model

* Ensure that rtas_errd service is running inside the guest.

# ps aux | grep rtas
root      2518  0.3  0.0   6016  3968 ?        Ss   11:52   0:00 rtas_errd

[root@localhost ~]# lscpu
CPU(s):                2
On-line CPU(s) list:   0,1
Thread(s) per core:    1

* Connect to QEMU monitor from the host to discover hotpluggable CPUs and issue CPU hotplug command.

query-hotpluggable-cpus is the QMP interface while “info hotpluggable-cpus” is the HMP variant of the same.

(qemu) info hotpluggable-cpus
Hotpluggable CPUs:

type: “POWER8E-spapr-cpu-core”
vcpus_count: “1”
CPUInstance Properties:
core-id: “3”

type: “POWER8E-spapr-cpu-core”
vcpus_count: “1”
CPUInstance Properties:
core-id: “2”

type: “POWER8E-spapr-cpu-core”
vcpus_count: “1”
qom_path: “/machine/unattached/device[2]”
CPUInstance Properties:
core-id: “1”

type: “POWER8E-spapr-cpu-core”
vcpus_count: “1”
qom_path: “/machine/unattached/device[1]”
CPUInstance Properties:
core-id: “0”

type specifies the CPU core device type to be used with device_add command
vcpus_count specifies the number of threads the core has
core-id specifies the value for the core-id property that needs to be specified during device_add
qom_path if present implies that the CPU core is already plugged in, if absent it implies that the same can be hotplugged

To hot add a CPU,

(qemu) device_add POWER8E-spapr-cpu-core,id=core2,core-id=2

The added CPU core should be visible within the guest as well as in QEMU monitor

[root@localhost ~]# lscpu
CPU(s):                3
On-line CPU(s) list:   0-2
Thread(s) per core:    1

qemu) info hotpluggable-cpus
Hotpluggable CPUs:

type: “POWER8E-spapr-cpu-core”
vcpus_count: “1”
CPUInstance Properties:
core-id: “3”

  type: “POWER8E-spapr-cpu-core”
  vcpus_count: “1”
  qom_path: “/machine/peripheral/core2” <— hot added CPU
  CPUInstance Properties:
    core-id: “2”

type: “POWER8E-spapr-cpu-core”
vcpus_count: “1”
qom_path: “/machine/unattached/device[2]”
CPUInstance Properties:
core-id: “1”

type: “POWER8E-spapr-cpu-core”
vcpus_count: “1”
qom_path: “/machine/unattached/device[1]”
CPUInstance Properties:
core-id: “0”

To hot remove a CPU,

(qemu) device_del core2

More options

In this section a few more options and other possibilities with CPU hotplug are explored.

* NUMA guest – The NUMA semantics for CPU hotplug is likely to undergo a change, but this is how it works currently:

qemu-system-ppc64 … –smp 2,cores=4,threads=1,maxcpus=4 -numa node,nodeid=0,cpus=0,cpus=2 -numa node,nodeid=1,cpus=1,cpus=3

This guest will have 4 CPUs with existing CPU=0 and hotpluggable CPU=2 on NUMA node 0 while existing CPU=1 and hotpluggable CPU=3 on NUMA node 1. Currently the NUMA node affinity of the CPUs isn’t shown in the HMP/QMP queries.

The steps to discover, hot-add and hot-remove are same as shown in the previous example, just that the hot-added CPU will automatically end up on the NUMA node that was specified during boot using -numa cmdline.

The CPU added like below

(qemu) device_add POWER8E-spapr-cpu-core,id=core2,core-id=2

will end up in NUMA node 1.

[root@localhost ~]# numactl -H | grep cpus
node 0 cpus: 0 2
node 1 cpus: 1

* CPU compat option

The legacy way to specify CPU compat option is like this:

-cpu host,compat=power7

However with QEMU-2.7, compat option can be specified using -global option also so that the specified compat level is applied uniformly to boot CPUs as well as hotplugged CPUs.

-cpu host -global driver=host-powerpc64-cpu,property=compat,value=power7

The hotplug steps are similar to the previous example.

(qemu) device_add host-spapr-cpu-core,id=core2,core-id=2

Note that compat option will not be specified with every hotplugged CPU as it has already been set as global option which applies to hotplugged CPUs as well.

* Migration
If a guest that has undergone CPU hotplug operations needs to be migrated to another host, like any other device, CPU core device should be specified explicitly on the target side using  -device options.

If following hotplug operation is done at the source,

(qemu) device_add POWER8E-spapr-cpu-core,id=core2,core-id=2

then at the target host, the guest should be started with the following options:
qemu-system-ppc64 … -device POWER8E-spapr-cpu-core,id=core2,core-id=2

* Example of SMT4 guest

-smp 4,cores=4,threads=4,maxcpus=16

(qemu) info hotpluggable-cpus
Hotpluggable CPUs:

type: “host-spapr-cpu-core”
vcpus_count: “4”
CPUInstance Properties:
core-id: “12”

type: “host-spapr-cpu-core”
vcpus_count: “4”
CPUInstance Properties:
core-id: “8”

type: “host-spapr-cpu-core”
vcpus_count: “4”
CPUInstance Properties:
core-id: “4”

type: “host-spapr-cpu-core”
vcpus_count: “4”
qom_path: “/machine/unattached/device[1]”
CPUInstance Properties:
core-id: “0”

(qemu) device_add host-spapr-cpu-core,core-id=12,id=core4
In this example, two things are worth noting:

– The core-ids listed by the HMP query will be 0, 4, 8, … since this is an SMT4 guest.
– Any CPU can be hot added like we added core-id=12 here.

Driving via libvirt

Support for this device based CPU hotplug is still under development in libvirt.

KVM Forum 2016 presentation

The slides for CPU hotplug KVM Forum 2016 presentation can be found here and the presentation video can be seen here.