ಪಂಚತಂತ್ರ

ಪಂಚತ್ರಂತ್ರದ ಕಥೆಗಳು ಸುಮಾರು ಎಲ್ಲರಿಗೂ ಚಿರಪರಿಚಿತವೇ. ಇಂಗ್ಲೀಷ್ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಮಕ್ಕಳಿಗಾಗಿ ಇರುವ ಪುಸ್ತಕಗಳಲ್ಲಿ ಈ ಕಥೆಗಳು ಲಭ್ಯವಿದೆ. ಆದರೆ ಪಂಚತಂತ್ರವನ್ನು ಮೂಲ ಸಂಸ್ಕೃತದಲ್ಲಿ ಓದಿದಾಗ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ.

 • ಪಂಚತ್ರಂತ್ರದ ವಿವಿಧ ಕಥೆಗಳು ಹೆಚ್ಚಿನದಾಗಿ ನಮಗೆ standalone ರೀತಿಯಲ್ಲಿ ಹೇಳಲ್ಪಟ್ಟಿರುತ್ತವೆ. ಅಂದರೆ ಯಾವುದೇ ಕಥೆಯು ಪಂಚತ್ರಂತ್ರದ ಐದು ತಂತ್ರಗಳಲ್ಲಿ ಬರುವ ಮೂಲ ಕಥೆಗೆ ಹೇಗೆ ಪೂರಕವಾಗಿ ಬರುತ್ತದೆ ಎನ್ನುವುದು ಮೂಲವನ್ನು ಓದದಿದ್ದರೆ ಸ್ಪಷ್ಟವಾಗುವುದಿಲ್ಲ.
 • ಐದು ತಂತ್ರಗಳನ್ನು ತಿಳಿಸುವ ಮೂಲ ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ಯಾವ ವಾದವನ್ನು ಪ್ರತಿಪಾದಿಸಲು ಉಪಕಥೆಯನ್ನು ಸಂದರ್ಭೋಚಿತವಾಗಿ ಹೇಗೆ ಬಳಸಿವೆ ಎಂಬುದನ್ನು ಅರಿಯುವುದು ಮುಖ್ಯ.
 • ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ವಾದವನ್ನು ಅಥವಾ ನಿಲುವನ್ನು ಸಮರ್ಥಿಸಿಕೊಳ್ಳಲು ಹಲವು ಸುಭಾಷಿತಗಳನ್ನು ಹಾಗೂ ಲೋಕೋಕ್ತಿಗಳನ್ನು ಯಥೇಚ್ಛವಾಗಿ ಬಳಸಿವೆ. ಇದಾವುದು ಬಹುತೇಕ ಮಕ್ಕಳಿಗೆ ಲಭ್ಯವಿರುವ ಕಥೆಗಳಲ್ಲಿ ಬಾರದೇ ಇರುವುದರಿಂದ ಒಂದು ಒಳ್ಳೆಯ ಜ್ಞಾನಭಂಡಾರವನ್ನೇ ಕಳೆದುಕೊಂಡಂತೆ ಆಗಿದೆ.

ಈ ದೃಷ್ಟಿಯಿಂದ ಇಲ್ಲಿ ಮೂಲ ಸಂಸ್ಕೃತ ಪಂಚತಂತ್ರದ ಕನ್ನಡ ಅನುವಾದವನ್ನು ಕೊಡಲಾಗಿದೆ. ಮೂಲ ಸಂಸ್ಕೃತದಿಂದ ಸುಲಭ ಸಂಸ್ಕೃತಕ್ಕೆ ಅನುವಾದವುಳ್ಳ ಸಂಸ್ಕೃತ ಭಾರತೀ, ಬೆಂಗಳೂರು ಪ್ರಕಟಿಸಿರುವ ಡಾ॥ ವಿಶ್ವಾಸರ “संक्षेप – पञ्चतन्त्रम्” ಹಾಗೂ ಮೂಲ ಸಂಸ್ಕೃತದಿಂದ ಹಿಂದಿಗೆ ಅನುವಾದವುಳ್ಳ ಕೃಷ್ಣದಾಸ ಅಕೆಡೆಮಿ, ವಾರಣಾಸಿ ಪ್ರಕಟಿಸಿರುವ ಡಾ॥ ಸುಧಾಕರ ಮಾಲವೀಯರ “पञ्चतन्त्रम्” ಗ್ರಂಥಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ.

ಸಂಸ್ಕೃತ ಪಂಚತಂತ್ರದ ಯಾವುದೇ ಅಂಶವನ್ನೂ ಕೈಬಿಡದ ಸಂಪೂರ್ಣ ಅನುವಾದವನ್ನು ಇಲ್ಲಿ ಕಾಣಬಹುದು. ಅನುವಾದದ ಬಗ್ಗೆ ಒಂದೆರಡು ಮಾತು:

 • ಅನುವಾದಿಸುವಾಗ ಸಂಸ್ಕೃತ ಶಬ್ದಗಳು ಕನ್ನಡದಲ್ಲಿ ಲಭ್ಯವಿದ್ದಲ್ಲಿ, ಆದಷ್ಟು ಮಟ್ಟಿಗೆ ಅವುಗಳನ್ನೇ ಬಳಸಲಾಗಿದೆ.
 • ಸಾಧ್ಯವಾದಷ್ಟು ಸಂಸ್ಕೃತವಾಕ್ಯವನ್ನು ಭಾಷಾನುಕೂಲಕ್ಕಾಗಿ ತುಂಡರಿಸದೆ ಮೂಲದಲ್ಲಿ ಇರುವಂತೆಯೇ ಅನುವಾದ ಮಾಡಲಾಗಿದೆ.
 • ಪಂಚತಂತ್ರವು ಗದ್ಯ ಹಾಗೂ ಪದ್ಯ – ಎರಡನ್ನೂ ಒಳಗೊಂಡಿದೆ. ಶ್ಲೋಕಗಳ ಅನುವಾದವನ್ನು ಇಲ್ಲಿ ಪ್ರತ್ಯೇಕವಾಗಿ ಅಥವಾ ಸಂಖ್ಯೆಯ ಮೂಲಕ ತೋರಿಸಿಲ್ಲದಿದ್ದರೂ ಸಂಸ್ಕೃತ ಪಂಚತಂತ್ರದ ಜೊತೆಗೆ ಈ ಅನುವಾದವನ್ನು ಹೊಂದಿಸಿಕೊಂಡು ಓದಿಕೊಳ್ಳಬಹುದು.
 • ಕೊನೆಯದಾಗಿ ಇದು ಭಾಷಾ ವಿದ್ಯಾರ್ಥಿಯ ಭಾಷಾಂತರದ ಪ್ರಯತ್ನ. ಹಾಗಾಗಿ ಸಹಜವಾಗಿ ದೋಷಗಳು ಇರಬಹುದು, ಗಮನಕ್ಕೆ ತಂದಲ್ಲಿ ಸರಿಪಡಿಸುತ್ತೇನೆ. ಅಲ್ಲದೆ ಕನ್ನಡವನ್ನು phonetics ರೀತಿಯಲ್ಲಿ type ಮಾಡಿರುವುದರಿಂದ ಕೆಲವು spelling mistakes ಸೇರಿಕೊಂಡಿವೆ, ಗಮನಕ್ಕೆ ಬಂದ ಕೂಡಲೆ ಸರಿಪಡಿಸುತ್ತಿದ್ದೇನೆ.

ಹೆಸರೇ ಹೇಳುವಂತೆ ಪಂಚತಂತ್ರದಲ್ಲಿ ಒಟ್ಟು ಐದು ತಂತ್ರಗಳಿವೆ:

 1. ಮಿತ್ರಭೇದ: ಕಾಡಿನ ರಾಜನಾದ ಸಿಂಹ ಹಾಗೂ ನಾಡಿನಿಂದ ಬಂದ ಎತ್ತಿನ ಮಧ್ಯೆ ಉಂಟಾದ ಅಸಹಜ ಮೈತ್ರಿಯ ಮೋಹದಲ್ಲಿ ಸಿಂಹವು ಕರ್ತವ್ಯಭ್ರಷ್ಟನಾಗಿ ಪ್ರಜೆಗಳು ತೊಂದರೆಗೆ ಸಿಲುಕಿದಾಗ ಸಿಂಹದ ಮಂತ್ರಿಯಾಗಿದ್ದ ನರಿಯು ಈ ಮೈತ್ರಿಯನ್ನು ಹೇಗೆ ಒಡೆಯಿತು ಎಂಬುದನ್ನು ಇಲ್ಲಿ ತೋರಿಸಲಾಗಿದೆ.
 2. ಮಿತ್ರಸಂಪ್ರಾಪ್ತಿ: ಒಳ್ಳೆಯ ಮಿತ್ರರ ಪ್ರಾಪ್ತಿಯಿಂದ ಹೇಗೆ ಆಪತ್ತಿನಿಂದ ದೂರವಾಗಬಹುದೆಂದು ಕಾಗೆ, ಇಲಿ ಮತ್ತೆ ಆಮೆಯ ಕಥೆಯ ಮೂಲಕ ತೋರಿಸಲಾಗಿದೆ.
 3. ಕಾಕೋಲೂಕೀಯ: ಕಾಗೆಗಳಿಗೂ ಹಾಗೂ ಗೂಬೆಗಳಿಗೂ ಮಧ್ಯೆ ಇರುವ ವೈರತ್ವದ ಮೂಲಕ ವಿವಿಧ ಯುದ್ಧತಂತ್ರಗಳನ್ನು ಇಲ್ಲಿ ವಿವರಿಸಲಾಗಿದೆ.
 4. ಲಬ್ಧಪ್ರಣಾಶ: ಕಾರ್ಯವನ್ನು ಆರಂಭಿಸಿದ ಮೇಲೆ ಯಾರ ಬುದ್ಧಿಯು ನಾಶವಾಗದೆ ಚುರುಕಾಗಿ ಕೆಲಸಮಾಡುತ್ತದೆಯೋ ಅಂತವರು ಜಯಶಾಲಿಗಳಾಗುತ್ತಾರೆಂದು ಮೊಸಳೆ ಮತ್ತು ಮಂಗದ ಕಥೆಯ ಮೂಲಕ ತೋರಿಸಲಾಗಿದೆ.
 5. ಅಪರೀಕ್ಷಿತಕಾರಕ: ಸರಿಯಾಗಿ ವಿಚಾರ ಮಾಡೆದೆ ಕೈಗೊಂಡ ಕಾರ್ಯಗಳಿಂದ ಆಗುವ ಅನಾಹುತಗಳನ್ನು ವಿವಿಧ ಕಥೆಗಳ ಮೂಲಕ ತೋರಿಸಲಾಗಿದೆ.

ಮೂಲದಲ್ಲಿ ಉಪಕಥೆಗಳು ಕಥೆಯ ಜೊತೆಗೇ ಬರುತ್ತವೆ ಹಾಗೂ ಉಪಕಥೆಗಳ ಒಳಗೂ ಕೂಡ ಕಥೆಗಳು ಬರುತ್ತವೆ. ಉಪಕಥೆ ಮುಗಿದ ಮೇಲೆ ಹಿಂದಿನ ಕಥೆ ಮುಂದುವರೆಯುತ್ತದೆ. ಆದರೆ ಇಲ್ಲಿ ಓದುಗರ ಅನುಕೂಲಕ್ಕಾಗಿ ಮೂಲಕಥೆಯಿಂದ ಉಪಕಥೆಗಳನ್ನು hyperlinks ಮೂಲಕ ಓದಿ ಪುನಃ ಹಿಂದಿನ ಕಥೆಗೇ ಬಂದು ಓದುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಈ ಕೆಳಗೆ ಐದು ತಂತ್ರಗಳೂ ಹಾಗೂ ಅವುಗಳಲ್ಲಿ ಬರುವ ಉಪಕಥೆಗಳ hyperlinks ಗಳನ್ನು ಒಂದೇ ಕಡೆ ಕೊಡಲಾಗಿದೆ. ಓದುಗರು ಯಾವುದಾದರೂ ಕಥೆಯನ್ನು ಸ್ವತಂತ್ರವಾಗಿ ಓದಬಹುದು. ಆದರೆ ಉಪಕಥೆಗಳನ್ನು ಮೂಲಕಥೆಗಳ ಜೊತೆಗೆ ಓದಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

panchatantra-wm

ವಿಷ್ಣುಶರ್ಮನಿಂದ ರಾಜಾ ಅಮರಶಕ್ತಿಯ ಪುತ್ರರಾದ ಬಹುಶಕ್ತಿ, ಉಗ್ರಶಕ್ತಿ ಹಾಗೂ ಅನಂತಶಕ್ತಿಗೆ ಪಂಚತಂತ್ರದ ಉಪದೇಶ. ಚಿತ್ರ – Kum. Drashti Piyusha Patel

ಕಥಾಮುಖ (ವಿಷ್ಣುಶರ್ಮನು ಪಂಚತಂತ್ರವನ್ನು ಏಕೆ ಬರೆದನೆಂಬ ಕಥೆ)

 1. ಮಿತ್ರಭೇದ (<–ಇದನ್ನು ಮೊದಲು ಓದಿ ಮುಂದುವರೆಯಿರಿ!)
  1. ಬೆಣೆಯನ್ನು ಕಿತ್ತ ಮಂಗನ ಕಥೆ
  2. ಗೋಮಾಯು ದುಂದುಭಿ ಕಥೆ
  3. ದಂತಿಲ-ಗೋರಂಭರ ಕಥೆ
  4. ಆಷಾಢಭೂತಿ-ನರಿ-ದೂತಿಯ ಕಥೆ
  5. ಮಿಥ್ಯಾವಿಷ್ಣು-ನೇಕಾರ ಕಥೆ
  6. ಕಾಗೆ-ಚಿನ್ನದಹಾರ-ಕೃಷ್ಣಸರ್ಪದ ಕಥೆ
   1. ಬಕ ಹಾಗೂ ಏಡಿಯ ಕಥೆ
  7. ಸಿಂಹ-ಮೊಲದ ಕಥೆ
  8. ಹೇನು ಹಾಗೂ ತಿಗಣೆಯ ಕಥೆ
  9. ಚಂಡರವ ನರಿಯ ಕಥೆ
  10. ಒಂಟೆ ಕಾಕಾದಿ ಕಥೆ
  11. ಟಿಟ್ಟಿಭ-ಸಮುದ್ರ ಕಥೆ
   1. ಕಟ್ಟಿಗೆಯಿಂದ ಬಿದ್ದ ಆಮೆಯ ಕಥೆ
   2. ಮೂರು ಮೀನುಗಳ ಕಥೆ
   3. ಗುಬ್ಬಚ್ಚಿ ದಂಪತಿ ಹಾಗೂ ಆನೆಯ ಕಥೆ
  12. ಸಿಂಹ ಮತ್ತು ನರಿಯ ಕಥೆ
  13. ಸೂಚೀಮುಖ-ವಾನರ ಕಥೆ
  14. ವಾನರ ಹಾಗೂ ಗುಬ್ಬಚ್ಚಿ ದಂಪತಿ ಕಥೆ
  15. ಧರ್ಮಬುದ್ಧಿ ಮತ್ತು ಪಾಪಬುದ್ಧಿ ಕಥೆ
   1. ಮೂರ್ಖಬಕ ಹಾಗೂ ಮುಂಗುಸಿಯ ಕಥೆ
  16. ಲೋಹತಕ್ಕಡಿ ಹಾಗೂ ವ್ಯಾಪಾರಿಯ ಮಗನ ಕಥೆ
  17. ನೃಪಸೇವಕ ವಾನರ, ಕಳ್ಳ ಹಾಗೂ ಬ್ರಾಹ್ಮಣರ ಕಥೆ
 2. ಮಿತ್ರಸಂಪ್ರಾಪ್ತಿ
  1. ಹಿರಣ್ಯಕ – ತಾಮ್ರಚೂಡನ ಕಥೆ
   1. ಎಳ್ಳು ಮಾರುವ ಶಾಂಡಿಲಿಯ ಕಥೆ
    1. ಬೇಟೆಗಾರ, ಹಂದಿ ಮತ್ತು ನರಿಯ ಕಥೆ
   2. ವ್ಯಾಪಾರಿ ಪುತ್ರನ ಕಥೆ
  2. ಮಂದಭಾಗ್ಯ ಸೋಮಿಲಕನ ಕಥೆ
   1. ಎತ್ತಿನ ವೃಷಣಗಳನ್ನು ಅನುಸರಿಸಿದ ನರಿಯ ಕಥೆ
 3. ಕಾಕೋಲೂಕೀಯ
  1. ಕಾಗೆ – ಗೂಬೆಗಳ ವೈರತ್ವದ ಕಥೆ
   1. ಮೊಲ ಹಾಗು ಗಜೇಂದ್ರನ ಕಥೆ
   2. ಮೊಲ – ಕಪಿಂಜಲ ಕಥೆ
  2. ಮೂವರು ಧೂರ್ತರು, ಬ್ರಾಹ್ಮಣ ಹಾಗೂ ಆಡಿನ ಕಥೆ
  3. ಇರುವೆ ಹಾಗೂ ಸರ್ಪದ ಕಥೆ
  4. ಬ್ರಾಹ್ಮಣ ಹಾಗೂ ಸರ್ಪದ ಕಥೆ
   1. ಸ್ವರ್ಣಹಂಸ, ಸ್ವರ್ಣಪಕ್ಷಿ ಹಾಗೂ ರಾಜನ ಕಥೆ
  5. ಪಾರಿವಾಳ ಮತ್ತು ಬೇಟೆಗಾರನ ಕಥೆ
  6. ಕಳ್ಳ ಹಾಗೂ ವೃದ್ಧ ವ್ಯಾಪಾರಿಯ ವಧುವಿನ ಕಥೆ
  7. ಬ್ರಾಹ್ಮಣ, ಕಳ್ಳ ಹಾಗೂ ಬ್ರಹ್ಮರಾಕ್ಷಸನ ಕಥೆ
  8. ಹುತ್ತದಲ್ಲಿದ್ದ ಸರ್ಪದ ಕಥೆ
  9. ಬಡಗಿಯ ಹೆಂಡತಿಯ ಕಥೆ
  10. ಇಲಿಯ ಮದುವೆಯ ಕಥೆ
  11. ಚಿನ್ನದ ಹಿಕ್ಕೆಯನ್ನು ಹಾಕುವ ಪಕ್ಷಿ, ರಾಜ ಹಾಗೂ ಮಂತ್ರಿಯ ಕಥೆ
  12. ಸಿಂಹ, ನರಿ ಮತ್ತು ಗುಹೆಯ ಕಥೆ
  13. ಕಪ್ಪೆ ಮತ್ತು ಕೃಷ್ಣಸರ್ಪದ ಕಥೆ
   1. ತುಪ್ಪದಿಂದ ಕುರುಡನಾದ ಬ್ರಾಹ್ಮಣನ ಕಥೆ
 4. ಲಬ್ಧಪ್ರಣಾಶ
  1. ಗಂಗದತ್ತ ಮತ್ತು ಪ್ರಿಯದರ್ಶನ ಸರ್ಪದ ಕಥೆ
  2. ಸಿಂಹ – ಲಂಬಕರ್ಣ ಕಥೆ
  3. ಯುಧಿಷ್ಠಿರ ಕುಂಬಾರನ ಕಥೆ
   1. ಸಿಂಹ – ನರಿಯ ಮರಿಯ ಕಥೆ
  4. ಬ್ರಾಹ್ಮಣ, ಬ್ರಾಹ್ಮಣಿ ಮತ್ತು ಹೆಳವನ ಕಥೆ
  5. ನಂದ – ವರರುಚಿ ಕಥೆ
  6. ವಾಚಾಳಿ ಕತ್ತೆಯ ಕಥೆ
  7. ರೈತನ ಹೆಂಡತಿ, ನರಿ ಮತ್ತು ವಂಚಕನ ಕಥೆ
  8. ಘಂಟಾಧಾರಿ ಒಂಟೆಯ ಕಥೆ
  9. ನರಿ, ಸಿಂಹ, ಹುಲಿ ಮತ್ತು ಚಿರತೆಯ ಕಥೆ
  10. ವಿದೇಶಕ್ಕೆ ಹೋದ ನಾಯಿಯ ಕಥೆ
 5. ಅಪರೀಕ್ಷಿತಕಾರಕ

 

Advertisements

6 Responses to ಪಂಚತಂತ್ರ

 1. Rajeev Joshi says:

  Hi!
  I enjoyed reading your blog, Lots of thanks for the wonderful stories

  Nimma ee havyasavannu munduvaresi.

  Thanks,
  Rajeev

 2. Mohan Nagarajachar says:

  Sir.. Great work, I ll keep this collection to tell stories to my Kids/ Grandson (If I live until then).. Waiting for remaining 4 tantras stories…!! Bharatiya parampareyannu thilisikoduva nimmi havyasa anukaraniya haagu Abhinandaniya….!!

 3. ಪವನ್ says:

  ತುಂಬಾ ಚೆನ್ನಾಗಿದೆ, ನಿಜಕ್ಕೂ ಶ್ಲಾಘನೀಯ…. ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: